Ad Widget .

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ಬಿಡುಗಡೆ ಮಾಡುವಂತೆ ಡಿ.ಕೆ ಶಿವಕುಮಾರ್​ಗೆ ಕುಟುಂಬಸ್ಥರ ಮನವಿ

ಸಮಗ್ರ ನ್ಯೂಸ್: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾಗದಿದ್ದರೂ 37 ಜನರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕರು, ಸಚಿವರು, ನಾಯಕರು ಆರೋಪಿಸುತ್ತಿದ್ದು, ಇಂದು ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಆರೋಪಿಗಳ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ.

Ad Widget . Ad Widget .

ಹಲಸೂರಿನ RBANMS ಕಾಲೇಜು ಮೈದಾನದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಂಧಿತರ ಕುಟುಂಬಸ್ಥರಿಂದ ಡಿ.ಕೆ ಶಿವಕುಮಾರ್ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಕಾನೂನಿನ ಅಡಿಯಲ್ಲಿ ಏಕಾಏಕಿ ಹೇಳಲು ಆಗುವುದಿಲ್ಲ. ಲೀಗಲ್ ಆಗಿ ಬಿಜೆಪಿ ಸರ್ಕಾರ ಕೆಲವು ಸೆಕ್ಷನ್ ಪ್ರಯೋಗ ಮಾಡಿದ್ದಾರೆ. ಅವರಿಗೆ ಬಹಳ ಅನ್ಯಾಯವಾಗಿದೆ, ಜೈಲಿಂದ ಬಿಡುಗಡೆಯಾಗಲು ಆಗುತ್ತಿಲ್ಲ. ಕಾನೂನಿನ ಅಡಿಯಲ್ಲಿ ನಾವು ಅವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದರು.

Ad Widget . Ad Widget .

ಬಂಧಿತರ ಬಿಡುಗಡೆಗೊಳಿಸುವಂತೆ ನಮ್ಮ ಶಾಸಕರುಗಳು ಹೇಳಿದ್ದಾರೆ. ಚುನಾವಣಾ ಪೂರ್ವದಲ್ಲೂ ಹೇಳಿದ್ದರು. ನಾನು ಮತ್ತೆ ಲೀಗಲ್ ಟೀಂನೊಂದಿಗೆ ಮಾತನಾಡುತ್ತೇನೆ. ಯಾವ ಅಮಾಯಕರಿಗೆ ತೊಂದರೆ ಆಗಬಾರದು ಅನ್ನೋದು ನಮ್ಮ ಉದ್ದೇಶವಾಗಿದೆ. ಯಾರು ಕಾನೂನನ್ನ ಕೈಗೆ ತೆಗೆದುಕೊಂಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ಆದರೆ ಅಮಾಯಕರು ತಗಲಾಕಿಕೊಂಡಿರುವುದು ಇದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅನ್ಯಾಯ ಆದವರಿಗೆ ನ್ಯಾಯ ಕೊಡುವುದು ನಮ್ಮ ಕರ್ತವ್ಯ ಎಂದರು.

Leave a Comment

Your email address will not be published. Required fields are marked *