Ad Widget .

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಗಳು/ ಜನವರಿ 11ಕ್ಕೆ ನೇರ ಸಂದರ್ಶನ

ಸಮಗ್ರ ನ್ಯೂಸ್: 133 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 11ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು.

Ad Widget . Ad Widget .

ಆಟೋ ಮೆಕಾನಿಕ್ 46, ಆಟೋ ಎಲೆಕ್ಟ್ರಿಷಿಯನ್ 28, ಆಟೋ ವೆಲ್ಡರ್ 20, ಆಟೋ ಬಾಡಿ ಫಿಟ್ಟರ್ 20, ಆಟೋ ಪೇಂಟರ್ 10, ಆಟೋ ಮೆಷಿನಿಸ್ಟ್ 9 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಪೂರ್ಣಗೊಳಿಸಿರುವವರು ಸಂದರ್ಶನಕ್ಕೆ ಹಾಜರಾಗಬಹುದು.

Ad Widget . Ad Widget .

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಡಿಸೆಂಬರ್ 31, 2023ಕ್ಕೆ ಕನಿಷ್ಠ 18 ವರ್ಷ – ಗರಿಷ್ಠ 40 ವರ್ಷದೊಳಗಿರಬೇಕು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಮಾನುಸಾರ ಅಭ್ಯರ್ಥಿಗಳಿಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ
ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪ್ರಮಾಣಪತ್ರ, ಮೆರಿಟ್ ಪಟ್ಟಿಯ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ
ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಪ್ರೆಂಟಿಸ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕು. ನಂತರ ಅಗತ್ಯ ದಾಖಲೆಗಳೊಂದಿಗೆ Kalyana Karnataka Road Transport Corporation, Divisional Offie, Raichur Division, Raichur ಈ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ kkrtc.karnataka.gov.in ಸಂಪರ್ಕಿಸಿ

Leave a Comment

Your email address will not be published. Required fields are marked *