Ad Widget .

ಕೊಡಗು:ಹಿಂದುಪರ ಕಾರ್ಯಕರ್ತರನ್ನು ಧಮನಿಸಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪ್ರತಿಭಟನೆ

ಸಮಗ್ರ ನ್ಯೂಸ್: ಹಳೇ ಪ್ರಕರಣಗಳನ್ನು ಕೆದಕಿ ಹಿಂದುಪರ ಕಾರ್ಯಕರ್ತರನ್ನು ಧಮನಿಸಲು ಹೊರಟ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಕೊಡಗು ಜಿಲ್ಲೆಯ ಮಡಿಕೇರಿ ವೀರಾಜಪೇಟೆ ಹಾಗೂ ಕುಶಾಲನಗರ ಡಿ.ವೈ.ಎಸ್.ಪಿ. ಕಛೇರಿ ಮುಂಭಾಗ ಇಂದು(ಜ.6) ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Ad Widget . Ad Widget .

ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಹಿಂದು ಬಾಂದವರು ಮಡಿಕೇರಿ ವೀರಾಜಪೇಟೆ ಹಾಗೂ ಕುಶಾಲನಗರ ಡಿ.ವೈ.ಎಸ್.ಪಿ. ಕಛೇರಿ ಮುಂಭಾಗ ಒಟ್ಟು ಸೇರಿ ಪ್ರತಿಬಟಿಸಿ ನಂತರ ಆಯಾಯ ತಾಲೂಕು ಡಿ.ಎಸ್.ಪಿ ಗಳಿಗೆ ಮನವಿ ಪತ್ರವನ್ನು ಅರ್ಪಿಸಿದರು. ರಾಜ್ಯ ಸರಕಾರದ ಹಿಂದೂ ವಿರೋಧಿ ಅಜೆಂಡಾವನ್ನು ಖಂಡಿಸಿ ಪ್ರತಿಭಟನೆ ನಡೆಸಿ ಪೋಲೀಸ್ ಉಪ ಅಧೀಕ್ಷಕರಿಗೆ ಆಗ್ರಹ ಪತ್ರವನ್ನು ನೀಡಿದರು. ಮೂರು ಕಡೆಗಳಲ್ಲಿ ಕೂಡ ಹೆಚ್ಚಿನ ಪೊಲೀಸ್ ಬಂದೋಬಸ್ತವನ್ನು ಏರ್ಪಡಿಸಲಾಗಿತ್ತು.

Ad Widget . Ad Widget .

Leave a Comment

Your email address will not be published. Required fields are marked *