ಐತಿಹಾಸಿಕ ಗೋಳಗುಮ್ಮಟ ಸ್ಮಾರಕದ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ

ಸಮಗ್ರ ನ್ಯೂಸ್: ಐತಿಹಾಸಿಕ ಗೋಳಗುಮ್ಮಟ ಸ್ಮಾರಕದ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಮತ್ತೊಮ್ಮೆ ರಾಜ್ಯ ಬೆಚ್ಚಿ ಬಿದ್ದಿದೆ.

Ad Widget ... ..

ಕಿಡಿಗೇಡಿಗಳು, ಗೋಳಗುಮ್ಮಟ ಎದುರಿನ ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಮ್ಯೂಜಿಯಂನ ಹಲವು ಜಾಗೆಯಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿದ್ದು, ಟೆರರಿಸ್ಟ್ ಗ್ರೂಪ್ ಹೆಸರಲ್ಲಿ ಇ-ಮೇಲ್ ಮಾಡಲಾಗಿದೆ. ಶುಕ್ರವಾರ ಸಂಜೆ ಇ-ಮೇಲ್ ಗೆ ಬಂದ ಸಂದೇಶ ಗೋಳಗುಮ್ಮಟ ಸಿಬ್ಬಂದಿಗಳು ವೀಕ್ಷಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ತಡರಾತ್ರಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಲಾಗಿದೆ.

Ad Widget

ಯಾವುದೇ ಬಾಂಬ್ ಪತ್ತೆಯಾಗಿಲ್ಲ, ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಪೊಲೀಸರು ಖಚಿತಪಡೆಸಿಕೊಂಡಿದ್ದಾರೆ. ಟೆರರಿಸ್ಟ್ ಹೆಸರಲ್ಲಿ ಬಂದ ಇ- ಮೇಲ್ ಸಂದೇಶದ ಬಗ್ಗೆ ಗೋಳಗುಮ್ಮಟ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Leave a Comment

Your email address will not be published. Required fields are marked *