Ad Widget .

ಕೆಲಸಗಾರರು ಬೇಕಾಗಿದ್ದಾರೆ ಎಂದು ರಸ್ತೆ ಬದಿ ಬೋರ್ಡ್ ಹಿಡಿದು ನಿಂತ ಕೊಡಗಿನ ಕಾಫಿ ಬೆಳೆಗಾರ

ಸಮಗ್ರ ನ್ಯೂಸ್: ಕಾಫಿ ಕೀಳಲು ಕಾರ್ಮಿಕರಿಗೆ ಭಾರೀ ಬೇಡಿಕೆ. ಅಧಿಕ ಸಂಬಳ ನೀಡಿದರು ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಕಾಫಿ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಂತೆ ವ್ಯಕ್ತಿಯೊಬ್ಬರು ಕಾಫಿ ಕೀಳಲು ಕಾರ್ಮಿಕರಿಲ್ಲದೆ ಏನು ಮಾಡಿದ್ದಾರೆ ಗೊತ್ತಾ?

Ad Widget . Ad Widget .

ಇದು ಕೊಡಗಿನಲ್ಲಿ ಬೆಳಕಿಗೆ ಬಂದ ಘಟನೆ. ಕಾಫಿ ಬೆಳಗಾರರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದೆ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಬೋರ್ಡ್​​ ಹಿಡಿದು ನಿಂತಿದ್ದಾರೆ. ಬೋರ್ಡ್​ನಲ್ಲಿ ‘ಕೆಲಸಗಾರರು ಬೇಕು’ ಎಂದು ಬರೆದುಕೊಂಡಿದ್ದಾರೆ.

Ad Widget . Ad Widget .

ಅಷ್ಟು ಮಾತ್ರವಲ್ಲ, ಮಹಿಳೆಯರಿಗೆ ದಿನಕ್ಕೆ 415 ರೂಪಾಯಿ ನೀಡಲಾಗುತ್ತದೆ ಎಂದು ಬರೆದಿದ್ದಾರೆ. ಇನ್ನು ಪುರುಷರಿಗೆ 615 ದಿನ ಸಂಬಳ ನೀಡುವುದಾಗಿ ಬರೆದುಕೊಂಡಿದ್ದಾರೆ. ಇದಲ್ಲದೆ, ನಿರ್ದಿಷ್ಟ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಎಕ್ಸ್ಟಾ ಸಂಬಳ ನೀಡುವುದಾಗಿ ಹೇಳಿದ್ದಾರೆ.

Leave a Comment

Your email address will not be published. Required fields are marked *