Ad Widget .

ಬಿಇಎಲ್‌ನಿಂದ ಅಪ್ರೆಂಟಿಸ್ ಹುದ್ದೆಗೆ ಕರೆ| ಜನವರಿ 10ರಂದು ನೇರ ಸಂದರ್ಶನಕ್ಕೆ ಆಹ್ವಾನ

ಸಮಗ್ರ ನ್ಯೂಸ್: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ, ಸಾರ್ವಜನಿಕ ರಂಗದ ಸಂಸ್ಥೆಯಾಗಿದ್ದು, ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ 1954ರಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಸ್ಥೆಯು ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 10ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು.

Ad Widget . Ad Widget .

*ಹುದ್ದೆಗಳ ವಿವರ*
ಗ್ರ್ಯಾಜುಯೆಟ್ ಅಪ್ರೆಂಟಿಸ್ 63
ಟೆಕ್ನಿಷಿಯನ್(ಡಿಪ್ಲೊಮಾ)ಅಪ್ರೆಂಟಿಸ್ 10
ಬಿ.ಕಾಂ ಅಪ್ರೆಂಟಿಸ್ 08

Ad Widget . Ad Widget .

ವಿದ್ಯಾರ್ಹತೆ
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗ್ರ್ಯಾಜುಯೆಟ್ ಅಪ್ರೆಂಟಿಸ್ ಹುದ್ದೆಗೆ ಗ್ರ್ಯಾಜುಯೆಟ್ ಇನ್ ಇಂಜಿನಿಯರಿಂಗ್, ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಡಿಪ್ಲೊಮಾ, ಬಿ.ಕಾಮ್ ಅಪ್ರೆಂಟಿಸ್ ಹುದ್ದೆಗೆ ಬಿ.ಕಾಮ್ ಪೂರ್ಣಗೊಳಿರಬೇಕು.

ವಯೋಮಿತಿ, ವೇತನ
ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ. ಗ್ರ್ಯಾಜುಯೆಟ್ ಅಪ್ರೆಂಟಿಸ್ ಹುದ್ದೆಗೆ 17500ರೂ., ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ 12500ರೂ., ಬಿ.ಕಾಮ್ ಅಪ್ರೆಂಟಿಸ್ ಹುದ್ದೆಗೆ 10500ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ
ಮೆರಿಟ್ ಲಿಸ್ಟ್ ಮತ್ತು ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) Bharat Electronics Limited, Nandambakkam, Chennai ಈ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನ ನಡೆಯುವ ದಿನ: 10-01-2024
ಹೆಚ್ಚಿನ ಮಾಹಿತಿಗಾಗಿ: bel-india.in

Leave a Comment

Your email address will not be published. Required fields are marked *