Ad Widget .

ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಜೆಸಿಐ ಭಾರತದ ವಲಯ 14ರಲ್ಲಿರುವ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 13ನೇ ಅಧ್ಯಕ್ಷರಾಗಿ ಬಲ್ಯಮಂಡೂರು ಗ್ರಾಮದ ಪೆಮ್ಮಂಡ ಮಂಜು ಬೋಪಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Ad Widget . Ad Widget .

2023ನೇ ಸಾಲಿನ ಘಟಕ ಅಧ್ಯಕ್ಷರಾಗಿರುವ ಮುಕ್ಕಾಟಿರ ನೀತ್ ಅಯ್ಯಪ್ಪರವರ ಅಧ್ಯಕ್ಷತೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಘಟಕದ ನಿಕಟಪೂರ್ವ ಅಧ್ಯಕ್ಷ ಅಪ್ಪಂಡೆರಂಡ ಪಿ. ದಿನೇಶ್ ಅವರ ಸಮ್ಮುಖದಲ್ಲಿ ನಡೆದ ಘಟಕದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು, 2024ನೇ ಸಾಲಿಗೆ ನೂತನ ಘಟಕಾಡಳಿತ ಮಂಡಳಿ ಪದಾಧಿಕಾರಿಗಳನ್ನು ಅವಿರೋಧವಾಗಿ ಚುನಾಯಿಸಲಾಯಿತು.

Ad Widget . Ad Widget .

ಕೋಶಾಧಿಕಾರಿಯಾಗಿ ಬೊಜ್ಜಂಗಡ ಎಂ. ಚಂಗಪ್ಪ ಹಾಗೂ ಘಟಕದ ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಚೆಟ್ಟೋಳಿರ ಶರತ್ ಸೋಮಣ್ಣ ರವರನ್ನು ಸಭೆ ಅವಿರೋಧವಾಗಿ ಪುನರಾಯ್ಕೆಗೊಳಿಸಿತು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಘಟಕಾಡಳಿತ ಮಂಡಳಿಯ ಉಪಾಧ್ಯಕ್ಷರಾಗಿ
1)ಹೆಚ್.ಆರ್. ಸತೀಶ್ (ನಿರ್ವಹಣೆ),
2)ಟಿ.ಜೆ. ಆಂಟೋನಿ (ತರಬೇತಿ),
3) ಅಣ್ಣಪ್ಪ ಎಲ್.ಎನ್ (ಅಭಿವೃದ್ಧಿ ಮತ್ತು ಬೆಳವಣಿಗೆ),
4) ಕೆ.ಯು. ತನು ತಿಮ್ಮಯ್ಯ (ಕಾರ್ಯಕ್ರಮ),
5)ಸಿ. ಬಿ. ಸೋಮಣ್ಣ (ವ್ಯವಹಾರ),
6) ಟಿ. ಜಿ ಗಿರೀಶ್ (Pr & ಮಾರ್ಕೆಟಿಂಗ್)
7) ಜಂಟಿ ಕಾರ್ಯದರ್ಶಿಯಾಗಿ ಟಿ.ಎಸ್. ಸುಜಿತ್,

ನಿರ್ದೇಶಕರಾಗಿ
1)ಎಂ.ಪಿ. ಬೋಪಣ್ಣ
2)ಪಿ.ಬಿ.ಗೌತಮ್
3)ಕೆ.ಎಲ್.ಅಕ್ಷಯ್
4)ಜಿ.ಪಿ. ಸ್ವಾಮಿ
5)ಟಿ.ಜಿ.ಲಿಖಿತ್ ಕುಮಾರ್
ಅವರನ್ನು ಆಯ್ಕೆಗೊಳಿಸಲಾಯಿತು. ಘಟಕದ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಅಪ್ಪಂಡೆರಂಡ ಡಿ. ಚರಣ್ ಚೆಂಗಪ್ಪ ಅವರನ್ನು ಇದೇ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಪೂರ್ವ ಅಧ್ಯಕ್ಷರು, ಎಸ್ಎಂಎ ಸದಸ್ಯರು ಹಾಗೂ ಘಟಕದ ಸಾರ್ವ ಸದಸ್ಯರು ಹಾಜರಿದ್ದರು.

Leave a Comment

Your email address will not be published. Required fields are marked *