Ad Widget .

ಹಾಸನ: ಒಂಟಿ ಸಲಗ ದಾಳಿ| ಕೂಲಿ ಕಾರ್ಮಿಕ ಬಲಿ

ಸಮಗ್ರ ನ್ಯೂಸ್: ಒಂಟಿ ಸಲಗ ದಾಳಿಗೆ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಜ. 4ರಂದು ನಡೆದಿದೆ.

Ad Widget . Ad Widget .

ಮತ್ತಾವರ ಗ್ರಾಮದ ವಸಂತ ಮೃತಪಟ್ಟಿದ್ದು, ಅವರು ಸಂಜೆ ಕೆಲಸ ಮುಗಿಸಿ ತನ್ನ ಆಪ್ತನ ಜೊತೆಗೆ ವಾಪಸ್ ಮರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿದ ಒಂಟಿ ಸಲಗ ವಸಂತ್ ಮೇಲೆ ದಾಳಿ ಮಾಡಿದೆ. ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ.

Ad Widget . Ad Widget .

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ಮುಂದಾಗಿದ್ದು, ಮನುಷ್ಯನ ಬಲಿಯಾದ ಜೀವಕ್ಕೆ 15 ಲಕ್ಷ ಬೆಲೆ ಕಟ್ಟುತ್ತೀರಿ. ಓರ್ವ ವ್ಯಕ್ತಿ 15ಲಕ್ಷ ವಾರ್ಷಿಕವಾಗಿ ದುಡಿದು ಸಂಪಾದಿಸುತ್ತಾನೆ. ಅಂತಹವರ ಜೀವವೇ ಹೋದರೂ ಸರ್ಕಾರ ಗಮನ ಹರಿಸಿಲ್ಲ. ಹಾಗಾಗಿಯೇ ಶವ ಇಲ್ಲೇ ಇಟ್ಟು ಹೋರಾಟ ಮಾಡುತ್ತೇವೆ. ಬೆಳಿಗ್ಗೆಯೇ ಅಧಿಕಾರಿಗಳು ಬರಲಿ, ನಮ್ಮ ಜೀವ ಹಿಂಡುತ್ತಿರೊ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜನರನ್ನು ರಕ್ಷಿಸಲು ಆನೆಗಳನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ಮಾತ್ರವಲ್ಲದೇ ಇಲ್ಲದಿದ್ದರೆ ಊರು ಬಿಟ್ಟು ಹೊರ ಹೋಗಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *