Ad Widget .

“ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ”

ಸಮಗ್ರ ನ್ಯೂಸ್:ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ ಎಂದು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Ad Widget . Ad Widget .

ವಿಜಯಪುರ ದ ಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀ ಅವರು ಭಾರತದ ಮೇಲೆ ಎಷ್ಟೋ ಜನ ಧಾಳಿ ಮಾಡಿದರೂ ಸನಾತನ ಧರ್ಮವನ್ನು ನಾಶಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ ಯಾಕೆಂದರೆ ಈ ಧರ್ಮಕ್ಕೆ ಅದರದ್ದೇ ಆದ ವೈಶಿಷ್ಟ ಇದೆ ಎಂದು ವಿಶ್ಲೇಷಕರು ಹೇಳಿದ ಮಾತು ನಿಜ .ರಾಮ ಮಂದಿರ ಒಡೆಯುತ್ತೇವೆ ಎಂಬ ಮಾತು ಮಕ್ಕಳ ಬಾಯಲ್ಲಿ ಬರುತ್ತಿವೆ. ಆ ಸಮಾಜದ ಮಕ್ಕಳ ಪೋಷಕರು ಇದಕ್ಕೆ ತಡೆ ಹಾಕಬೇಕು ಇದು ಸರಿಯಲ್ಲಾ. ದೇಶದಲ್ಲಿ ಎಲ್ಲ ಸಮಾಜದವರು ಧರ್ಮದವರು ಏಕತೆಯಿಂದ ಇರಬೇಕು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಇರುವವರೆಗೂ ರಾಮ ಮಂದಿರ ಇರತ್ತೆ ಎಂದು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Ad Widget . Ad Widget .

ರಾಮಮಂದಿರ ಉದ್ಘಾಟನೆಗೆ ಎಲ್​ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಆಮಂತ್ರಣವಿಲ್ಲಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಕರೆಯಲಾಗಿದ್ದು ಜನಸಂದಣಿಯಲ್ಲಿ ಗೊಂದಲ ಆಗೋದು ಬೇಡಾ ಎಂದು ಹೇಳಿದ್ದಾರೆ.

ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗಲ್ಲ. ಪೂಜೆ, ಅಭಿಷೇಕ, ಯಜ್ಞ-ಯಾಗ ಎಲ್ಲ ದೇವಸ್ಥಾನಗಳಲ್ಲಿ ನಡೆಯಬೇಕು. ಹಾಗಾಗಿ ರಾಮಭಕ್ತರು ತಮ್ಮ ತಮ್ಮ ಊರುಗಳಲ್ಲಿ ಉತ್ಸವ ಆಚರಣೆ ಮಾಡಬೇಕೆಂದು ಹೇಳಿದ್ದಾರೆ.ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸನ್ನಿಹಿತವಾಗಿದೆ, ದೇಶ ವಿದೇಶದ ಜನರು ಕೈಜೋಡಿಸಿದ್ದಾರೆ. ಮಂದಿರದ ಉದ್ಘಾಟನೆ ಮಂದಿರದಲ್ಲೇ ಆಗಬೇಕು ಆದ್ದರಿಂದ ಸೀಮಿತ ಜನರಿಗೆ ಮಾತ್ರ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಆಮಂತ್ರಣ ನೀಡಿದರೂ ಬರಲ್ಲಾ ಎನ್ನುವವರಿಗೆ ಯಾವುದೇ ಬಲವಂತವಿಲ್ಲ,ಸರ್ವೋಚ್ಚ ನ್ಯಾಯಾಲಯದ‌ ತೀರ್ಪಿನ ಮೇಲೂ ಸಂಸದ ಇಂಥ ಮಾತನಾಡಬಾರದು. ಸಂವಿಧಾನ ಬಾಹೀರ ಕೆಲಸವನ್ನು ಯಾರೂ ಮಾಡಬಾರದು. ಅದರಲ್ಲೂ ಜವಾಬ್ದಾರಿಯ ಸ್ಥಾನದಲ್ಲಿರುವವರು ಹೇಳಬಾರದು. ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಉದ್ಘಾಟನೆಗೆ ಆಹ್ವಾನವಿಲ್ಲಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವ ಸಿಎಂಗೆ ಆಹ್ವಾನ ನೀಡಲಾಗಿದೆ, ಯಾವ ಸಿಎಂಗೂ ಕರೆದಿಲ್ಲಾ. ಇಂತಹ ಮಾತುಗಳು ಸಲ್ಲದು ಎಂದಿದ್ದಾರೆ.

Leave a Comment

Your email address will not be published. Required fields are marked *