ಸಮಗ್ರ ನ್ಯೂಸ್:ಜ.12ನೇ ಶುಕ್ರವಾರ ಮೊದಲ್ಗೊಂಡು ಜ. 14ನೇ ಭಾನುವಾರದ ತನಕ ಶ್ರೀ ಕ್ಷೇತ್ರ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಪೂರ್ವ ಸಂಪ್ರದಾಯದಂತೆ ಜರಗಲಿರುವುದು.

ಜ.12ನೇ ಶುಕ್ರವಾರ ಬಲಿವಾಡು ಶೇಖರಣೆ, ಹಸಿರುವಾಣಿ ಹೊರಕಾಣಿಕೆ ಸಂಗ್ರಹಿಸುವುದು. ಸಂಜೆ ಗಂಟೆ 6.00ರಿಂದ ಉಗ್ರಾಣ ತುಂಬಿಸುವುದು, ರಾತ್ರಿ ಗಂಟೆ 7.00ರಿಂದ ಬಿರಮೂಲೆ ರಾಮ ಭಟ್, ನಾರಾಯಣ ಭಟ್, ಪಟ್ಟೆ ಕೃಷ್ಣ ರೈ ಕುದ್ಕಾಡಿ ಅವರ ಸಾರಥ್ಯದಲ್ಲಿ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಸಂಜೆ 6 ಗಂಟೆಯಿಂದ 9ರ ತನಕ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಪಟ್ಟೆ ಹಾಗೂ ಪ್ರಿಯಾದರ್ಶಿನಿ ವಿದ್ಯಾಸಂಸ್ಥೆ, ಬೆಟ್ಟಂಪಾಡಿ ಇದರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ರಾತ್ರಿ ಗಂಟೆ 9.00ರಿಂದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಮಂಗಲ ಇಲ್ಲಿನ ಬಾಲಕಲಾವಿದರಿಂದ ಯಕ್ಷಗಾನ ‘ಸುದರ್ಶನ ವಿಜಯ’ (ಪ್ರಾಯೋಜಕರು: ಶ್ರೀ ಕೃಷ್ಣ ಯುವಕ ಮಂಡಲ ಪಟ್ಟೆ ಮತ್ತು ಭಕ್ತವೃಂದ) ನಡೆಯಲಿದೆ. ರಾತ್ರಿ ಗಂಟೆ 8.00ರಿಂದ ಮಹಾಪೂಜೆ, ಮಹಾಗಣಪತಿ ಪೂಜೆ, ಅತ್ತಾಳಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
ಜ.13ರಂದು ಬೆಳಿಗ್ಗೆ ಗಂಟೆ 8.00ರಿಂದ ಮಹಾಗಣಪತಿ ಹವನ, ನವಕಾಭಿಷೇಕ, ಶ್ರೀ ಕ್ಷೇತ್ರದ ಮೂಲಸ್ಥಾನ ಪವಿತ್ರ ತೀರ್ಥದ ಕಲ್ಲಿನಿಂದ ಶಂಖ, ಜಾಗಟೆ, ವಾದ್ಯಮೇಳದೊಂದಿಗೆ ತೀರ್ಥ ತರಲು ಹೊರಡುವುದು. ಬೆಳಿಗ್ಗೆ ಗಂಟೆ 8ರಿಂದ 10ರ ತನಕ ಭಜನಾ ಕಾರ್ಯಕ್ರಮ, 10 ರಿಂದ 11.30ರ ತನಕ ಮಧುಮಿತಾ ಪ್ರವೀಣ್ ಕುಮಾರ್ ಪಡುಮಲೆ ಇವರಿಂದ “ವೀಣಾವಾದನ”. ಬೆಳಿಗ್ಗೆ ಗಂಟೆ 11.30ರಿಂದ ತುಲಾಭಾರ ಸೇವೆ, ಮಹಾಪೂಜೆ, ಬಲಿಹೊರಡುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ರಿಂದ 7.00ರ ತನಕ ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ “ತಾಯಂಬಕ”. ರಾತ್ರಿ ಗಂಟೆ 7.00ರಿಂದ ಶ್ರೀ ದೇವರ ಉತ್ಸವ ಬಲಿ, ನೃತ್ಯ ಬಲಿ, ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಶ್ರೀ ಭೂತ ಬಲಿ ನಡೆಯಲಿದೆ.
ಜ. 14ರಂದು ಬೆಳಿಗ್ಗೆ ಗಂಟೆ 9.00ರಿಂದ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ. ಮಂತ್ರಾಕ್ಷತೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8.00ರಿಂದ ಶ್ರೀ ದೇವರಿಗೆ ರಂಗಪೂಜೆ ಅನ್ನ ಪ್ರಸಾದ ನಡೆಯಲಿದೆ. ಸಂಜೆ ಗಂಟೆ 6.00ರಿಂದ 12.00ರ ತನಕ ಶ್ರೀ ಕ್ಷೇತ್ರದ ಭಕ್ತವೃಂದ ಮತ್ತು ಕರಸೇವಕರ ಪ್ರಾಯೋಜಕತ್ವದಲ್ಲಿ ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ಮಕರಾಕ್ಷ. ಪುರುಷಾಮೃಗ- ಮೈಂದದಿವಿದ”.