Ad Widget .

ಕಾರವಾರ: ರೈಲಿನಲ್ಲಿ ಮಲಗಿದ್ದ ಮಹಿಳೆಯ ಮುಂದೆ ಕಾಮಚೇಷ್ಟೆ| ವಿಕೃತಿ ಮೆರೆದಾತನ‌ ಬೆಂಡೆತ್ತಿದ ರೈಲ್ವೆ ಪೊಲೀಸ್

ಸಮಗ್ರ ನ್ಯೂಸ್: ರೈಲಿನಲ್ಲಿ ಮಹಿಳೆಯ ಮುಂದೆ ಲೈಂಗಿಕ ಚೇಷ್ಟೆಗಳನ್ನು ನಡೆಸಿ ಹಸ್ತಮೈಥುನ ಮಾಡುತ್ತಿದ್ದ ಯುವಕನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮಂಗಳವಾರ ಪೂರ್ಣಾ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ಈ ಅಹಿತಕರ ಘಟನೆ ನಡೆದಿದೆ. ಮಹಿಳೆ ತನ್ನ ಸ್ನೇಹಿತರೊಂದಿಗೆ ಕೇರಳದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದರು.

Ad Widget . Ad Widget .

ರೈಲು ಗೋಕರ್ಣ ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ. 42 ವರ್ಷದ ವ್ಯಕ್ತಿಯೊಬ್ಬ ಎದುರುಗಡೆ ಮಲಗಿದ್ದ 22 ವರ್ಷದ ಕೇರಳದ ಮಹಿಳೆಯ ಮುಂದೆ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಸ್ಲೀಪರ್ ಕೋಚ್‌ನಲ್ಲಿ ಮಲಗಿದ್ದ ಮಹಿಳೆಯ ಮುಂದೆ ಕುಳಿತು ಯುವಕ ಪ್ಯಾಂಟಿನ ಸಿಪ್ ತೆರೆದು ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಈ ಕುರಿತು ಮಹಿಳೆ ಮತ್ತು ಆಕೆಯ ಸ್ನೇಹಿತರು ರೈಲ್ವೆ ತುರ್ತು ಸಂಖ್ಯೆಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಮುಂದಿನ ಠಾಣೆಗೆ ಬರುವಷ್ಟರಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತುರ್ತು ವಿಭಾಗ ಮಹಿಳೆಗೆ ಮಾಹಿತಿ ನೀಡಿದೆ. ಅಷ್ಟರಲ್ಲಿ ರೈಲು ಮಾರ್ಗೋ ರೈಲು ನಿಲ್ದಾಣ ತಲುಪಿತ್ತು. ನಿಲ್ದಾಣದಲ್ಲಿ ಕಾದು ಕುಳಿತಿದ್ದ ಗೋವಾ ಪೊಲೀಸರ ಕೊಂಕಣ ರೈಲ್ವೆ ಘಟಕ ಆರೋಪಿ ಯುವಕನನ್ನು ಬಂಧಿಸಿದೆ.

Leave a Comment

Your email address will not be published. Required fields are marked *