Ad Widget .

ಕುದುರೆ ಏರಿ ಹೊರಟ ಝೊಮ್ಯಾಟೊ ಡೆಲಿವರಿ ಬಾಯ್…

ಸಮಗ್ರ ನ್ಯೂಸ್: ಹೈದರಾಬಾದ್​ನಲ್ಲಿ ಝೊಮ್ಯಾಟೊ ಡೆಲಿವರಿ ಏಜೆಂಟ್​ ಒಬ್ಬರು ಕುದುರೆ ಏರಿ ಆಹಾರ ಡೆಲಿವರಿ ಮಾಡಲು ಹೊರಟಿರೊ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಈ ಡೆಲಿವರಿ ಬಾಯ್ ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ವಾಹನಗಳ ನಡುವೆ ಕುದುರೆ ಮೇಲೆ ಪಾರ್ಸೆಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

Ad Widget . Ad Widget .

ಹಿಟ್​ ಆ್ಯಂಡ್​ ರನ್​ ಕಾನೂನು ಹಿಂಪಡೆಯುವ ಕುರಿತು ಟ್ರಕ್​, ಬಸ್​ ಚಾಲಕರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಈ ನಡುವೆ ಪೆಟ್ರೋಲ್​ ಬಂಕ್​ಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಮೂರು ಗಂಟೆಗಳ ಕಾಲ ಪೆಟ್ರೋಲ್​ ಬಂಕ್​ನಲ್ಲಿ ನಿಂತಿದ್ದೆ, ಬಳಿಕ ತಮ್ಮ ಬೈಕ್​ ಅನ್ನು ಪೆಟ್ರೋಲ್​ ಬಂಕ್ ಬಳಿಯೇ ಇಟ್ಟು ಕುದುರೆ ಬಾಡಿಗೆಗೆ ತೆಗೆದುಕೊಂಡು ಸವಾರಿ ಮುಂದುವರೆಸಿದೆ ಎಂದು ಹೇಳಿದ್ದಾರೆ

Ad Widget . Ad Widget .

ಡೆಲಿವರಿ ಬಾಯ್ ಕುದುರೆಯ ಮೇಲೆ ಆಹಾರವನ್ನು ತಲುಪಿಸಲು ಇಂಪೀರಿಯಲ್ ಹೋಟೆಲ್​ ಬಳಿಯ ಚಂಚಲಗುಡಕ್ಕೆ ಬಂದಿದ್ದಾರೆ. ಟ್ರಕ್ ಡ್ರೈವರ್‌ಗಳ ಮುಷ್ಕರದಿಂದಾಗಿ ಪೆಟ್ರೋಲ್ ಕೊರತೆ ಉಂಟಾಗಿದ್ದು, ಯುವಕನಿಗೆ ಕುದುರೆಯ ಮೇಲೆ ಆಹಾರವನ್ನು ತಲುಪಿಸುವುದು ಅನಿವಾರ್ಯವಾಗಿತ್ತು ಎಂದು ಯುವಕ ಹೇಳಿದ್ದಾನೆ.

Leave a Comment

Your email address will not be published. Required fields are marked *