Ad Widget .

ನಮ್ಮದು ಒಕ್ಕೂಟ ವ್ಯವಸ್ಥೆಯ ಸರಕಾರಗಳು ಇರುವುದು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ: ಎಂ ವೆಂಕಪ್ಪ ಗೌಡ

ಸಮಗ್ರ ನ್ಯೂಸ್: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಜ. 2ರಂದು ಸುಳ್ಯ ನಗರ ಪಂಚಾಯತ್ ನಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡರು ಈ ಯಾತ್ರೆ ಒಂದು ಒಳ್ಳೆಯ ಕಾರ್ಯಕ್ರಮ ಆದರೆ, ಕೇಂದ್ರ ಮತ್ತು ರಾಜ್ಯ ಎರಡೂ ಸರಕಾರಗಳ ಯೋಜನೆಯನ್ನು ಸಹ ಜನತೆಗೆ ತಲುಪಿಸಬೇಕು. ಕೇವಲ ಕೇಂದ್ರ ಸರಕಾರದ ಯೋಜನೆ ಎಂದರೆ ತಪ್ಪಾಗುತ್ತದೆ ಎಂದು ಹೇಳಿದರು.

Ad Widget . Ad Widget .

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಫಸಲ್ ಭೀಮಾ, ಜಲಜೀವನ್ ಮಿಷನ್ ಮುಂತಾದ ಎಲ್ಲಾ ಯೋಜನೆಗಳಿಗೂ ಕೇಂದ್ರ ಸರಕಾರ ಶೇ.50 ಮತ್ತು ರಾಜ್ಯ ಸರಕಾರ ಶೇ.50ರಷ್ಟು ಅನುದಾನ ಒದಗಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಇರುವ ನಿಯಮ. ಆದ್ದರಿಂದ ಸರಕಾರಗಳ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಕೇವಲ ಕೇಂದ್ರ ಸರಕಾರದ ಕಾರ್ಯಕ್ರಮ ಎಂದು ಬಿಂಬಿಸುವುದು ಜನತೆಗೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ. ಜನ್ ಧನ್ ಯೋಜನೆಯ ಬ್ಯಾಂಕ್ ಅಕೌಂಟ್ ಓಪನ್ ಮಾಡಿಸಿ ಅದು ಈಗ ಕೆಲವರದ್ದು ಚಾಲ್ತಿಯಲ್ಲಿಲ್ಲದೇ ಖಾತೆ ನಿಶ್ಕ್ರಿಯ ಗೊಂಡಿದೆ. ಇದರಿಂದ ಗ್ಯಾರಂಟಿ ಯೋಜನೆಗಳ ಸಹಾಯಧನ ಬೀಳದೆ ಕೆಲವರು ವಂಚಿತರಾಗುತ್ತಿದ್ದಾರೆ. ಇದನ್ನು ಬ್ಯಾಂಕ್ ಅಧಿಕಾರಿಗಳು ಸರಿಪಡಿಸಬೇಕು ಎಂದು ಅವರು ಹೇಳಿದರು.

ನಂತರ ಮಾತನಾಡಿದ ಉದ್ಯಮಿ ಕಲ್ಪತರು ಶಿವರಾಮರು ಹಿಂದಿನ ಕೇಂದ್ರ ಸರಕಾರಗಳು ಇದ್ದಾಗ ದೇಶದಲ್ಲಿ ವಿಪರೀತ ಸಾಲದ ಹೊರೆ ಇತ್ತು, ಮೋದಿ ನೇತೃತ್ವದ ಸರಕಾರ ಬಂದಮೇಲೆ ದೇಶದಲ್ಲಿ ಸಾಲದ ಹೊರೆ ಇಲ್ಲ ಎಂದು ಹೇಳುತ್ತಿದ್ದಾಗ ತಟ್ಟನೆ ಮಧ್ಯ ಪ್ರವೇಶಿಸಿದ ಎಂ.ವೆಂಕಪ್ಪ ಗೌಡರು ಪ್ರಸ್ತುತ ಇರುವ ದೇಶದ ಸಾಲದ ಹೊರೆಯ ಬಗ್ಗೆ ಹೇಳಿದಾಗ ಸಭೆಯಲ್ಲಿದ್ದವರು ಮೌನಕ್ಕೆ ಶರಣಾದರು ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *