Ad Widget .

ಜರ್ಮನ್ ಯುವತಿ ಜೊತೆ ಕುಂದಾಪುರ ಯುವಕನ ಮದುವೆ

ಸಮಗ್ರ ನ್ಯೂಸ್: ಜರ್ಮನ್ ಯುವತಿಯನ್ನು ಕುಂದಾಪುರ ತಾಲೂಕಿನ ಚಂದನ್ ಎಂಬ ಯುವಕ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

Ad Widget . Ad Widget .

ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವರಸ್ಥಾನದಲ್ಲಿ ಇವರ ವಿವಾಹ ನಡೆಯಿತು.

Ad Widget . Ad Widget .

ಅತ್ರಿಯ ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಜರ್ಮನಿಯಲ್ಲಿ ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಚಂದನ್ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬಿಕರೊಂದಿಗೆ ಮಾತುಕತೆ ಮಾಡಿದ್ದು ಎರಡೂ ಕುಟುಂಬಗಳು ಪರಸ್ಪರ ಚರ್ಚಿಸಿ ಮದುವೆಗೆ ಸಮ್ಮತಿಸಿದ್ದರು. ಅದರಂತೆ, ಎರಡೂ ಕಡೆಯ ಬಂಧು-ಮಿತ್ರರು, ಹಿತೈಷಿಗಳ ಶುಭಾಹಾರೈಕೆಯೊಂದಿಗೆ ವಿವಾಹ ನಡೆದಿದೆ.

Leave a Comment

Your email address will not be published. Required fields are marked *