Ad Widget .

ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತದಲ್ಲಿ ಕುಮಾರಪಾದ, ವಾಸುಕಿಗೆ ಪೂಜೆ| ಸಂಪನ್ನಗೊಂಡ ಕುಮಾರ ಯಾತ್ರೆ

ಸಮಗ್ರ ನ್ಯೂಸ್: ಸುಮಾರು 4 ಸಾವಿರ ಅಡಿ ಎತ್ತರವಿರುವ ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನವಾದ ಮಂಗಳವಾರ ಪೂಜೆ ನೆರವೇರಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್‌ ಮುಂಡೋಕಜೆ, ಶೋಭಾ ಗಿರಿಧರ್‌, ದೇವಸ್ಥಾನದ ಸಿಬಂದಿ, ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಅಧಿಕ ಭಕ್ತರು ಕುಕ್ಕೆಯಿಂದ 18 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

Ad Widget . Ad Widget . Ad Widget .

ಕೆಲವು ಭಕ್ತರು ಸೋಮವಾರ ಯಾತ್ರೆ ಆರಂಭಿಸಿ ಗಿರಿಗದ್ದೆ ಮೂಲಕ ಪ್ರಯಾಣಿಸಿ ಮಂಗಳವಾರ ಕುಮಾರಪರ್ವತಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.

Leave a Comment

Your email address will not be published. Required fields are marked *