ಸಮಗ್ರ ನ್ಯೂಸ್: ಶಬರಿಮಲೆ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು ಮೊದಲ ಬಾರಿಗೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ತೆಲಂಗಾಣದ ತೃತೀಯಲಿಂಗಿ ಜೋಗಿನಿ ನಿಶಾ ಕ್ರಾಂತಿ ಅವರು ಭಾನುವಾರ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸ್ವಾಮಿಯ ದರ್ಶನ ಪಡೆದರು.
ಆಕೆಯ ಟ್ರಾನ್ಸ್‌ಜೆಂಡರ್ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರ ಆಕೆಗೆ ಭೇಟಿ ನೀಡಲು ಅವಕಾಶ ನೀಡಿತ್ತು. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೃತೀಯಲಿಂಗಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲಾಗಿದೆ.
ಮಂಗಳಮುಖಿ ಯೋಗಿನಿ ನಿಶಾ ಕ್ರಾಂತಿ ಮಾತನಾಡಿ, ಅಯ್ಯಪ್ಪನ ದರ್ಶನಕ್ಕೆಂದು ಶಬರಿಮಲೆ ಬೆಟ್ಟವನ್ನು ಹತ್ತಿದ ನಂತರ ಎಲ್ಲರಂತೆ ತಾನೂ ಹುಟ್ಟಿದ್ದು ಧನ್ಯಳಾಗಿದ್ದೇನೆ ಎಂದ ಅವರು ಅನೇಕ ತೃತೀಯಲಿಂಗಿಗಳು ಅಯ್ಯಪ್ಪ ಮಾಲೆ ಧರಿಸಿ ಭಗವಂತನ ದರ್ಶನ ಪಡೆಯಲು ಬಯಸುತ್ತಾರೆ. ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕೇರಳ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಅದೇ ರೀತಿ ತಿರುವಾಂಕೂರು ದೇವಸ್ವಂ ಮಂಡಳಿಯು ಜನ ದಟ್ಟಣೆಯನ್ನು ಶಬರಿಮಲೆಯಲ್ಲಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜ. 10 ರಿಂದ ಸ್ಪಾಟ್ ಬುಕ್ಕಿಂಗ್ ನಿಲ್ಲಿಸಲಿದೆ.