Ad Widget .

ಸುಳ್ಯ: ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಕಟ್ಟಡದಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಮುರುಳ್ಯದಿಂದ ವರದಿಯಾಗಿದೆ.

Ad Widget . Ad Widget .

ಮೃತನನ್ನು ಬಿಹಾರ ಮೂಲದ ರಾಜ್ ಕುಮಾರ್ ಪಾಸ್ವಾನ್ (32) ಎಂದು ಗುರುತಿಸಲಾಗಿದೆ. ಬಿಹಾರದಿಂದ 10 ದಿನಗಳ ಹಿಂದೆ ಕಟ್ಟಡ ನಿರ್ಮಾಣ,‌ ಸಾರಣೆ ಕೆಲಸಕ್ಕೆಂದು ಬಂದಿದ್ದ ಇಬ್ಬರು ಅಣ್ಣ ತಮ್ಮಂದಿರು ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡಿದ್ದರು. ಧರ್ಮೇಂದ್ರ ಪಾಸ್ವಾನ್ ಎಂಬವರು ಮುರುಳ್ಯದಲ್ಲಿ ಕಟ್ಟಡದ ಕೆಲಸ ಮಾಡಿಕೊಂಡಿದ್ದರು.

Ad Widget . Ad Widget .

ಅಲ್ಲಿಗೆ ಪಂಜದಲ್ಲಿ ಸಾರಣೆ ಕೆಲಸ ಮಾಡಿಕೊಂಡಿದ್ದ ಅವರ ತಮ್ಮ ರಾಜ್ ಕುಮಾರ್ ಪಾಸ್ವಾನ್ ಎಂಬವರು ಜ.1 ರಂದು ರಾತ್ರಿ ಬಂದಿದ್ದರು. ರಾತ್ರಿ ಮಲಗಿದ್ದವರು ಮೂತ್ರ ವಿಸರ್ಜನೆಗೆಂದು ಮೆಟ್ಟಿಲು ಇಳಿದು ಬರುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದು ಅವರನ್ನು ಕೂಡಲೇ ಆಟೋ ರಿಕ್ಷಾದಲ್ಲಿ ಕಾಣಿಯೂರು ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಾಸು ಕರೆದುಕೊಂಡು ಬಂದಿದ್ದರು.

ಜ.2 ರಂದು ಬೆಳಿಗ್ಗೆ ಮತ್ತೆ ಗಾಯಗೊಂಡಿದ್ದ ರಾಜ್ ಕುಮಾರ್ ನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದರೆಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *