ಸಮಗ್ರ ನ್ಯೂಸ್: ಹಲವಾರು ಧಾರಾವಾಹಿಗಳನ್ನು ಮಾಡಿ ಖ್ಯಾತಿ ಹೊಂದಿರುವ ಸಿರಿ ಬಿಗ್ ಬಾಸ್ 10 ನಲ್ಲಿ 12 ವಾರಗಳ ಕಾಲ ಇದ್ದರು. ಕಳೆದ ವಾರ ಬಿಗ್ ಮನೆಯಿಂದ ಹೊರಗೆ ಬಂದಿದ್ದಾರೆ. ಅವರ ಫಸ್ಟ್ ರಿಯಾಕ್ಷನ್ ಏನ್ ಗೊತ್ತಾ? ಇಲ್ಲಿದೆ ನೋಡಿ ಅಪ್ಡೇಟ್.
ಎಸ್, ಕೂಲ್ ಆಗಿಯೇ ಆಡಿ ಎಲ್ಲರ ಮನ ಗೆದ್ದಿದ್ದಾರೆ ಸಿರಿ. ಹಾಗೆಯೇ ಮನೆಯಿಂದ ಹೊರ ಬಂದ ಸಿರಿ ” ಬಿಗ್ ಬಾಸ್ ಗೆ ಮೊದಲು ಹೋಗ್ಲೋ ಬೇಡ್ವೋ ಅಂತ ಯೋಚ್ನೆ ಮಾಡಿದ್ದೆ, ಮತ್ತೆ ಮನಸ್ಸು ಮಾಡಿದೆ, ಅಲ್ಲಿ ಸರಿಯಾಗಿ ಊಟ , ತಿಂಡಿ , ನಿದ್ದೆ ಏನು ಇರೋದಿಲ್ಲ. ಅದರ ಜೊತೆಗೆ ಒಂದಷ್ಟು ಮನಸ್ತಾಪಗಳು ಕೂಡ ಆಗುತ್ತೆ . ಹೊರಗೆ ಬಂದ ಮೇಲೆ ಗೊತ್ತಾಯ್ತು ನೀವು ಎಷ್ಟು ನನ್ನ ಮೇಲೆ ಪ್ರೀತಿ ಇಟ್ಟಿದ್ರಿ ಅಂತ. ನಾನು ಸೋಶಿಯಲ್ ಮೀಡಿಯಾದಲ್ಲಿ ಅಷ್ಟು ಆಕ್ಟಿವ್ ಇಲ್ಲ. ಹೊರ ಪ್ರಪಂಚಕ್ಕಿಂತ ಬಿಗ್ ಬಾಸ್ ಮನೆ ಚೆನ್ನಾಗಿದೆ, ಆದಷ್ಟು ಬೇಗ ಲೈವ್ ಬರ್ತೀನಿ” ಅಂತ ತಿಳಿಸಿದ್ದಾರೆ.
ಹಾಗಾದ್ರೆ ಲೈವ್ ಗೆ ಬಂದ ನಂತರ ಅಲ್ಲಿ ಏನು ಹೇಳ್ತಾರೆ ಅಂತ ಕಾಯಬೇಕು ಅಷ್ಟೇ.