Ad Widget .

ಸುಳ್ಯ: ಜಾಲ್ಸೂರಿನಲೊಂದು ಗಲೀಜು ಶೌಚಾಲಯ| ನೀರಿಲ್ಲದೆ ಸಾರ್ವಜನಿಕರು ಪರದಾಟ | ಕ್ಯಾರೇ ಇಲ್ಲದ ಪಂಚಾಯತ್

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾ.ಪಂ.ಗೆ ಸಂಬಂಧಿಸಿದ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಿರುವುದಲ್ಲದೆ ಶೌಚಾಲಯ ಗಬ್ಬು ನಾರುತ್ತಿದೆ.

Ad Widget . Ad Widget .

ಮಾಣಿ – ಮೈಸೂರು ಹೆದ್ದಾರಿಯಲ್ಲಿ ಸಿಗುವ ಜಾಲ್ಸೂರು ಪೇಟೆಯಲ್ಲಿ ಸಾವಿರಾರು ಮಂದಿ ಓಡಾಡುತ್ತಾರೆ. ಅಲ್ಲದೆ ಕೇರಳ, ತಮಿಳುನಾಡಿಗೆ ಹೋಗುವ ಪ್ರಯಾಣಿಕರು ಇದೇ ಗ್ರಾಮವನ್ನು ಹಾದು ಹೋಗುತ್ತಾರೆ. ಈ ಪೇಟೆಯಲ್ಲಿ ಹತ್ತಾರು ಅಂಗಡಿಗಳಿದ್ದು ಅಲ್ಲಿಯ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗಾಗಿ ಹೆದ್ದಾರಿಯ ಬದಿ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ ಇತ್ತಿಚಿನ ಕೆಲ ದಿನಗಳಿಂದ ಆ ಶೌಚಾಲಯಕ್ಕೆ ಸರಿಯಾಗಿ ನೀರಿನ ವ್ಯವಸ್ಥೆ ಒದಗಿಸದೆ, ಸ್ವಚ್ಛಗೊಳಿಸದೆ ಗಬ್ಬು ನಾರುತ್ತಿದೆ.

Ad Widget . Ad Widget .

ಸಾವಿರಾರು ಮಂದಿ ಶಬರಿಮಲೆ ಯಾತ್ರಿಗರು, ಪ್ರವಾಸಿಗರು ಈ ಭಾಗದಲ್ಲಿ ಬರುವುದರಿಂದ ಈ ರೀತಿಯ ಅವ್ಯವಸ್ಥೆಗಳು ಉಂಟಾಗುತ್ತಿದೆ. ಪಂಚಾಯತ್ ನಿಂದ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Leave a Comment

Your email address will not be published. Required fields are marked *