Ad Widget .

ಸ್ಕೂಲ್ ಬಸ್​ ಡ್ರೈವರ್ ಜೊತೆನೆ ಸುಸೈಡ್ ಮಾಡಿಕೊಂಡ 8ನೇ ತರಗತಿ ವಿದ್ಯಾರ್ಥಿ!

ಸಮಗ್ರ ನ್ಯೂಸ್:ಶಾಲಾ‌ ಬಸ್ ಡ್ರೈವರ್ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಚಿಕ್ಕಮಗಳೂರಿನ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ರೈಲಿಗೆ ತಲೆಕೊಟ್ಟು 38 ವರ್ಷದ ಸಂತೋಷ್‌ ಜತೆ 14 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Ad Widget . Ad Widget .

ಅಪ್ರಾಪ್ತ ಬಾಲಕಿ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಡಿ.31ರಂದು ಸ್ನೇಹಿತರ ಜೊತೆ ನ್ಯೂ ಇಯರ್‌ ಪಾರ್ಟಿಗೆ ಹೋಗ್ತೀನಿ ಎಂದು ಪೋಷಕರಿಗೆ ಹೇಳಿ ಹೋಗಿದ್ದ ಬಾಲಕಿ, ಡ್ರೈವರ್‌ ಸಂತೋಷ್‌ ಜೊತೆ ತೆರಳಿದ್ದಳು. ಅಂದು ಮಧ್ಯರಾತ್ರಿಯೇ ರೈಲಿಗೆ ಸಿಕ್ಕಿ ಇಬ್ಬರು ಸಾವನ್ನಪ್ಪಿದ್ದಾರೆ.

Ad Widget . Ad Widget .

ಕಳೆದ ಮೂರು ವರ್ಷಗಳಿಂದ ಸಂತೋಷ್ ಶಾಲೆಯ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಸಂತೋಷ್ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪೋಷಕರು ಶಾಲೆಯ ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು.

ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮೃತದೇಹಗಳನ್ನ ಇಡಲಾಗಿದೆ. ಅಜ್ಜಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *