Ad Widget .

3 ವರ್ಷದ ಮಗು ಸೇರಿ ಒಂದೇ ಫ್ಯಾಮಿಲಿಯಲ್ಲಿ ಐವರ ಶವಪತ್ತೆ! ನಿಜಕ್ಕೂ ಆಗಿದ್ದೇನು?

ಹೊಸ ವರ್ಷದಂದು ಇಡೀ ದೇಶವೇ ಸಂಭ್ರಮದಲ್ಲಿದ್ದರೆ, ಪಂಜಾಬ್‌ನಲ್ಲಿ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ಜಲಂಧರ್ ಜಿಲ್ಲೆಯ ಆದಂಪುರ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಸಾಲಬಾದೆ ತಾಳಲಾರದೆ ಕುಟುಂಬಸ್ಥರರೆಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget .

ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ 59 ವರ್ಷದ ಮನಮೋಹನ್ ಸಿಂಗ್, ಅವರ ಪತ್ನಿ, ಇಬ್ಬರು ಪುತ್ರಿಯರು ಮತ್ತು ಮೂರು ವರ್ಷದ ಮೊಮ್ಮಗಳು ಸೇರಿದ್ದಾರೆ. ಮನಮೋಹನ್ ಸಿಂಗ್ ಮತ್ತು ಆತನ ಪತ್ನಿ ನೇಣಿಗೆ ಶರಣಾಗಿದ್ದರೆ, ಉಳಿದವರು ಅದೇ ಕೋಣೆಯಲ್ಲಿ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಆರ್ಥಿಕ ಸಮಸ್ಯೆಗಳಿಂದಾಗಿ ಮನಮೋಹನ್ ಸಿಂಗ್ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ ಎಂದು ಜಲಂಧರ್ ಹಿರಿಯ ಅಧೀಕ್ಷಕ ಮುಖವಿಂದರ್ ಸಿಂಗ್ ಭುಲ್ಲರ್ ಹೇಳಿದ್ದಾರೆ.

Ad Widget . Ad Widget .

ಪ್ರಾಥಮಿಕ ತನಿಖೆಯ ಪ್ರಕಾರ ಮನಮೋಹನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬ ಸದಸ್ಯರನ್ನ ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮನಮೋಹನ್ ಹಿರಿಯ ಮಗಳು ತನ್ನ 3 ವರ್ಷದ ಮಗಳೊಂದಿಗೆ ತನ್ನ ತವರಿಗೆ ಬಂದಳು. ಮನಮೋಹನ್ ಪುತ್ರ ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಪತ್ನಿಗೆ ಕರೆ ಮಾಡಿದರೂ ಉತ್ತರ ಸಿಗದಿದ್ದಾಗ ಮನಮೋಹನ್ ಅಳಿಯ ಸರ್ಬಜೀತ್ ಸಿಂಗ್ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪೊಲೀಸರು ಮನೆಯೊಳಗೆ ಪರಿಶೀಲನೆ ನಡೆಸಿದಾಗ ಡೆತ್​ನೋಟ್​ ಪತ್ತೆಯಾಗಿದೆ. ಇದರಲ್ಲಿ ಹಣಕಾಸಿನ ಸಮಸ್ಯೆಯಿಂದ ಬಳಸುತ್ತಿದ್ದು, ಇದರಿಂದ ಬೇಸತ್ತು ಈ ದೃಢ ನಿರ್ಧಾರ ಕೈಗೊಂಡಿರುವುದಾಗಿ ಬರೆದಿದ್ದಾನೆ.

ಮನೆಯೊಳಗೆ ಪ್ರವೇಶಿಸಿದಾಗ ಮೂವರ ಶವ ನೆಲದಲ್ಲಿ ಬಿದ್ದಿದ್ದವು, ಎಲ್ಲರ ಕತ್ತಿನಲ್ಲೂ ಗಾಯದ ಗುರುತು ಪತ್ತೆಯಾಗಿವೆ. ಇದನ್ನೂ ನೋಡಿದರೆ ಸಿಂಗ್ ನೇಣಿಗೆ ಶರಣಾಗುವ ಮುನ್ನ ಮೂವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ ಏಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *