ಸಮಗ್ರ ನ್ಯೂಸ್: ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ಏರಿಕೆಯಾಗಿದೆ. ಅಬಕಾರಿ ಇಲಾಖೆ ಬಡವರ ನೆಚ್ಚಿನ ಕೆಲ ಬ್ರ್ಯಾಂಡ್ಗಳ ದರ ಹೆಚ್ಚಿಸಿದೆ. ಈ ಮೂಲಕ ಮಧ್ಯಮ ವರ್ಗದ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ.
ಈಗಾಗಲೇ 17% ರಷ್ಟು ಓವರ್ ಆಲ್ ಮದ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್ಗಳ ದರ ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ವಾದನಾ ಕಂಪನಿಗಳು ಕ್ವಾಟರ್ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ. ಇಂದಿನಿಂದ ರಾಜ್ಯಾದ್ಯಂತ ಬಡವರ ಈ ಮೂರು ಫೇವರೆಟ್ ಬ್ರ್ಯಾಂಡ್ಗಳ ಮೇಲಿನ ದರ ಹೆಚ್ಚಳವಾಗಿದೆ. ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಮದ್ಯ ತಯಾರಿಕ ಕಂಪನಿಗಳು ಸಂದೇಶ ಕಳುಹಿಸಿವೆ. ರಾಜ್ಯದ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಬ್ರ್ಯಾಂಡ್ಗಳ ದರ ಏರಿಕೆಯಾಗಿದೆ.
ಸದ್ಯ ಮದ್ಯ ಏರಿಕೆ ಹಿನ್ನೆಲೆ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಉತ್ಪಾದನ ವೆಚ್ಚ ಅಧಿಕವಾಗಿದೆ ಎಂದು ಮದ್ಯ ಉತ್ವನ್ನ ಕಂಪನಿಗಳು ಸಮಜಾಯಿಷಿ ನೀಡಿವೆ. ಇನ್ನು ಮತ್ತೊಂದೆಡೆ ಹೀಗೆ ರೇಟ್ ಹೆಚ್ಚಳವಾದ್ರೆ ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಎಂದು ಬಾರ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬ್ರ್ಯಾಂಡ್ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ದುಬಾರಿಯಾಯ್ತು ಬಡವರ ಫೇವರೆಟ್ ಬ್ರ್ಯಾಂಡ್:
ಓಟಿ(180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
ಬಿಪಿ(180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
8PM(180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ ಆಗಿದೆ.