Ad Widget .

ಜ. 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಸಾರ್ವತ್ರಿಕ ರಜೆ ಘೋಷಣೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಸಮಗ್ರ ನ್ಯೂಸ್: ಜ. 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ನಡೆಯಲಿದ್ದು, ರಾಮಲಲ್ಲಾನ ಪ್ರಾಣಪ್ರತಿಷ್ಠೆ ದಿನವಾದ ಅಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.

Ad Widget . Ad Widget .

ಶಾಸಕ ಯಶ್ಪಾಲ್ ಸುವರ್ಣ ಈ ಬಗ್ಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದು, ಜನವರಿ 22ರ ದಿನ ಕೋಟ್ಯಾಂತರ ಭಕ್ತರ ಭಾವನಾತ್ಮಕ, ಐತಿಹಾಸಿಕ ದಿನವಾಗಿದೆ. ದೇಶದಾದ್ಯಂತ ಅಂದು ಪೂಜೆ ಭಜನೆ ಸಂಕೀರ್ತನೆ ನಡೆಯಲಿದೆ. ಕೋಟ್ಯಾಂತರ ಭಕ್ತರು ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ಶ್ರೀರಾಮ ದೇವರ ಸೇವೆಯಲ್ಲಿ ಜನ ಪಾಲ್ಗೊಳ್ಳಲು ಅವಕಾಶ ಸಿಗಬೇಕು ಈ ಹಿನ್ನೆಲೆಯಲ್ಲಿ ಶಾಲಾಕಾಲೇಜು, ಸರಕಾರಿ ಸಂಸ್ಥೆ, ಬ್ಯಾಂಕ್ ಮತ್ತಿತರ ಸಂಸ್ಥೆಗಳಿಗೆ ರಜೆ ನೀಡಬೇಕೆಂದು ಪತ್ರದ ಮೂಲಕ ಶಾಸಕ ಯಶ್ ಪಾಲ್ ಸುವರ್ಣ ಒತ್ತಾಯ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *