December 2023

ಸಾರಿಗೆ ಸಚಿವರ ಮನೆ ಬಳಿಯೇ ರೌಡಿಶೀಟರ್ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ರೌಡಿಶೀಟರ್​ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸದ ಸಮೀಪವೇ ದುಷ್ಕರ್ಮಿಗಳ ಗುಂಪು ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಜೈ ಪ್ರಕಾಶ್ ಅಲಿಯಾಸ್ ಅಪ್ಪಿ ಕೊಲೆಯಾದ ರೌಡಿಶೀಟರ್ ಆಗಿದ್ದು, ಐದಾರು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ರೌಡಿಶೀಟರ್​​ನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಈ ಘಟನೆ ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂಧ್ರದಲ್ಲಿ ನಡೆದಿದ್ದು, ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ […]

ಸಾರಿಗೆ ಸಚಿವರ ಮನೆ ಬಳಿಯೇ ರೌಡಿಶೀಟರ್ ಬರ್ಬರ ಹತ್ಯೆ Read More »

ಕೋಳಿ ಅಂಕದ ಮೇಲೆ ಪೊಲೀಸರ ದಾಳಿ

ಸಮಗ್ರ ನ್ಯೂಸ್: ಜೂಜಾಟ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 12 ಮಂದಿ ಜೂಜುಕೋರರನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಗ್ರಾಮದ ಬಳಿ ನಡೆದಿದೆ. ಕೋಲಾರ ಮೂಲದ ಜೂಜುಕೋರರಿಂದ ಜೂಜು ಅಡ್ಡೆ ತೆರೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಂದು, ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 12 ಮಂದಿ ಜೂಜುಕೋರರಿಂದ 17 ಸಾವಿರ ನಗದು, 8 ಬೈಕ್, 8 ಮೊಬೈಲ್ 3 ಪಂದ್ಯ ಕೋಳಿಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೋಳಿ ಅಂಕದ ಮೇಲೆ ಪೊಲೀಸರ ದಾಳಿ Read More »

ಕೊಡಗಿನಲ್ಲಿ ಪ್ರವಾಸಿಗರದೇ ಕಾರು-ಬಾರು|ಟ್ರಾಫಿಕ್ ಜಾಮ್

ಸಮಗ್ರ ನ್ಯೂಸ್: ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕೊಡಗು ಜಿಲ್ಲೆಗೆ ಕಳೆದ ಬಾರಿಗಿಂತ ಅತ್ಯಧಿಕ ಪ್ರವಾಸಿಗರು ಆಗಮಿಸಿದ್ದಾರೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಈ ಸಂಜೆ ಪ್ರವಾಸಿ ತಾಣವಾದ ರಾಜ ಸೀಟಿನಲ್ಲಿ ಅಸಂಖ್ಯ ಪ್ರವಾಸಿಗರು ನೆರೆದು ಪ್ರಕೃತಿ ಸೌಂದರ್ಯವನ್ನು ಸವಿದರು. ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಡ್ಜು ಹೋಂ ಸ್ಟೇ ರೆಸಾರ್ಟ್ ಗಳೆಲ್ಲ ಭರ್ತಿಯಾಗಿ ಕೆಲವು ಪ್ರವಾಸಿಗರಂತು ವಾಹನ ದಟ್ಟಣೆಯನ್ನು ನೋಡಿ ಯಾಕಪ್ಪ ಈ ಸಮಯದಲ್ಲಿ ನಾವು ಬಂದಿದ್ದೇವೆ ಅನಿಸಿದಂತೂ

ಕೊಡಗಿನಲ್ಲಿ ಪ್ರವಾಸಿಗರದೇ ಕಾರು-ಬಾರು|ಟ್ರಾಫಿಕ್ ಜಾಮ್ Read More »

ನಿಮಗಾಗಿ ಇಲ್ಲಿದೆ ಉತ್ತಮ ಉದ್ಯೋಗವಕಾಶ! ಸ್ಯಾಲರಿ ಪ್ಯಾಕೇಜ್ 13 ಲಕ್ಷ

ಸಮಗ್ರ ಉದ್ಯೋಗ: Indian Institute of Management Bengaluru ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಮ್ಯಾನೇಜಿಂಗ್ ಎಡಿಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಡಿಸೆಂಬರ್ 25, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ವಿದ್ಯಾರ್ಹತೆ:ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು

ನಿಮಗಾಗಿ ಇಲ್ಲಿದೆ ಉತ್ತಮ ಉದ್ಯೋಗವಕಾಶ! ಸ್ಯಾಲರಿ ಪ್ಯಾಕೇಜ್ 13 ಲಕ್ಷ Read More »

IDBI ಬ್ಯಾಂಕ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಉತ್ತಮ ಸಂಬಳ ಕೂಡ ಕೊಡ್ತಾರೆ!

ಸಮಗ್ರ ಉದ್ಯೋಗ: Industrial Development Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 86 ಸ್ಪೆಷಲಿಸ್ಟ್​ ಕೇಡರ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 25, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆಯ ಮಾಹಿತಿ:ಡೆಪ್ಯುಡಿ ಜನರಲ್ ಮ್ಯಾನೇಜರ್- 1ಅಸಿಸ್ಟೆಂಟ್ ಜನರಲ್ ಮ್ಯಾನೇಜರ್-

IDBI ಬ್ಯಾಂಕ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಉತ್ತಮ ಸಂಬಳ ಕೂಡ ಕೊಡ್ತಾರೆ! Read More »

ಸುಬ್ರಹ್ಮಣ್ಯ:ಅಸ್ವಸ್ಥ ಅಪರಿಚಿತ ವ್ಯಕ್ತಿ ಮೃತ್ಯು; ವಾರಿಸುದಾರರ ಪತ್ತೆಗೆ ಮನವಿ

ಸಮಗ್ರ ನ್ಯೂಸ್: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೃತರ ವಾರಿಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಕಡಬ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.21ರಂದು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ರೈಲ್ವೇ ಸ್ಟೇಷನ್ ಬಳಿ ಅಪರಿಚಿತ ವ್ಯಕ್ತಿ ಅಸ್ವಸ್ಥನಾಗಿ ಬಿದ್ದುಕೊಂಡಿದ್ದು, ಆ ವ್ಯಕ್ತಿಯನ್ನು 108 ಆಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.22ರಂದು ಬೆಳಗ್ಗೆ ಆ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದು,ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ

ಸುಬ್ರಹ್ಮಣ್ಯ:ಅಸ್ವಸ್ಥ ಅಪರಿಚಿತ ವ್ಯಕ್ತಿ ಮೃತ್ಯು; ವಾರಿಸುದಾರರ ಪತ್ತೆಗೆ ಮನವಿ Read More »

ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ ಶೈನ್​ ಶೆಟ್ಟಿ, ಶುಭಾ ಪೂಂಜಾ

ಸಮಗ್ರ ನ್ಯೂಸ್: ಬಿಗ್​ ಬಾಸ್​ ಕನ್ನಡ ಸೀಸನ್​ 10 ರಿಯಾಲಿಟಿ ಶೋ ಈಗ ರೋಚಕ ಹಂತವನ್ನು ತಲುಪಿದೆ. ಪ್ರತಿ ಶನಿವಾರ, ಭಾನುವಾರ ಬಂತಂದ್ರೆ ಕಿಚ್ಚ ಸುದೀಪ್​ ಅವರನ್ನು ನೋಡೋದೆ ಅಭಿಮಾನಿಗಳಿಗೆ ಸಂತಸ. ಆದರೆ ಅವರು ಕೆಸಿಸಿ ಪಂದ್ಯಗಳಲ್ಲಿ ಬ್ಯುಸಿ ಇರುವ ಕಾರಣದಿಂದ ಈ ವಾರ ಬಿಗ್​ ಬಾಸ್​ ಶೋ ನಿರೂಪಣೆ ಮಾಡಲು ಸಾಧ್ಯವಾಗಿಲ್ಲ. ಅವರ ಬದಲು ಹಿರಿಯ ನಟಿ ಶ್ರುತಿ ಬಂದು ನಿನ್ನೆ ಎಪಿಸೋಡ್​ ನಡೆಸಿಕೊಟ್ಟರು. ಭಾನುವಾರದ (ಡಿ.24) ಸಂಚಿಕೆಗೆ ಶೈನ್​ ಶೆಟ್ಟಿ ಮತ್ತು ಶುಭಾ ಪೂಂಜಾ

ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ ಶೈನ್​ ಶೆಟ್ಟಿ, ಶುಭಾ ಪೂಂಜಾ Read More »

ಮಂಗಳೂರು: ಏಕಾಏಕಿ ವಿಮಾನ ರದ್ದು| ತಡರಾತ್ರಿ ಪರ್ಯಾಯ ವ್ಯವಸ್ಥೆ

ಸಮಗ್ರ ನ್ಯೂಸ್: ಮಂಗಳೂರಿನಿಂದ ಬೆಂಗಳೂರಿಗೆ ಶನಿವಾರ(ಡಿ.23) ರಾತ್ರಿ 8.15ಕ್ಕೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ರದ್ದಾದ ಕಾರಣ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡರಾತ್ರಿ ವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಿಸಬೇಕಾಯಿತು. ಶನಿವಾರ ರಾತ್ರಿ 8.15ರ ವಿಮಾನ ಎಷ್ಟು ಕಾದರೂ ಬಾರದೆ ಇದ್ದುದರಿಂದ ಏರ್ ಇಂಡಿಯಾ ಕಚೇರಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ತಡರಾತ್ರಿ 2.30ಕ್ಕೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು: ಏಕಾಏಕಿ ವಿಮಾನ ರದ್ದು| ತಡರಾತ್ರಿ ಪರ್ಯಾಯ ವ್ಯವಸ್ಥೆ Read More »

ಹೊಸ ವರ್ಷಕ್ಕೆ ಹೊಸ ಹಾಡಿನೊಂದಿಗೆ ಹುರುಪು ತಂದ ಚಂದನ್ ಶೆಟ್ಟಿ

ಸಮಗ್ರ ನ್ಯೂಸ್: ಚಂದನ್ ಶೆಟ್ಟಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡದ ಜನಪ್ರಿಯ ರ್ಯಾಪರ್​ಗಳಲ್ಲಿ ಇವರು ಪ್ರಮುಖರು. ಕಾಲ-ಕಾಲಕ್ಕೆ ಹೊಸ ಹಾಡುಗಳೊಟ್ಟಿಗೆ ಜನರ ಮುಂದೆ ಬರುತ್ತಲೇ ಇರುತ್ತಾರೆ. ಸಿನಿಮಾಗಳಿಗೂ ಸಂಗೀತ ನೀಡಿರುವ ಚಂದನ್ ಶೆಟ್ಟಿ, ಇದೀಗ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೆಲ್ಲದರ ನಡುವೆ ಹೊಸ ವರ್ಷಕ್ಕೆ ಹೊಸದೊಂದು ರ್ಯಾಪ್ ಹಾಡಿನೊಂದಿಗೆ ಚಂದನ್ ಶೆಟ್ಟಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಟಪಾಂಗುಚಿ ಮಾದರಿಯ ಹಾಡೊಂದನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಂದನ್ ಶೆಟ್ಟಿ

ಹೊಸ ವರ್ಷಕ್ಕೆ ಹೊಸ ಹಾಡಿನೊಂದಿಗೆ ಹುರುಪು ತಂದ ಚಂದನ್ ಶೆಟ್ಟಿ Read More »

ಜನವರಿ 6ಕ್ಕೆ ಕಕ್ಷೆ ತಲುಪಲಿರುವ ಆದಿತ್ಯ- ಎಲ್1

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಂಕ್ಷೆ ಯೋಜನೆ ಸೌರ ಮಿಷನ್ ಆದಿತ್ಯ-ಎಲ್ 1 ಜನವರಿ 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಆದಿತ್ಯ-ಎಲ್ 1 ಜನವರಿ 6ರಂದು ಎಲ್ 1 ಪಾಯಿಂಟ್‌ಗೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ. ಇದು ಯಾವ ಸಮಯಕ್ಕೆ ಅಲ್ಲಿಗೆ ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಇವರು ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ವಿಜ್ಞಾನ ಭಾರತಿ (ವಿಭಾ) ಮತ್ತು ಗುಜರಾತ್ ಸರ್ಕಾರದ

ಜನವರಿ 6ಕ್ಕೆ ಕಕ್ಷೆ ತಲುಪಲಿರುವ ಆದಿತ್ಯ- ಎಲ್1 Read More »