December 2023

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ವ್ಯಕ್ತಿ ಸಜೀವ ದಹನವಾಗಿರುವಂತ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯದ ಬಳಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬರುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಘಟನೆಯಿಂದ ಮಾರ್ಗದುದ್ದಕೂ ಟ್ರಾಫಿಕ್‌ ಜಾಮ್​​ ಉಂಟಾಗಿತ್ತು. ಸದ್ಯ ನೆಲಮಂಗಲ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ Read More »

5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: 2023-24ನೇ ಸಾಲಿನ 5,8 ಮತ್ತಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲಾತ್ಮಕ ಮೌಲ್ಯಂಕನ (ಎಸ್‌ಎ-2)ದ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಂಕನ ಮತ್ತು ಅಂಗೀಕರಣ ಪರಿಷತ್ತು ಪ್ರಕಟಿಸಿದೆ. ಮಾ.11ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ. 5ನೇ ತರಗತಿ:ಮಾ.11ರಿಂದ 14ರವರೆಗೆ ಪರೀಕ್ಷೆ ನಡೆಯಲಿದೆ. ಮಾ.11- ಪ್ರಥಮ ಭಾಷೆ ಕನ್ನಡ, ಮಾ.12 ದ್ವಿತೀಯ ಭಾಷೆ ಇಂಗ್ಲಿಷ್, ಮಾ.13 ಪರಿಷರ ಅಧ್ಯಯನ ಮತ್ತು ಮಾ.14ರಂದು ಗಣಿತ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿವೆ.

5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ Read More »

ಶಬರಿಮಲೆಗೆ ಹರಿದು ಬಂದ ಭಕ್ತಪ್ರವಾಹ/ 200 ಕೋಟಿ ರೂಪಾಯಿ ಆದಾಯ ಸಂಗ್ರಹ

ಸಮಗ್ರ ನ್ಯೂಸ್: ಶಬರಿಮಲೆಗೆ ಭಕ್ತಪ್ರವಾಹ ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೂ ಶಬರಿಮಲೆಯಲ್ಲಿ ಆದಾಯ ಸಂಗ್ರಹ 200 ಕೋಟಿ ರೂಪಾಯಿ ದಾಟಿದೆ. ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ರೂಪಾಯಿ ಆದಾಯ ಬಂದಿದ್ದು, ಇದರಲ್ಲಿ 63 ಕೋಟಿ ರೂ ಕಾಣಿಕೆ ರೂಪದಲ್ಲಿದೆ. 96 ಕೋಟಿ ರೂಪಾಯಿ ಅರವಣ ಪ್ರಸಾದ ಮಾರಾಟದ ಹಣವಾಗಿದೆ ಹಾಗೂ ಅಪ್ಪಂ ಪ್ರಸಾದದಿಂದ 13 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ ಎಂದು ಟಿಡಿಬಿ ಮಾಹಿತಿ ನೀಡಿದೆ. ಮಂಡಲ

ಶಬರಿಮಲೆಗೆ ಹರಿದು ಬಂದ ಭಕ್ತಪ್ರವಾಹ/ 200 ಕೋಟಿ ರೂಪಾಯಿ ಆದಾಯ ಸಂಗ್ರಹ Read More »

ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್/ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ನೂತನ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಬರ್ಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿಸೆಂಬರ್ 31 ರ ಸಂಜೆ 6 ರಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಬರ್ಂಧ ವಿಧಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ಮಾಹಿತಿ ನೀಡಿದ್ದಾರೆ. ನಂದಿ ಬೆಟ್ಟ ಒಂದು ಪುರಾನ ಕಾಲದ ಕೋಟೆಯಾಗಿದ್ದು, ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ

ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್/ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ Read More »

ಮತ್ತೊಂದು ಗ್ಯಾರಂಟಿ ಪಕ್ಕಾ/ ಯುವನಿಧಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರೆಂಟಿ ಯುವನಿಧಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚಾಲನೆ ನೀಡಿದ್ದಾರೆ. ಯುವತಿಯೊಬ್ಬರನ್ನು ಕರೆಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಯುವನಿಧಿ ಲೊಗೋ ಬಿಡುಗಡೆ ಮಾಡಿದ್ದಾರೆ. ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ.

ಮತ್ತೊಂದು ಗ್ಯಾರಂಟಿ ಪಕ್ಕಾ/ ಯುವನಿಧಿಗೆ ಸಿಎಂ ಸಿದ್ದರಾಮಯ್ಯ ಚಾಲನೆ Read More »

ನಾಳೆ ಬಿಜೆಪಿ ಪದಾಧಿಕಾರಿಗಳ ಸಭೆ/ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಸಮಗ್ರ ನ್ಯೂಸ್: ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆ ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಉದ್ಘಾಟನೆ ನಡೆಸಲಿದ್ದಾರೆ. ನಂತರ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಂಬಂಧ ಪ್ರಮುಖರ ಪ್ರಕ್ರಿಯೆಗೆ ಚಾಲನೆ ಕೊಡುವ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು. ಸಭೆಯ ಬಳಿಕ ಪ್ರಮುಖರು ಎಲ್ಲ ಜಿಲ್ಲೆಗಳಿಗೆ ತೆರಳಿ ಜಿಲ್ಲೆಯ ಎಲ್ಲ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ. ಎಲ್ಲರ ಅಭಿಪ್ರಾಯದೊಂದಿಗೆ ಪಕ್ಷವನ್ನು ಮುನ್ನಡೆಸುವ

ನಾಳೆ ಬಿಜೆಪಿ ಪದಾಧಿಕಾರಿಗಳ ಸಭೆ/ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ Read More »

ಮೋದಿ ಯೂಟ್ಯೂಬ್ ಚಾನೆಲ್/ 20 ಮಿಲಿಯನ್ ದಾಟಿದ ಚಂದಾದಾರರು

ಸಮಗ್ರ ನ್ಯೂಸ್: ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ 20 ಮಿಲಿಯನ್ (ಎರಡು ಕೋಟಿ) ಚಂದಾದಾರರನ್ನು ದಾಟಿದ್ದು, ಇಷ್ಟೊಂದು ಫಾಲೋವರ್ಸ್ ಪಡೆದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಮೋದಿ ತಮ್ಮ ಭಾರತೀಯ ಮತ್ತು ಜಾಗತಿಕ ಸಮಕಾಲೀನರ ಯೂಟ್ಯೂಬ್ ಚಾನೆಲ್ ಗಳನ್ನು ಮೀರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯೂಟ್ಯೂಬ್ ಚಾನೆಲ್ ಬಂದ ಬಳಿಕ ದಿನೇ ದಿನೇ ಫಾಲೋವರ್ಸ್ ಹೆಚ್ಚುತ್ತಿದ್ದು, ಇದೀಗ 20 ಮಿಲಿಯನ್ ಚಂದಾದಾರರನ್ನು ದಾಟಿದೆ. ಪ್ರಧಾನಿ ಮೋದಿಯವರ ಚಾನೆಲ್ ಒಟ್ಟು

ಮೋದಿ ಯೂಟ್ಯೂಬ್ ಚಾನೆಲ್/ 20 ಮಿಲಿಯನ್ ದಾಟಿದ ಚಂದಾದಾರರು Read More »

ದರ್ಗಾದ ಮೇಲೆ ದಾಳಿ… 5 ದತ್ತಮಾಲಾಧಾರಿಗಳ ವಿರುದ್ಧ FIR ದಾಖಲು

ಸಮಗ್ರ ನ್ಯೂಸ್: ಚಿಕ್ಕಮಗಳೂರಿನಲ್ಲಿ ದರ್ಗಾದ ಮೇಲೆ ದಾಳಿ ಮಾಡಿದ್ದ ದತ್ತಮಾಲಾಧಾರಿಗಳ ವಿರುದ್ಧ ತಾಲೂಕಿನ ಲಿಂಗದಹಳ್ಳಿ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. 5ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್​​​ ದಾಖಲಿಸಿರುವ ಪೊಲೀಸರು, ಸಿಸಿಟಿವಿ ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಶಾಂತವೇರಿ ಗ್ರಾಮದ ರಸ್ತೆ ಬದಿಯ ದರ್ಗಾ ಮೇಲೆ ಶಿವಮೊಗ್ಗ ನೋಂದಣಿಯ ವಾಹನದಲ್ಲಿದ್ದ ದತ್ತಮಾಲಾಧಾರಿಗಳು ದಾಳಿ ಮಾಡಿದ್ದರು. ದತ್ತಜಯಂತಿ ಕೊನೆಯ ದಿನವಾದ ಇಂದು ದತ್ತ ಪಾದುಕೆ ದರ್ಶನದ ವೇಳೆ ದರ್ಗಾದಲ್ಲಿದ್ದ ಗೋರಿಗಳ ಮೇಲೆ ಗುಂಪೊಂದು ದಾಂದಲೆ ನಡೆಸಿದೆ. ದರ್ಗಾದ

ದರ್ಗಾದ ಮೇಲೆ ದಾಳಿ… 5 ದತ್ತಮಾಲಾಧಾರಿಗಳ ವಿರುದ್ಧ FIR ದಾಖಲು Read More »

ಮಗಳ ಮುಖ ರಿವೀಲ್ ಮಾಡಿದ ಆಲಿಯಾ-ರಣಬೀರ್!

ಸಮಗ್ರ ನ್ಯೂಸ್: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕೊನೆಗೂ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಮಗಳ ಮುಖವನ್ನು ಕ್ರಿಸ್ಮಸ್ ದಿನ ರಿವೀಲ್ ಮಾಡಿದ್ದಾರೆ. ರಾಹಾ ಫೋಟೋಸ್ ಈಗ ಎಲ್ಲೆಡೆ ವೈರಲ್ ದಂಪತಿಗಳು ಡಿಸೆಂಬರ್ 25 ರಂದು ಕುನಾಲ್ ಕಪೂರ್ ಅವರ ಮನೆಯಲ್ಲಿ ಕ್ರಿಸ್ಮಸ್ ಬ್ರಂಚ್‌ಗೆ ಹೋಗುತ್ತಿರುವಾಗ ರಾಹಾ ಅವರ ಪೂರ್ಣ ಮುಖವನ್ನು ಮೊದಲಬಾರಿಗೆ ಬಹಿರಂಗಪಡಿಸಿದರು. ಎಲ್ಲರೂ ರಾಹಾ ಅವರ ವಿಶೇಷವಾದ ಮುದ್ದಾದ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ್ದಾರೆ. ಎರಡು ಜುಟ್ಟು ಕಟ್ಟಿ,

ಮಗಳ ಮುಖ ರಿವೀಲ್ ಮಾಡಿದ ಆಲಿಯಾ-ರಣಬೀರ್! Read More »

ಜಿಲ್ಲಾ ಕೋರ್ಟ್​ನಲ್ಲಿ ಟೈಪಿಸ್ಟ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಆಹ್ವಾನ, ತಿಂಗಳಿಗೆ 52,000 ಸಂಬಳ ಕೊಡ್ತಾರೆ!

ಸಮಗ್ರ ಉದ್ಯೋಗ: Ramanagara District Court ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 22, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಹುದ್ದೆಯ ಮಾಹಿತಿ:ಸ್ಟೆನೋಗ್ರಾಫರ್- 3ಟೈಪಿಸ್ಟ್​- 2ಟೈಪಿಸ್ಟ್​-ಕಾಪಿಯಿಸ್ಟ್​-1 ಶೈಕ್ಷಣಿಕ ಅರ್ಹತೆ:ರಾಮನಗರ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೊಮಾ

ಜಿಲ್ಲಾ ಕೋರ್ಟ್​ನಲ್ಲಿ ಟೈಪಿಸ್ಟ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಆಹ್ವಾನ, ತಿಂಗಳಿಗೆ 52,000 ಸಂಬಳ ಕೊಡ್ತಾರೆ! Read More »