December 2023

ಅಂಚೆ ಕಚೇರಿ ಮಸೂದೆ 2023/ ರಾಜ್ಯಸಭೆಯಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: 125 ವರ್ಷಗಳಷ್ಟು ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಪಡಿಸುವುದರ ಜೊತೆಗೆ ದೇಶದ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಪ್ರಯತ್ನಿಸುವ ‘ಅಂಚೆ ಕಚೇರಿ ಮಸೂದೆ 2023’ ಅನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. ಈ ಮಸೂದೆಯ ಪ್ರಕಾರ, ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಅಧಿಕಾರಿಗೆ ರಾಜ್ಯದ ಭದ್ರತೆ, ಅನ್ಯ ರಾಜ್ಯಗಳೊಂದಿಗಿನ ಸ್ನೇಹ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ತುರ್ತುಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತಾಸಕ್ತಿಯಿಂದ ಯಾವುದೇ ವಸ್ತುವನ್ನು ತಡೆಹಿಡಿಯಲು, ತೆರೆಯಲು […]

ಅಂಚೆ ಕಚೇರಿ ಮಸೂದೆ 2023/ ರಾಜ್ಯಸಭೆಯಲ್ಲಿ ಅಂಗೀಕಾರ Read More »

ವಿಜಯಪುರ: ಮೆಕ್ಕೆಜೋಳ ಮೂಟೆ ಕುಸಿದು ಮೂವರು ಕಾರ್ಮಿಕರ ದುರ್ಮರಣ

ಸಮಗ್ರ ನ್ಯೂಸ್: ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಜೋಳ ಏಕಾಏಕಿ ಕುಸಿದು ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ ಘಟನೆ ವಿಜಯಪುರ ಕೈಗಾರಿಕಾ ಪ್ರದೇಶದ ರಾಜಗುರು ಇಂಡಸ್ಟ್ರಿಸ್ ನಲ್ಲಿ ಸೋಮವಾರ(ಡಿ.4) ಸಂಜೆ ನಡೆದಿದೆ. ಮೃತಪಟ್ಟವರನ್ನು ರಾಜೇಶ್ ಮುಖಿಯಾ(25), ರಾಮರಾಜ್ ಮುಖಿಯಾ(29), ಸಂಬೂ ಮುಖಿಯಾ(26) ಎಂದು ಗುರುತಿಸಲಾಗಿದ್ದು, ಇವರ ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ದುರಂತದಲ್ಲಿ ಮೃತಪಟ್ಟವರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿ 6-7 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಉಳಿದವರನ್ನು

ವಿಜಯಪುರ: ಮೆಕ್ಕೆಜೋಳ ಮೂಟೆ ಕುಸಿದು ಮೂವರು ಕಾರ್ಮಿಕರ ದುರ್ಮರಣ Read More »

ಉದ್ಯೋಗಾಕಾಂಕ್ಷಿಗಳೇ ಇಲ್ಲಿ ಗಮನಿಸಿ/ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳು

ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ 13 ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್, ಮಲ್ಟಿಪರ್ಪಸ್ ವರ್ಕರ್ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆಫ್‍ಲೈನ್ ಮೂಲಕ ಡಿಸೆಂಬರ್ 28,2023ರೊಳಗೆ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 28,2023ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯ ಬಿಎಎಂಎಸ್, ಎಂ.ಎಸ್, ಎಂ.ಡಿ, ಸ್ನಾತಕೋತ್ತರ ಪದವಿ, ಡಿಪೆÇ್ಲೀಮಾ, 7ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು

ಉದ್ಯೋಗಾಕಾಂಕ್ಷಿಗಳೇ ಇಲ್ಲಿ ಗಮನಿಸಿ/ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳು Read More »

ಕೊಡವ ಅಭಿವೃದ್ದಿ ನಿಗಮಕ್ಕೆ ಒಂದು ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ| ಜಿಲ್ಲಾಧಿಕಾರಿಗಳ ಕಛೇರಿಯಿಂದ ನೀಡಿದ ಅಧಿಕೃತ ದಾಖಲೆ ಬಿಡುಗಡೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಇದೇ ಸೆ.10ರಿಂದ ಬಹು ಚರ್ಚೆಗೆ ಗ್ರಾಸವಾಗಿ ಪರ ವಿರೋಧ ಅಭಿಪ್ರಾಯಗಳಿಗೆ ಆಸ್ಪದ ಮಾಡಿದ ಕೊಡವ ಅಭಿವೃದ್ದಿ ನಿಗಮಕ್ಕೆ ಹತ್ತು ಕೋಟಿ ಅನುದಾನ ಬಿಡುಗಡೆ ಪ್ರಸ್ತಾಪಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾರವರು ಮಾಹಿತಿ ಹಕ್ಕು ಕಾಯ್ದೆ 2005 ರಡಿಯಲ್ಲಿ ಕೊಡವ ಅಭಿವೃದ್ದಿ ನಿಗಮಕ್ಕೆ 2022-23 ರಿಂದ ಪಸ್ತುತ ದಿನದ ವರೆಗೆ ಸರ್ಕಾರದಿಂದ ಬಂದ ಅನುದಾನದ ಬಗ್ಗೆ ಧೃಡೀಕೃತ ಮಾಹಿತಿಯನ್ನು ಕೋರಿದ್ದು ಸಂಭಂದಿತ ಕೋರಿಕೆಗೆ ಇಲ್ಲಿಯವರೆಗೆ

ಕೊಡವ ಅಭಿವೃದ್ದಿ ನಿಗಮಕ್ಕೆ ಒಂದು ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ| ಜಿಲ್ಲಾಧಿಕಾರಿಗಳ ಕಛೇರಿಯಿಂದ ನೀಡಿದ ಅಧಿಕೃತ ದಾಖಲೆ ಬಿಡುಗಡೆ Read More »

ದೇಶದೊಳಗಿನ ಸೈನಿಕರೇ ಗೃಹರಕ್ಷಕರು

ಸಮಗ್ರ ನ್ಯೂಸ್: ಗೃಹರಕ್ಷಕ ದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರವಾದ ಶಿಸ್ತುಬದ್ಧವಾದ ಸಮವಸ್ರದಾರಿ ಸ್ವಯಂಸೇವಕರ ಸೇವಾ ಸಂಸ್ಥೆ ಆಗಿರುತ್ತದೆ. ‘ನಿಷ್ಕಾಮ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಜೀವದ ರಕ್ಷಣೆ ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು. ಹೇಗೆ ದೇಶದ ಗಡಿಗಳಲ್ಲಿ ಸೈನಿಕರು ನಮ್ಮ ದೇಶವನ್ನು ವೈರಿಗಳಿಂದ ಮತ್ತು ನೆರೆಹೊರೆಗಳ ದೇಶಗಳಿಂದ ರಕ್ಷಿಸುತ್ತಾರೋ ಹಾಗೆ, ನಮ್ಮ ದೇಶದೊಳಗೆ

ದೇಶದೊಳಗಿನ ಸೈನಿಕರೇ ಗೃಹರಕ್ಷಕರು Read More »

ಭ್ರಷ್ಟರಿಗೆ ಬಿಗ್ ಶಾಕ್ ನೀಡಿದ ಲೋಕಾಯುಕ್ತ| ರಾಜ್ಯದ ಹಲವೆಡೆ 13 ಅಧಿಕಾರಿಗಳ ಮನೆ ಕಚೇರಿ ಮೇಲೆ ದಾಳಿ

ಸಮಗ್ರ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ರಾಜ್ಯದ 63 ಸ್ಥಳಗಳಲ್ಲಿ 200ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳ ಮನೆ, ಕಚೇರಿಗಳು, ಸಂಬಂಧಿಕರ ಮನೆಗಳ

ಭ್ರಷ್ಟರಿಗೆ ಬಿಗ್ ಶಾಕ್ ನೀಡಿದ ಲೋಕಾಯುಕ್ತ| ರಾಜ್ಯದ ಹಲವೆಡೆ 13 ಅಧಿಕಾರಿಗಳ ಮನೆ ಕಚೇರಿ ಮೇಲೆ ದಾಳಿ Read More »

ಕೇಂದ್ರ ಸರ್ಕಾರದಿಂದ ‘ಕನ್ನಡ ಕಡ್ಡಾಯ‌’ ಮಸೂದೆ ತಿರಸ್ಕಾರ

ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. 2015ರಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ 1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಅಂಗೀಕರಿಸಿದ ಮಸೂದೆಯನ್ನು ಕೇಂದ್ರ ಸರ್ಕಾರದ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಮಾತೃಭಾಷೆನ್ನು ಕಡ್ಡಾಯಗೊಳಿಸುವುದು, ಶಿಕ್ಷಣದ

ಕೇಂದ್ರ ಸರ್ಕಾರದಿಂದ ‘ಕನ್ನಡ ಕಡ್ಡಾಯ‌’ ಮಸೂದೆ ತಿರಸ್ಕಾರ Read More »

ರಮೇಶ್​ ಜಾರಕಿಹೊಳಿ ಅತ್ಯಾಪ್ತ ಬಿಜೆಪಿ ಮುಖಂಡನಿಗೆ ಚಾಕು ಇರಿತ

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಬಿಜೆಪಿ ಮುಖಂಡರೂ ಆಗಿರುವ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಪೃಥ್ವಿ ಸಿಂಗ್ ಅವರಿಗೆ ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಆಪ್ತರು ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪೃಥ್ವಿ ಸಿಂಗ್​ ಅವರ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಾಗಿರುವ ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ಆಪ್ತರಾಗಿರುವ ಸದ್ದಾಂ, ಸುಜಯ್ ಜಾಧವ್, ಚನ್ನರಾಜ ಅವರ ಬಾಡಿಗಾರ್ಡ್ ಅವರಿಂದ ​ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಪೃಥ್ವಿ

ರಮೇಶ್​ ಜಾರಕಿಹೊಳಿ ಅತ್ಯಾಪ್ತ ಬಿಜೆಪಿ ಮುಖಂಡನಿಗೆ ಚಾಕು ಇರಿತ Read More »

ಗೋದಾಮಿನಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ರಾಜಗುರು ಪುಡ್ಸ್ ಗೋದಾಮಿನಲ್ಲಿ ಮೆಕ್ಕೆ ಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳ ಅಡಿ ಸಿಲುಕಿರುವ 10ಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ, ಪೊಲೀಸ್, ಹೋಮ್‌ಗಾರ್ಡ್ ಸೇರಿ ಸುಮಾರು 100 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ನಾಲ್ಕು ಕ್ರೇನ್, ನಾಲ್ಕು ಜೆಸಿಬಿಗಳನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ. ಗೋದಾಮಿನಲ್ಲಿ ಅಪಾರ ಪ್ರಮಾಣದಲ್ಲಿ ಗೋವಿನ ಜೋಳ ಸಂಗ್ರಹ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 10 ರಿಂದ 12 ಜನ ಕಾರ್ಮಿಕರು ಅದರೊಳಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.

ಗೋದಾಮಿನಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ Read More »

ಬಿಎಂಟಿಸಿ ಬಸ್ ಗೆ ಗುದ್ದಿ ಧಗಧಗನೆ ಹೊತ್ತಿ ಉರಿದ ಕಾರ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಚಂದ್ರಾಲೇಔಟ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಬಸ್ ಯಶವಂತಪುರದಿಂದ ನಾಯಂಡಹಳ್ಳಿ ಕಡೆ ತೆರಳುತ್ತಿತ್ತು.ಚಂದ್ರಾ ಲೇಔಟ್ ಬಳಿ ಬಸ್ ನಿಂತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ವೇಗಕ್ಕೆ ಬೆಂಕಿ ಹತ್ತಿಕೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಹಿಂಭಾಗದ ಸೀಟು ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರ್ ಡಿಕ್ಕಿ ಹೊಡೆಯುತ್ತಿದ್ದಂತೆ ಎಚ್ಚೆತ್ತ ಚಾಲಕ ಎಲ್ಲಾ ಪ್ರಯಾಣಿಕರನ್ನು

ಬಿಎಂಟಿಸಿ ಬಸ್ ಗೆ ಗುದ್ದಿ ಧಗಧಗನೆ ಹೊತ್ತಿ ಉರಿದ ಕಾರ್ Read More »