December 2023

ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಬೆಲೆ ಏರಿಕೆ ಯಾಕೆ?ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟ ಗಳಿಂದ ಮನವಿ […]

ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ Read More »

ಜೈನಮುನಿ ಹತ್ಯೆಗೆ ಮತ್ತೊಂದು ಕಾರಣ?

ಸಮಗ್ರ ನ್ಯೂಸ್: ಚಿಕ್ಕೋಡಿಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿಯು 500ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಜುಲೈ 5ರ ರಾತ್ರಿ ಜೈನಮುನಿಯನ್ನು ಹಂತಕರು ಕರೆಂಟ್ ಶಾಕ್ ಕೊಟ್ಟು ತುಂಡರಿಸಿ ಬೋರ್ ವೆಲ್‍ಗೆ ಬಿಸಾಡಿದ್ದರು. ಇದೀಗ ಹಣವಷ್ಟೇ ಅಲ್ಲ. ಜೈನಮುನಿಯ ಬೈಗುಳವೇ ಕೊಲೆಗೆ ಕಾರಣ ಎಂಬ ಸ್ಫೋಟಕ ಸತ್ಯವನ್ನು ಆರೋಪಿಗಳು ಸಿಐಡಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಾರ್ಜ್‍ಶೀಟ್‍ನಲ್ಲಿ ಏನಿದೆ.?: ಆರೋಪಿ ನಾರಾಯಣ ಮಾಳಿಯು

ಜೈನಮುನಿ ಹತ್ಯೆಗೆ ಮತ್ತೊಂದು ಕಾರಣ? Read More »

ಸುಳ್ಯ: ಸೌಜನ್ಯ ಪರ ಬ್ಯಾನರ್ ತೆರವುಗೊಳಿಸಲು ಜನಜಾಗೃತಿ ವೇದಿಕೆಯಿಂದ ಮನವಿ

ಸಮಗ್ರ ನ್ಯೂಸ್: ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗಿ ಹತ್ಯೆಯಾದ ಧರ್ಮಸ್ಥಳ ಸಮೀಪದ ಪಾಂಗಾಳದ ಅಪ್ರಾಪ್ತ ಬಾಲಕಿ‌ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಳವಡಿಸಲಾದ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ತಾಲೂಕಿನ ಎಲ್ಲಾ ಗ್ರಾ.ಪಂ ಪಿಡಿಒ ಗಳಿಗೆ ಬ್ಯಾನರ್ ಅಳವಡಿಕೆ ಕುರಿತು ಕ್ರಮವಹಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಸುಳ್ಯ ತಾಲೂಕಿನಾದ್ಯಂತ ಹಲವು ಕಡೆಗಳಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟಗಾರರು ಬ್ಯಾನರ್ ಅಳವಡಿಕೆ

ಸುಳ್ಯ: ಸೌಜನ್ಯ ಪರ ಬ್ಯಾನರ್ ತೆರವುಗೊಳಿಸಲು ಜನಜಾಗೃತಿ ವೇದಿಕೆಯಿಂದ ಮನವಿ Read More »

ಡಿಗ್ರೀ ಪಾಸ್​ ಆಗಿದ್ರೆ ಸಾಕು, ಲಕ್ಷಗಟ್ಟಲೆ ಸಂಬಳ ಕೊಡೋ ಈ ಜಾಬ್​ಗೆ ಸೇರ್ಬೋದು!

ಸಮಗ್ರ ಉದ್ಯೋಗ: Ministry of Civil Aviation ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಅಪ್ಪರ್ ಡಿವಿಶನ್ ಕ್ಲರ್ಕ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 7, 2023. ಆಸಕ್ತರು ಆಫ್​ಲೈನ್​/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಸೇರಿ ಇತರೆ ಕಡೆ ಪೋಸ್ಟಿಂಗ್ ನೀಡಲಾಗುತ್ತದೆ. ಹುದ್ದೆಯ ಮಾಹಿತಿ:ಅಪ್ಪರ್ ಡಿವಿಶನ್ ಕ್ಲರ್ಕ್-1ಸೀನಿಯರ್ ಇನ್ಸ್​ಪೆಕ್ಟರ್- 7 ವಿದ್ಯಾರ್ಹತೆ:ಅಪ್ಪರ್ ಡಿವಿಶನ್ ಕ್ಲರ್ಕ್- ಡಿಗ್ರಿಸೀನಿಯರ್ ಇನ್ಸ್​ಪೆಕ್ಟರ್- ಡಿಪ್ಲೊಮಾ,

ಡಿಗ್ರೀ ಪಾಸ್​ ಆಗಿದ್ರೆ ಸಾಕು, ಲಕ್ಷಗಟ್ಟಲೆ ಸಂಬಳ ಕೊಡೋ ಈ ಜಾಬ್​ಗೆ ಸೇರ್ಬೋದು! Read More »

ಕುಕ್ಕೆ ಸುಬ್ರಹ್ಮಣ್ಯ: ಲೋಕಸಭಾ ಕಲಾಪದ ಕನ್ಸಲ್ಟಂಟ್‌ ಇಂಟಪ್ರಿಟರ್‌ ಆಗಿ ಡಾ. ಗೋವಿಂದ ಎನ್.ಎಸ್ ನೇಮಕ

ಸಮಗ್ರ ನ್ಯೂಸ್: ಲೋಕಸಭೆಯ ಕಲಾಪದಲ್ಲಿ ಆಗುವ ಚರ್ಚೆಗಳನ್ನು ಆಂಗ್ಲ ಹಾಗೂ ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕನ್ಸಲ್ಟಂಟ್‌ ಇಂಟಪ್ರಿಟರ್‌ ಹುದ್ದೆಗೆ ಸುಬ್ರಹ್ಮಣ್ಯ ಸಮೀಪದ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಗುಂಡಿಹಿತ್ಲುವಿನ ಡಾ| ಗೋವಿಂದ ಎನ್‌.ಎಸ್‌ ನೇಮಕಗೊಂಡಿದ್ದಾರೆ. ಲೋಕಸಭೆಯ ಅಧಿವೇಶನದಲ್ಲಿನ ಕಾರ್ಯಕಲಾಪಗಳನ್ನು ಭಾರತೀಯ ವ್ಯವಸ್ಥೆಗೆ ಭಾಷಾಂತರಿಸುವ ಸಲುವಾಗಿ ಹೊಸ ಸಂಸತ್‌ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲ ಭಾಷೆಗಳಲ್ಲೂ ತಲಾ 5 ಕನ್ಸಲ್ಟಂಟ್‌ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಕನ್ನಡಕ್ಕೆ ಭಾಷಾಂತರ ಹುದ್ದೆಗೆ 15 ಮಂದಿ

ಕುಕ್ಕೆ ಸುಬ್ರಹ್ಮಣ್ಯ: ಲೋಕಸಭಾ ಕಲಾಪದ ಕನ್ಸಲ್ಟಂಟ್‌ ಇಂಟಪ್ರಿಟರ್‌ ಆಗಿ ಡಾ. ಗೋವಿಂದ ಎನ್.ಎಸ್ ನೇಮಕ Read More »

ಡಿ.09: ಮತದಾರರ ಪಟ್ಟಿಗೆ ಹೆಸರು ನೋಂದಾವಣೆಗೆ ಕೊನೆದಿನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು 18 ವರ್ಷ ತುಂಬಿದ 25,045 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಯುವ ಮತದಾರರ ಹೆಸರು ಸೇರ್ಪಡೆಗೆ ಡಿ. 9 ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ 18 ವರ್ಷ ತುಂಬಿದ 45,530 ಯುವ ಜನರಿದ್ದಾರೆ. ಈ ಪೈಕಿ 25,045 ಜನ ಮಾತ್ರ ನೋಂದಾಯಿಸಿದ್ದಾರೆ. 20,494 ಮಂದಿ ಬಾಕಿ ಇದ್ದು ಅವರನ್ನು ಸೇರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಯುವ ಮತದಾರರಲ್ಲಿ 3,742 ಮಂದಿಯ ಫಾರ್ಮ್-6 ಅರ್ಜಿಗಳು

ಡಿ.09: ಮತದಾರರ ಪಟ್ಟಿಗೆ ಹೆಸರು ನೋಂದಾವಣೆಗೆ ಕೊನೆದಿನ Read More »

ಡಿಸೆಂಬರ್ 13ರಂದು ಸಂಸತ್ ಮೇಲೆ ದಾಳಿ ಮಾಡ್ತೀನಿ! ಬಂತೀಗಾ ಉಗ್ರರಿಂದ ಬೆದರಿಕೆ ವಿಡಿಯೋ

ಸಮಗ್ರ ನ್ಯೂಸ್: ಡಿಸೆಂಬರ್ 13, 2001ರಂದು ದೇಶದ ಹೆಮ್ಮೆಯ ಪ್ರತೀಕವಾಗಿದ್ದ ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಚಳಿಗಾಲದ ಅಧಿವೇಶನದ ವೇಳೆಯೇ ಸಂಸತ್‌ ಭವನದ ಬಳಿ ನುಗ್ಗಿದ್ದ ಉಗ್ರರು, ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 9 ಮಂದಿ ಪ್ರಾಣತೆತ್ತಿದ್ದು, ಹಲವರು ಗಾಯಗೊಂಡಿದ್ದರು. ಈ ದಾಳಿಯ ಪ್ರಮುಖ ರೂಪಾರಿ ಉಗ್ರ ಅಫ್ಜಲ್ ಗುರುಗೆ 2013ರಲ್ಲಿ ಗಲ್ಲು ಶಿಕ್ಷೆ ನೀಡಲಾಯಿತು. ಸಂಸತ್ ಭವನದ ಈ ಕರಾಳ ದಾಳಿಗೆ ಇದೇ 13ರಂದು 22 ವರ್ಷಗಳಾಗುತ್ತವೆ. ಆದರೆ ಇದೀಗ ಮತ್ತೆ

ಡಿಸೆಂಬರ್ 13ರಂದು ಸಂಸತ್ ಮೇಲೆ ದಾಳಿ ಮಾಡ್ತೀನಿ! ಬಂತೀಗಾ ಉಗ್ರರಿಂದ ಬೆದರಿಕೆ ವಿಡಿಯೋ Read More »

ISIS ನಂಟಿನ ವ್ಯಕ್ತಿಗಳ ಜೊತೆ ವೇದಿಕೆ ಹಂಚಿಕೊಂಡ ಸಿಎಂ| ತನಿಖೆ ಕೋರಿ ಅಮಿತ್ ಶಾಗೆ ಯತ್ನಾಳ್ ಪತ್ರ

ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹಲವು ವಿವಾದಾತ್ಮಕವಾಗಿ ಹೇಳಿಕೆಗಳಲ್ಲಿ ಮುಂದೆ ಕಾಣಿಸಿಕೊಂಡಿದ್ದು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಂ ಉಗ್ರರ ಜೊತೆ ನಂಟು ಹೊಂದಿರುವ ಹಾಗೂ ಐಎಸ್​ಐಎಸ್ (ISIS) ಪರ ಒಲವು ಹೊಂದಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಭಯೋತ್ಪಾದಕ ಬಗ್ಗೆ ಸಹಾನುಭೂತಿ ಹೊಂದಿರುವ, ಮಧ್ಯಪ್ರಾಚ್ಯದಾದ್ಯಂತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ತನ್ವೀರ್ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದನ್ನು

ISIS ನಂಟಿನ ವ್ಯಕ್ತಿಗಳ ಜೊತೆ ವೇದಿಕೆ ಹಂಚಿಕೊಂಡ ಸಿಎಂ| ತನಿಖೆ ಕೋರಿ ಅಮಿತ್ ಶಾಗೆ ಯತ್ನಾಳ್ ಪತ್ರ Read More »

ಡಿ. 31ರಂದು ದೆಹಲಿಯಲ್ಲಿ ನಡೆಯಲಿರುವ ಅಮ್ ಆದ್ಮಿ 12ನೇ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅಶೋಕ್ ಎಡಮಲೆ

ಸಮಗ್ರ ನ್ಯೂಸ್: ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಕರ್ನಾಟಕದಿಂದ ಒಟ್ಟು 8 ರಾಷ್ಟ್ರೀಯ ಸಮಿತಿ ಸದಸ್ಯರಲ್ಲಿ ಓರ್ವರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿದ್ದ ಅಶೋಕ ಎಡಮಲೆ ಅವರು ಇದೇ ಡಿ. 31ರಂದು ದೆಹಲಿಯಿಂದ ನಡೆಯುವ 12ನೇ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಳೆದ 2021 ರಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯರ ಆಯ್ಕೆಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ 3ವರ್ಷದ ಅವಧಿಗೆ ಚುನಾಯಿತರಾಗಿದ್ದರು. ಕಳೆದ ಬಾರಿ 2022ರಲ್ಲಿ ದೆಹಲಿಯಲ್ಲಿ ನಡೆದ

ಡಿ. 31ರಂದು ದೆಹಲಿಯಲ್ಲಿ ನಡೆಯಲಿರುವ ಅಮ್ ಆದ್ಮಿ 12ನೇ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅಶೋಕ್ ಎಡಮಲೆ Read More »

ಐಸಿಸಿ ನೂತನ ರ‍್ಯಾಂಕಿಂಗ್/ ಭಾರತಕ್ಕೆ ಅಗ್ರಸ್ಥಾನ

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಏಕದಿನ ವಿಶ್ವಕಪ್ ಬಳಿಕ ನೂತನ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸಿದ್ದು, ನೂತನ ಪಟ್ಟಿಯಲ್ಲಿ ಭಾರತ ತಂಡದ ಐವರು ಆಟಗಾರರು ಅಗ್ರಸ್ಥಾನ ಅಲಂಕರಿಸಿದ್ದಾರೆ. ಏಕದಿನ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಶುಭಮನ್ ಗಿಲ್, ಟಿ-20 ಬ್ಯಾಟ್ಸ್‌ಮನ್‌ಗಳ ಪೈಕಿ ಸೂರ್ಯಕುಮಾರ್ ಯಾದವ್, ಆಲ್‍ರೌಂಡರ್ ಗಳ ಪೈಕಿ ರವೀಂದ್ರ ಜಡೇಜಾ, ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್, ಟಿ20 ಬೌಲರ್‌ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರವಿ ಬಿಷ್ಣೋಯ್ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 223

ಐಸಿಸಿ ನೂತನ ರ‍್ಯಾಂಕಿಂಗ್/ ಭಾರತಕ್ಕೆ ಅಗ್ರಸ್ಥಾನ Read More »