December 2023

ಚಳಿಗಾಲದ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಡಿಸೆಂಬರ್ 4 ರಿಂದ ಆರಂಭವಾದ ಕಲಾಪದಲ್ಲಿ ಹಲವು ವಿಧೇಯಕ ಮಂಡನೆಯಾಗಿದೆ. ಇದೀಗ ಸೋಮವಾರ ಬೆಳಗ್ಗೆ 11 ಗಂಟೆಗೆ ಕಲಾಪವನ್ನು ಮುಂದೂಡಲಾಗಿದೆ. ಡಿ.4 ರಿಂದ 15ರವರೆಗೆ ಅಧಿವೇಶನ ನಡೆಯಲಿದೆ.

ಚಳಿಗಾಲದ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ Read More »

ಬಿಜೆಪಿ ಕರ್ನಾಟಕ ರಾಜ್ಯ ಘಟಕಗಳ ಪುನರ್ ರಚನೆ/ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ಬಿ.ವೈ.ವಿಜಯೇಂದ್ರ ಸಮಾಲೋಚನೆ

ಸಮಗ್ರ ನ್ಯೂಸ್: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ರಾಜ್ಯ ಘಟಕದ ಎಲ್ಲ ಘಟಕಗಳ ಪುನರ್ ರಚನೆ ಕುರಿತು ಸಮಾಲೋಚನೆ ನಡೆಸಿದರು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಯಾವುದೇ ಘಟಕಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿರಲಿಲ್ಲ. ಸಕ್ರಿಯವಾಗಿ ಕಾರ್ಯ ನಿರ್ವಹಿಸುವವರು ಮತ್ತು ಕ್ರಿಯಾಶೀಲರಿಗೆ ಹೆಚ್ಚಿನ ಆದ್ಯತೆ ನೀಡಲು ಘಟಕಗಳ ಪುನರ್ ರಚನೆಗೆ ನಿರ್ಧರಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘಟಕಗಳ ಪುನರ್ ರಚನೆಗೆ ಅರುಣ್ ಸಿಂಗ್ ಜತೆಗೆ ಚರ್ಚಿಸುವಂತೆ ವಿಜಯೇಂದ್ರ ಅವರಿಗೆ

ಬಿಜೆಪಿ ಕರ್ನಾಟಕ ರಾಜ್ಯ ಘಟಕಗಳ ಪುನರ್ ರಚನೆ/ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ಬಿ.ವೈ.ವಿಜಯೇಂದ್ರ ಸಮಾಲೋಚನೆ Read More »

ಬೆಲೆ ನಿಯಂತ್ರಣ ಹಿನ್ನಲೆ/ ಈರುಳ್ಳಿ ರಪ್ತು ನಿಷೇಧ

ಸಮಗ್ರ ನ್ಯೂಸ್: ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಮತ್ತು ಲಭ್ಯತೆ ಸುಧಾರಿಸಲು 2024ರ ಮಾರ್ಚ್ 31ರವರೆಗೂ ರಫ್ತು ಮಾಡುವುದಕ್ಕೆ ನಿಷೇಧ ಹೇರಲಾಗಿದೆ ಎಂದು ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು ಪ್ರಕಟಣೆ ಹೊರಡಿಸಿದ್ದು, ಈ ಆದೇಶ ಹೊರಬೀಳುವುದಕ್ಕೂ ಮುನ್ನ ಆಗಿರುವ ರಫ್ತು ಒಪ್ಪಂದಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಚಿಲ್ಲರೆ ಮಾರಾಟದ ದರ ಕೆ.ಜಿಗೆ 70-80ರವರೆಗೆ ಇದೆ. ಈರುಳ್ಳಿ ಬೆಲೆ ಹೆಚ್ಚಿರುವ ರಾಜ್ಯಗಳಲ್ಲಿ ತನ್ನ ಬಳಿ ಇರುವ ಹೆಚ್ಚುವರಿ ದಾಸ್ತಾನನ್ನು ಕೆ.ಜಿಗೆ 25ರಂತೆ ಮಾರಾಟ ಮಾಡುತ್ತಿದೆ. ಪ್ರಸಕ್ತ

ಬೆಲೆ ನಿಯಂತ್ರಣ ಹಿನ್ನಲೆ/ ಈರುಳ್ಳಿ ರಪ್ತು ನಿಷೇಧ Read More »

ಮಂಗಳೂರು: ಬಸ್‌ ಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನಕ್ಕೆ ಹಲವರ ವಿರೋಧ

ಸಮಗ್ರ ನ್ಯೂಸ್: ನಗರದಲ್ಲಿ ಖಾಸಗಿ ಬಸ್ ರೂಟ್ ಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನ ನಡೆದಿತ್ತು. ಆದರೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಡಿ. 10 ರಿಂದ ಪೂರ್ಣ ಪ್ರಮಾಣದಲ್ಲಿ ಈ ಅಭಿಯಾನ ಆರಂಭಿಸಲು ಕನ್ನಡಪರ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ. ಇದರ ನಡುವೆ ಕನ್ನಡ ಸ್ಟಿಕರ್ ಅಭಿಯಾನಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್ ಗಳಿಗೆ ಸ್ಟಿಕರ್ ಅಂಟಿಸಿ ಸ್ಥಳದಲ್ಲಿಯೇ ಬಸ್ ಸಿಬ್ಬಂದಿಯಿಂದ ಸ್ಟಿಕರ್ ನ ಬಾಬ್ತು ಹಣವನ್ನು ವಸೂಲಿ ಮಾಡಲಾಗಿದೆ. ಆದರೆ ಯಾವುದೇ ರಶೀದಿ ನೀಡದೇ

ಮಂಗಳೂರು: ಬಸ್‌ ಗಳಿಗೆ ಕನ್ನಡ ನಾಮಫಲಕ ಸ್ಟಿಕರ್ ಅಭಿಯಾನಕ್ಕೆ ಹಲವರ ವಿರೋಧ Read More »

ಶಿರಸಿ: ಕೆಎಸ್ಆರ್ ಟಿಸಿ ಬಸ್ ಕಾರು ಮುಖಾಮುಖಿ ಡಿಕ್ಕಿ| ಐವರು ಬಲಿ

ಸಮಗ್ರ ನ್ಯೂಸ್ : ಕೆಎಸ್ಆರ್ ಟಿಸಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ಡಿ. 8ರಂದು ನಡೆದಿದೆ. ಕಾರಿನಲ್ಲಿದ್ದವರು ತಮಿಳುನಾಡು ಮೂಲದವರು ಎಂದು ಹೇಳಲಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಕೆಎಸ್ಆರ್ ಟಿಸಿ ಬಸ್ ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದು, ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತವಾದ ರಭಸಕ್ಕೆ ಕಾರು

ಶಿರಸಿ: ಕೆಎಸ್ಆರ್ ಟಿಸಿ ಬಸ್ ಕಾರು ಮುಖಾಮುಖಿ ಡಿಕ್ಕಿ| ಐವರು ಬಲಿ Read More »

ಕಳಚಿದ ಸಿನಿಮಾ ರಂಗದ ಮತ್ತೊಂದು ಕೊಂಡಿ| ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಅವರು ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹದಲ್ಲದೇ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಇಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ನೆಲಮಂಗಲದಲ್ಲಿರುವ ಅವರ ತೋಟದ ಮನೆಯಲ್ಲೇ ನೇರವೇರಲಿದೆ ಅಂತ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಇಂದು ರಾತ್ರಿ ಅವರ ಪಾರ್ಥೀವ ಶರೀರವವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು,

ಕಳಚಿದ ಸಿನಿಮಾ ರಂಗದ ಮತ್ತೊಂದು ಕೊಂಡಿ| ಹಿರಿಯ ನಟಿ ಲೀಲಾವತಿ ಇನ್ನಿಲ್ಲ Read More »

ಅಡಿಕೆ ಹಳದಿರೋಗದ ಹಾಟ್ ಸ್ಪಾಟ್ ನಲ್ಲೇ‌ ಮತ್ತೆ ಸಮೃದ್ಧ ಫಸಲು| ಅವಿಷ್ಕಾರಗಳ ಬಳಿಕ ಯಶಕಂಡ ಸಂಪಾಜೆಯ ಕೃಷಿಕ

ಸಮಗ್ರ ನ್ಯೂಸ್: ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶ ಅದರಲ್ಲೂ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆದು ಫಸಲು ಕಾಣುವ ಮೂಲಕ ಸಂಪಾಜೆಯ ಕೃಷಿಕರೋರ್ವರು ಹೊಸ ಭರವಸೆ ಮೂಡಿಸಿದ್ದಾರೆ. ಇಲ್ಲಿನ ಜೇಡ್ಲದ ನಿವಾಸಿ ಕೃಷಿಕ ಶ್ರೀಧರ ಭಟ್ ಹಲವು ಆವಿಷ್ಕಾರಗಳ ಬಳಿಕ ಅಡಿಕೆ ಕೃಷಿಯಲ್ಲಿ ಯಶ ಕಂಡಿದ್ದಾರೆ. ಅಡಿಕೆ ಬೆಳೆಗಾರರಿಗೆ ಈಚೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ. ಅದರಲ್ಲೂ ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗದಿಂದ ತೋಟವೇ ನಾಶವಾಗಿತ್ತು. ಇದೀಗ ಅನೇಕ

ಅಡಿಕೆ ಹಳದಿರೋಗದ ಹಾಟ್ ಸ್ಪಾಟ್ ನಲ್ಲೇ‌ ಮತ್ತೆ ಸಮೃದ್ಧ ಫಸಲು| ಅವಿಷ್ಕಾರಗಳ ಬಳಿಕ ಯಶಕಂಡ ಸಂಪಾಜೆಯ ಕೃಷಿಕ Read More »

ತಾಳಿ ಇನ್ನೇನೋ ಕಟ್ಟಬೇಕು ಅನ್ನುವಷ್ಟರಲ್ಲಿ ಹುಡ್ಗಿ ಕೊಟ್ಲು ನೋಡಿ ಶಾಕ್ …!

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ವಿವಾಹಗಳು ಅರ್ಧದಲ್ಲೆ ನಿಲ್ಲುವುದು ಸಾಮಾನ್ಯ. ಅದೇ ತರ ಇಲ್ಲೊಂದು ಘಟನೆ ಸಿನಿಮೀಯ ರೀತಿಯಲ್ಲಿ ನಡೆದಿದೆ. ಮಂಟಪದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ಕೊನೆ ಗಳಿಗೆಯಲ್ಲಿ ಮದುವೆಯನ್ನು ನಿಲ್ಲಿಸಲಾಗುತ್ತದೆ.ಈ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇನ್ನೇನು ವರ ಕೈಯಲ್ಲಿ ತಾಳಿ ಹಿಡಿದು ಕಟ್ಟಬೇಕು ಎನ್ನುವಷ್ಟರಲ್ಲೇ ವಧು ನಿರಾಕರಿಸಿದ್ದಾಳೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು

ತಾಳಿ ಇನ್ನೇನೋ ಕಟ್ಟಬೇಕು ಅನ್ನುವಷ್ಟರಲ್ಲಿ ಹುಡ್ಗಿ ಕೊಟ್ಲು ನೋಡಿ ಶಾಕ್ …! Read More »

ಆದರ್ಶ ಪದವಿ ಪೂರ್ವ ಕಾಲೇಜು/ ರಾಜ್ಯ ಸಚಿವ ಸಂಪುಟದ ಒಪ್ಪಿಗೆ

ಸಮಗ್ರ ನ್ಯೂಸ್: ಕರ್ನಾಟಕದ ಆಯ್ದ 60 ತಾಲ್ಲೂಕುಗಳಲ್ಲಿನ ವಿಜ್ಞಾನ ಸಂಯೋಜನೆ ಹೊಂದಿರುವ 60 ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ‘ಆದರ್ಶ ಪದವಿ ಪೂರ್ವ ಕಾಲೇಜು’ಗಳನ್ನಾಗಿ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಈ ಯೋಜನೆಯ ಅಡಿಯಲ್ಲಿ ಪ್ರತಿ ಕಾಲೇಜಿಗೆ ತಲಾ 83. 30 ಲಕ್ಷ ನೀಡಲಾಗುವುದು. ಒಟ್ಟು 50 ಕೋಟಿಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ಕಾಲೇಜುಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಆಧಾರಿತ ಬೋಧನಾ ಪರಿಕರಗಳನ್ನು ಒದಗಿಸಿ, ವಿದ್ಯಾರ್ಥಿಗಳನ್ನು ಐಐಟಿ, ಐಐಎಸ್‍ಸಿ, ವೈದ್ಯಕೀಯ ಸಂಸ್ಥೆಗಳಿಗೆ

ಆದರ್ಶ ಪದವಿ ಪೂರ್ವ ಕಾಲೇಜು/ ರಾಜ್ಯ ಸಚಿವ ಸಂಪುಟದ ಒಪ್ಪಿಗೆ Read More »

ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಕಬಡ್ಡಿ ಕಲರವ/ ಬೆಂಗಳೂರು ಮತ್ತು ದಬಾಂಗ್ ದೆಹಲಿ ನಡುವೆ ಮೊದಲ ಮುಖಾಮುಖಿ

ಸಮಗ್ರ ನ್ಯೂಸ್: ಪ್ರೋ ಕಬಡ್ಡಿ ಲೀಗ್‍ನ 10ನೇ ಆವೃತ್ತಿಯ 2ನೇ ಚರಣದ ಆತಿಥ್ಯಕ್ಕೆ ಗಾರ್ಡನ್ ಸಿಟಿಯ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದ್ದು, ಕ್ರಿಕೆಟ್ ಪಂದ್ಯಗಳನ್ನು ನೋಡಿ ಮನ ತಣಿಸಿಕೊಂಡಿದ್ದ ಕ್ರೀಡಾಭಿಮಾನಿಗಳಿಗೆ ದೇಸೀಯ ಕ್ರೀಡೆಯ ರೋಚಕತೆ ಸವಿಯುವ ಅವಕಾಶ ದೊರಕಲಿದೆ. ಮೂರು ವರ್ಷಗಳ ಬಳಿಕ ಸಂಪೂರ್ಣ ಕ್ಯಾರವಾನ್ ಮಾದರಿಯಲ್ಲಿ ಮರಳಿರುವ ಪ್ರೋ ಕಬಡ್ಡಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದೆಹಲಿ ಸೆಣಸಾಟ ನಡೆಸಲಿವೆ. ಕಳೆದ ಬಾರಿ ಉಪಾಂತ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ನಿರಾಸೆ

ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಕಬಡ್ಡಿ ಕಲರವ/ ಬೆಂಗಳೂರು ಮತ್ತು ದಬಾಂಗ್ ದೆಹಲಿ ನಡುವೆ ಮೊದಲ ಮುಖಾಮುಖಿ Read More »