December 2023

ಕೊಡಗಿನ ರೆಸಾರ್ಟ್ ನಲ್ಲಿ ಮಗುವನ್ನು ಕೊಂದು ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಕೇರಳದ ಕೊಲ್ಲಂನಿಂದ ಮಡಿಕೇರಿಗೆ ಆಗಮಿಸಿದ ಕುಟುಂಬ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ರೆಸಾರ್ಟ್ ಒಂದರಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಹೆಂಡತಿ ಹಾಗೂ ಮಗು ಸೇರಿ ಮೂವರು ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರುಗಳು ಕೇರಳದ ಕೊಲ್ಲಂನಿಂದ ಮಡಿಕೇರಿಗೆ ಆಗಮಿಸಿದ ಕುಟುಂಬವಾಗಿದು. ಆದರೆ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಾರಣ ಇನ್ನು ತಿಳಿದು ಬಂದಿಲ್ಲ ಮೃತರ ಗುರುತು ಇನ್ನಷ್ಟತಿಳಿದುಬರಬೇಕಿದೆೆ. ದಂಪತಿಗಳು ಮಗುವನ್ನು ಕೊಂದು ಬಳಿಕ ಇಬ್ಬರು […]

ಕೊಡಗಿನ ರೆಸಾರ್ಟ್ ನಲ್ಲಿ ಮಗುವನ್ನು ಕೊಂದು ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ Read More »

ತಾಯಿಯ ಹಾಗೂ ಶಿಶುವಿನ ಆರೋಗ್ಯ ಕಾಪಾಡುತ್ತಂತೆ ಈ ವಾಚ್​! ನೋಡಿ ಸೂಪರ್​ ಫೀಚರ್ ಇರೋ ಪ್ರಾಡಕ್ಟ್​

ಸಮಗ್ರ ನ್ಯೂಸ್: ಪ್ರಸ್ತುತ, ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್ ವಾಚ್‌ಗಳು ಲಭ್ಯವಿವೆ. ಅವರು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಎಷ್ಟೇ ಬ್ರ್ಯಾಂಡ್ ಗಳಿದ್ದರೂ ಆಪಲ್ ವಾಚ್ ಮಾತ್ರ ಒಂದೇ. ಏಕೆಂದರೆ ಆಪಲ್ ವಾಚ್ ಹೃದಯ ಬಡಿತ ಮಾನಿಟರಿಂಗ್, ಫಾಲ್ ಡಿಟೆಕ್ಷನ್, ಎಮರ್ಜೆನ್ಸಿ ಎಸ್‌ಒಎಸ್, ಜಿಪಿಎಸ್ ಟ್ರ್ಯಾಕಿಂಗ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಬಳಕೆದಾರರ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ಸುಧಾರಿತ ಸಂವೇದಕಗಳನ್ನು ಹೊಂದಿರುವ ಆಪಲ್ ಕೈಗಡಿಯಾರಗಳು ಎಲ್ಲಾ ಸಮಯದಲ್ಲೂ ಬಳಕೆದಾರರ ಆರೋಗ್ಯವನ್ನು ನಿಖರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ

ತಾಯಿಯ ಹಾಗೂ ಶಿಶುವಿನ ಆರೋಗ್ಯ ಕಾಪಾಡುತ್ತಂತೆ ಈ ವಾಚ್​! ನೋಡಿ ಸೂಪರ್​ ಫೀಚರ್ ಇರೋ ಪ್ರಾಡಕ್ಟ್​ Read More »

ಸುಳ್ಯದ ಖ್ಯಾತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಬೆಂಗಳೂರಲ್ಲಿ ನವಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ

ಸಮಗ್ರ ನ್ಯೂಸ್: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಿಶ್ವ ಚೇತನ ಬಳಗ ಬೆಂಗಳೂರು ವತಿಯಿಂದ ಜರುಗಿದ 3ನೇ ಕಲಾ ಸಾಂಸ್ಕೃತಿಕ ಮಹಾ ಸಮ್ಮೇಳನದಲ್ಲಿ ಸುಳ್ಯದ ಖ್ಯಾತ ಸಾಹಿತಿ, ಜ್ಯೋತಿಷಿ, ಸಂಘಟಕ ಮತ್ತು ಗಾಯಕರಾದ ಎಚ್. ಭೀಮರಾವ್ ವಾಷ್ಠರ್ ಅವರಿಗೆ ಇವರ 25 ವರ್ಷಗಳ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ 2023 ನೇ ಸಾಲಿನ ನವ ಚೈತನ್ಯಶ್ರೀ ರಾಜ್ಯ ಪ್ರಶಸ್ತಿ ಯನ್ನು ವಿಶ್ವ ಚೇತನ ಬಳಗ ಇದರ ಅಧ್ಯಕ್ಷ ಶಿವಸ್ವಾಮಿ ಅವರು ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ. ಎಚ್. ಭೀಮರಾವ್

ಸುಳ್ಯದ ಖ್ಯಾತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಬೆಂಗಳೂರಲ್ಲಿ ನವಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ Read More »

ಬಂಟ್ವಾಳ : ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ|ಆರೋಪಿ ಸುಮ್ಮಿ ಅಲಿಯಾಸ್ ಸುಮಿತ್ ಆಳ್ವ & ಗ್ಯಾಂಗ್ ಬಂಧನ…!

ಸಮಗ್ರ ನ್ಯೂಸ್: ಮನೆಯಂಗಳಕ್ಕೆ ಪ್ರವೇಶಿಸಿದ ನಾಲ್ಕೈದು ಮಂದಿಯ ಗುಂಪು ಗೇಟ್ ಬಿಸಾಕಿ ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೀಟರ್ ಬಡ್ಡಿ ವಸೂಲಿಗಾರ ಸುಮಿತ್ ಆಳ್ವ ಅಲಿಯಾಸ್ ಸುಮ್ಮಿ, ಮಹಮ್ಮದ್ ಜುನೈದ್, ಸೀಯಾನ್ ಮತ್ತು ಮಹಮ್ಮದ್ ತೌಫೀಕ್ ನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಂಗ ಬಂಧನ

ಬಂಟ್ವಾಳ : ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಯತ್ನ ಪ್ರಕರಣ|ಆರೋಪಿ ಸುಮ್ಮಿ ಅಲಿಯಾಸ್ ಸುಮಿತ್ ಆಳ್ವ & ಗ್ಯಾಂಗ್ ಬಂಧನ…! Read More »

ಸುಳ್ಯ: ಹಲ್ಲೆ ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸಿದ ಸುಳ್ಯ ನ್ಯಾಯಾಲಯ

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. 2018ರ ನವೆಂಬರ್ 11 ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಪೇರಾಲ್ ಎಂಬಲ್ಲಿ ಮಾಜಿ ಸೈನಿಕರಾದ ಅಡ್ಡಂತಡ್ಕ ದೇರಣ್ಣ ಗೌಡರು ಪೇರಾಲು ಅಂಚೆ ಕಚೇರಿಯ ಬಳಿ ರಸ್ತೆಯಲ್ಲಿ ನಿಂತುಕೊಂಡಿದ್ದ ಸಮಯ ಆರೋಪಿ ನಾಗೇಶನು ಹಿಂಬದಿಯಿಂದ ಬಂದು ಏಕಾಏಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ಅವರಿಗೆ ತಲೆಗೆ ಹೊಡೆದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ

ಸುಳ್ಯ: ಹಲ್ಲೆ ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸಿದ ಸುಳ್ಯ ನ್ಯಾಯಾಲಯ Read More »

ಕರ್ನಾಟಕದ ಶಕ್ತಿ ತೆಲಂಗಾಣದಲ್ಲಿ ಮಹಾಲಕ್ಷ್ಮಿ/ ಮಹಿಳೆಯರಿಗೆ ಉಚಿತ ಪ್ರಯಾಣ ಇಂದಿನಿಂದ ಶುರು

ಸಮಗ್ರ ನ್ಯೂಸ್: ಕಾಂಗ್ರೆಸ್‌ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಮೂರೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿದ್ದು, ಇಂದಿನಿಂದ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ದೊರೆತಿದೆ. ಇಂದು ಮಹಿಳೆಯರಿಗೆ ಉಚಿತ ಪ್ರಯಾಣದ ಮಹಾಲಕ್ಷ್ಮೀ ಯೋಜನೆ ಜಾರಿಗೆ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿರ್ಧರಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಸಿಗಲಿದ್ದು, ತೆಲಂಗಾಣ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಜನ್ಮ ದಿನವಾದ ಇಂದು ಮಹಾಲಕ್ಷ್ಮೀ ಯೋಜನೆಗೆ

ಕರ್ನಾಟಕದ ಶಕ್ತಿ ತೆಲಂಗಾಣದಲ್ಲಿ ಮಹಾಲಕ್ಷ್ಮಿ/ ಮಹಿಳೆಯರಿಗೆ ಉಚಿತ ಪ್ರಯಾಣ ಇಂದಿನಿಂದ ಶುರು Read More »

ಕಡಿಮೆ ತೂಕದ ಬಿಸ್ಕೆಟ್ ಪೊಟ್ಟಣ/ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಸಮಗ್ರ ನ್ಯೂಸ್: ಬಿಸ್ಕೆಟ್ ಪೊಟ್ಟಣದ ತೂಕ ಕಡಿಮೆ ಇತ್ತು ಎಂಬ ಆರೋಪದ ಮೇರೆಗೆ ಬ್ರಿಟಾನಿಯ ಇಂಡಸ್ಟ್ರೀಸ್‌ಗೆ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗವು ಒಟ್ಟು ₹30 ಸಾವಿರ ದಂಡ ವಿಧಿಸಿದೆ. ಕೊಡಗಿನ ಗೋಣಿಕೊಪ್ಪದಲ್ಲಿ ಎಂ.ಇ ಹಾಲಿ ಎಂಬವರು ಮಾರಿಗೋಲ್ಡ್ ಬಿಸ್ಕೆಟ್ ಖರೀದಿಸಿದ್ದರು. ಬಿಸ್ಕೆಟ್‌ಗಳು ಕಡಿಮೆ ಇರುವುದರಿಂದ ತೂಕ ಮಾಡಿಸಿ ನೋಡಿದಾಗ 100 ಗ್ರಾಂ ಇರುವ ಬದಲು 82 ಗ್ರಾಂ ಇತ್ತು. ಹೀಗಾಗಿ ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಅವರು ದೂರು ಸಲ್ಲಿಸಿದ್ದರು. ಆರೋಪ ಸಾಬೀತಾದ ಕಾರಣ ಕಂಪನಿಗೆ ₹10

ಕಡಿಮೆ ತೂಕದ ಬಿಸ್ಕೆಟ್ ಪೊಟ್ಟಣ/ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ Read More »

ಮದುವೆಯಾದ ಭಿನ್ನಕೋಮಿನ ಜೋಡಿ ಸುರತ್ಕಲ್ ಠಾಣೆಗೆ ಹಾಜರ್

ಸಮಗ್ರ ನ್ಯೂಸ್: ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ 7ನೇ ಬ್ಲಾಕ್‌ ಕಾಟಿಪಳ್ಳ ಯುವಕ ಪ್ರಶಾಂತ್‌ ಭಂಡಾರಿ (31) ಮತ್ತು 3ನೇ ಬ್ಲಾಕ್‌ ಆಶ್ರಯ ಕಾಲನಿಯ ನಿವಾಸಿ ಆಯೇಷಾ ಮದುವೆಯಾಗಿ ಶುಕ್ರವಾರ ಸಂಜೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಹಾಜರಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಅನ್ಯ ಧರ್ಮಿàಯರಾದ ಕಾರಣ ಒಪ್ಪಿಗೆ ದೊರೆಯುವ ಅನುಮಾನ ಬಂದ ಮೇರೆಗೆ ಜತೆಯಾಗಿ ಡಿ. 1ರಂದು ನಾಪತ್ತೆಯಾಗಿದ್ದರು. ಇದೀಗ ವಿವಾಹವಾಗಿ ಪತ್ತೆಯಾಗಿದ್ದಾರೆ. ಆಯೆಷಾ ತನ್ನ ಹೆಸರನ್ನು ಅಕ್ಷತಾ ಎಂದು

ಮದುವೆಯಾದ ಭಿನ್ನಕೋಮಿನ ಜೋಡಿ ಸುರತ್ಕಲ್ ಠಾಣೆಗೆ ಹಾಜರ್ Read More »

ಇಂದಿರಾ ಕ್ಯಾಂಟೀನ್‍ನಲ್ಲಿ ಇನ್ಮುಂದೆ ಸಿಗುತ್ತೆ ಮುದ್ದೆ

ಸಮಗ್ರ ನ್ಯೂಸ್: ಬೆಂಗಳೂರಿನ ಇಂದಿರಾ ಕ್ಯಾಂಟೀನ್‍ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳಲ್ಲಿ ಮುದ್ದೆ ಊಟದ ವ್ಯವಸ್ಥೆಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ. ಕರುನಾಡಿನ ಸುಗ್ಗಿಯ ಹಬ್ಬ ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಮುದ್ದೆ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕೇವಲ ರೈಸ್ ಬಾತ್ ಅಥವಾ ಅನ್ನ, ಸಾಂಬರ್, ಮೊಸರನ್ನ ಮಾತ್ರ ಕೊಡಲಾಗುತ್ತಿತ್ತು. ಆದರೆ ಹಲವರು, ಕೇವಲ ರೈಸ್ ಬೇಡ, ಮುದ್ದೆ, ಚಪಾತಿಯನ್ನೂ

ಇಂದಿರಾ ಕ್ಯಾಂಟೀನ್‍ನಲ್ಲಿ ಇನ್ಮುಂದೆ ಸಿಗುತ್ತೆ ಮುದ್ದೆ Read More »

ಯುಪಿಐ ವಹಿವಾಟು ಮಿತಿ/ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಳ

ಸಮಗ್ರ ನ್ಯೂಸ್: ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿನ ಯುಪಿಐ ವಹಿವಾಟು ಮಿತಿಯನ್ನು ಒಂದು ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮೂರು ದಿನಗಳ ಹಣಕಾಸು ನೀತಿ ಸಭೆಯಲ್ಲಿ ಈ ಮಹತ್ವದ ಮಾಹಿತಿ ನೀಡಿದೆ. ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಯುಪಿಐ ವಹಿವಾಟು ಮಿತಿಯನ್ನು ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಇದರಿಂದ ಹೆಚ್ಚಿನ ಮೊತ್ತದ ಆನ್‍ಲೈನ್ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಸಹಾಯವಾಗುತ್ತದೆ. ಭಾರತೀಯ ರಿಸರ್ವ್

ಯುಪಿಐ ವಹಿವಾಟು ಮಿತಿ/ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಳ Read More »