December 2023

ಹವಾಮಾನ ವರದಿ| ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಇಂದು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸೋಮವಾರ ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ‌ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಕಂಡು ಬರಲಿದೆ ಎನ್ನುವ ಮಾಹಿತಿ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಅಂದರೆ ಮಂಗಳವಾರದಂದು ಕರಾವಳಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ […]

ಹವಾಮಾನ ವರದಿ| ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆ ನಿರೀಕ್ಷೆ Read More »

ಕಾರು – ಮಿನಿ ಬಸ್ ನಡುವೆ ಢಿಕ್ಕಿ | ಪ್ರೇಮಿಗಳು ಸಾವು

ಸಮಗ್ರ ನ್ಯೂಸ್: ಮಿನಿ ಬಸ್‌ಗೆ ಕಾರು ಡಿಕ್ಕಿಯಾಗಿ ಪ್ರೇಮಿಗಳು ಸಾವನ್ನಪ್ಪಿರುವ ಘಟನೆ ರಾಮನಗರದ ಕನಕಪುರ ತಾಲೂಕಿನ ಕೆಬ್ಬಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಕೆಬ್ಬಹಳ್ಳಿ ಗ್ರಾಮದ ದೀಪಕ್ (25) ಮತ್ತು ಶೈಲಾ (22) ಎಂದು ಗುರುತಿಸಲಾಗಿದೆ. ಕನಕಪುರದಿಂದ ದೀಪಕ್ ಸ್ವಗ್ರಾಮ ಕೆಬ್ಬಹಳ್ಳಿಗೆ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದ. ದೀಪಕ್ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಮಿನಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಶೈಲಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ದೀಪಕ್‌ನನ್ನು

ಕಾರು – ಮಿನಿ ಬಸ್ ನಡುವೆ ಢಿಕ್ಕಿ | ಪ್ರೇಮಿಗಳು ಸಾವು Read More »

ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ/ ಮೊದಲ ಪಂದ್ಯ ಮಳೆಗೆ ಬಲಿ

ಸಮಗ್ರ ನ್ಯೂಸ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಕ್ರಿಕೆಟ್ ಸರಣಿಯ ಮೊದಲ ಟಿ20 ಪಂದ್ಯಾಟವನ್ನು ಮಳೆಯ ಕಾರಣದಿಂದ ರದ್ದುಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯದ ಆರಂಭದಲ್ಲೇ ಮಳೆರಾಯ ಎಂಟ್ರಿಕೊಟ್ಟಿದ್ದು, ಟಾಸ್ ಪ್ರಕ್ರಿಯೆ ಕೂಡ ನಡೆಸಲು ಅವಕಾಶ ನೀಡಿರಲಿಲ್ಲ. ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ/ ಮೊದಲ ಪಂದ್ಯ ಮಳೆಗೆ ಬಲಿ Read More »

ಮತ್ತೆ ಮುಂದೂಡಿದ ಮೈತ್ರಿಕೂಟ ಸಭೆ/ ಡಿಸೆಂಬರ್ 19ಕ್ಕೆ ನಿಗದಿ

ಸಮಗ್ರ ನ್ಯೂಸ್: ಡಿಸೆಂಬರ್ 17ರಂದು ನಿಗದಿಯಾಗಿದ್ದ ಐಎನ್‍ಡಿಐಎ ಮೈತ್ರಿಕೂಟದ ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. ಡಿ. 6ರಂದು ನಡೆಯಬೇಕಿದ್ದ ಈ ಸಭೆಯನ್ನು ಈ ಮೊದಲು ಡಿ. 17ಕ್ಕೆ ಮುಂದೂಡಲಾಗಿತ್ತು. ಡಿಸೆಂಬರ್ 6 ರಂದು ಮೊದಲು ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸದಿರಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜಾಖರ್ಂಡ್ ಮುಖ್ಯಮಂತ್ರಿ ಹೇಮಂತ್

ಮತ್ತೆ ಮುಂದೂಡಿದ ಮೈತ್ರಿಕೂಟ ಸಭೆ/ ಡಿಸೆಂಬರ್ 19ಕ್ಕೆ ನಿಗದಿ Read More »

ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ/ ನಾಳೆ ಘೋಷಣೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ (ಸೋಮವಾರ) ತೆರೆಬೀಳುವ ಸಾಧ್ಯತೆಯಿದೆ. ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಭೆ ನಡೆಯಲಿದ್ದು, ಇದರೊಂದಿಗೆ ನೂತನ ಮುಖ್ಯಮಂತ್ರಿಯ ಘೋಷಣೆಯಾಗುವ ಸಾಧ್ಯತೆ ಇದೆ. ಬಿಜೆಪಿ ಕೇಂದ್ರ ವೀಕ್ಷಕರಾದ, ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಸೋಮವಾರ ಮಧ್ಯಾಹ್ನ ಭೋಜನಕೂಟದ ಬಳಿಕ ಸಂಜೆ 4ರ ವೇಳೆಗೆ ಸಭೆ

ಮಧ್ಯಪ್ರದೇಶ ರಾಜ್ಯದ ನೂತನ ಮುಖ್ಯಮಂತ್ರಿ/ ನಾಳೆ ಘೋಷಣೆಯಾಗುವ ಸಾಧ್ಯತೆ Read More »

ಸುಳ್ಯ: ಟ್ವೆಂಟಿ-ಟ್ವೆಂಟಿ ಪಂದ್ಯಾಟದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಪ್ರಥಮ

ಸಮಗ್ರ ನ್ಯೂಸ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಯುರ್ವೇದಿಕ್ ಮೆಡಿಕಲ್ ಕಾಲೇಜು Twenty-Twenty ಪಂದ್ಯಾಟದಲ್ಲಿ ಕೆವಿಜಿ ಮೈದಾನದಲ್ಲಿ ಡಿ.10 ರಂದು ನಡೆಯಿತು. ಈ ಪಂದ್ಯಾಟದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಸುಳ್ಯ: ಟ್ವೆಂಟಿ-ಟ್ವೆಂಟಿ ಪಂದ್ಯಾಟದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಪ್ರಥಮ Read More »

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು/ ನಾಳೆ ಸುಪ್ರೀಂ ತೀರ್ಪು

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಸೋಮವಾರ(ಡಿ.11) ತನ್ನ ತೀರ್ಪನ್ನು ಪ್ರಕಟಿಸಲಿದೆ. ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು ಸಂವಿಧಾನ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆಗಸ್ಟ್ 2ರಿಂದ ಅರ್ಜಿಗಳ ವಿಚಾರಣೆ ಪ್ರಾರಂಭಿಸಿದ್ದ ನ್ಯಾಯಾಲಯ, 16 ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್ 5 ರಂದು ತನ್ನ

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು/ ನಾಳೆ ಸುಪ್ರೀಂ ತೀರ್ಪು Read More »

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್

ಸಮಗ್ರ ನ್ಯೂಸ್: 90 ಸ್ಥಾನಗಳ ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 54ರಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದು, ಶಾಸಕರ ಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಷ್ಣುದೇವ್ ಸಾಯ್ ಅವರು 2020ರಿಂದ 2022ರ ವರೆಗೆ ಛತ್ತೀಸಗಢದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿಯೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಡಿಸೆಂಬರ್ 3ರ ಫಲಿತಾಂಶಕ್ಕೂ ಮುನ್ನ ಬಹುತೇಕ ಸಮೀಕ್ಷೆಗಳು ಛತ್ತೀಸಗಢದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದ್ದವು.

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ Read More »

“ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”/ ನಾಳೆ ಮೋದಿ ಚಾಲನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು “ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”ಗೆ ನಾಳೆ (ಸೋಮವಾರ) ವಿಡಿಯೊ ಕಾನ್ಸರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಪಕುಲಪತಿಗಳು, ಸಂಸ್ಥೆಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ. “ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್” ಉಪಕ್ರಮವು ದೇಶದ ಯುವಕರಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೆ, ಕಾರ್ಯಾಗಾರಗಳು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ

“ವಿಕಸಿತ್ ಭಾರತ್ @2047: ವಾಯ್ಸ್ ಆಫ್ ಯೂತ್”/ ನಾಳೆ ಮೋದಿ ಚಾಲನೆ Read More »

ಬಹುಜನ ಸಮಾಜ ಪಕ್ಷಕ್ಕೆ ಉತ್ತರಾಧಿಕಾರಿ ಆಯ್ಕೆ/ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ನೂತನ ಉತ್ತರಾಧಿಕಾರಿ

ಸಮಗ್ರ ನ್ಯೂಸ್: ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಉತ್ತರಾಧಿಕಾರಿಯಾಗಿ ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ಮುಖ್ಯಸ್ಥೆ ಮಾಯಾವತಿ ಅವರು ನೇಮಕ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಆಕಾಶ್ ಆನಂದ್ ರಾಜಕೀಯ ಪ್ರವೇಶಿಸಿದ್ದು, ಸದ್ಯ ಮಾಯಾವತಿಯ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮೇಲ್ವಿಚಾರಣೆಯನ್ನು ಮಾಯಾವತಿ ಅವರೇ ಮುಂದುವರಿಸಲಿದ್ದಾರೆ ಎಂದು ಪಕ್ಷದ ಮುಖಂಡ ಉದಯ್‍ವೀರ್ ಸಿಂಗ್ ತಿಳಿಸಿದ್ದಾರೆ.

ಬಹುಜನ ಸಮಾಜ ಪಕ್ಷಕ್ಕೆ ಉತ್ತರಾಧಿಕಾರಿ ಆಯ್ಕೆ/ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ನೂತನ ಉತ್ತರಾಧಿಕಾರಿ Read More »