December 2023

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ/ ವಾಹನ ಪಾರ್ಕಿಂಗ್ ಹೀಗೆ ಮಾಡಿ

ಸಮಗ್ರ ನ್ಯೂಸ್: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರೆ ಪುಯುಕ್ತ ಉತ್ಸವ ಡಿ.17 ಮತ್ತು 18ರಂದು ನಡೆಯಲಿದ್ದು, ಆಗಮಿಸುವ ಭಕ್ತಾಧಿಗಳು ವಾಹನ ಪಾರ್ಕಿಂಗ್ ಮಾಡಲು ಪೋಲಿಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಡಿ.17 ಸಂಜೆ 4 ಗಂಟೆಯಿಂದ ಡಿ.18 ಸಂಜೆ 4 ಗಂಟೆಯ ತನಕ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತಾದಿಗಳು ಮತ್ತು ಸಳೀಯರು ಸಹಕರಿಸಬೇಕೆಂದು, ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿಯವರು ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿರುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಈ ಕೆಳಗಿನಂತೆ ಇದೆ ಗುಂಡ್ಯ- ಉಪ್ಪಿನಂಗಡಿ- […]

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ/ ವಾಹನ ಪಾರ್ಕಿಂಗ್ ಹೀಗೆ ಮಾಡಿ Read More »

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಟಿ ಹಿನ್ನಲೆ| ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಇದೇ ಡಿಸೆಂಬರ್ 24ರ ವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಸಮೀಪದ ಮದ್ಯದಂಗಡಿಗಳನ್ನು ಮುಚ್ಚಲು ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಡಿಸೆಂಬರ್ 16ರಿಂದ 19ರವರೆಗೆ ಮುಖ್ಯ ರಥೋತ್ಸವಗಳು ನಡೆಯಲಿದೆ. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಸೇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಡಿಸೆಂಬರ್ 17ರಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 18ರ ಮಧ್ಯರಾತ್ರಿ 12 ಗಂಟೆಯವರೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಟಿ ಹಿನ್ನಲೆ| ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ Read More »

ಸಂಸತ್ತಿನ ಮೇಲೆ ದಾಳಿ/ ನಾಲ್ವರ ಬಂಧನ, ಇಬ್ಬರು ಪರಾರಿ

ಸಮಗ್ರ ನ್ಯೂಸ್: ಸಂಸತ್ತಿನ ಮೇಲೆ ದಾಳಿ ಪ್ರಕರಣದ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಆರು ಜನರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾಗಿಯಾದವರಲ್ಲಿ ಇಬ್ಬರು ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್. ಸಂಸತ್ತಿನ ಹೊರಗಡೆಯ ಘಟನೆಯಲ್ಲಿ ಭಾಗಿಯಾದವರು ನೀಲಂ ದೇವಿ ಮತ್ತು ಅಮೋಲ್ ಶಿಂಧೆ. ಐದನೆಯ ವ್ಯಕ್ತಿಯನ್ನು ಲಲಿತ್ ಝಾ ಎಂದು ಹೆಸರಿಸಲಾಗಿದ್ದು, ಆತನ ಗುರುಗ್ರಾಮದ ಮನೆಯಲ್ಲಿ ಐವರು ಉಳಿದುಕೊಂಡಿದ್ದರು ಎನ್ನಲಾಗಿದೆ. ಆರನೇ ವ್ಯಕ್ತಿಯ ಹೆಸರು ವಿಕ್ರಂ ಎನ್ನಲಾಗಿದೆ. ಲಲಿತ್ ಝಾ ಜೊತೆ ಆತನೂ ಪರಾರಿಯಾಗಿದ್ದಾನೆ. ಲೋಕಸಭೆಯೊಳಗೆ

ಸಂಸತ್ತಿನ ಮೇಲೆ ದಾಳಿ/ ನಾಲ್ವರ ಬಂಧನ, ಇಬ್ಬರು ಪರಾರಿ Read More »

ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಇಲ್ಲ/ ರಾಮಲಿಂಗಾರೆಡ್ಡಿ ಭರವಸೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಎಲೆಕ್ಟಿಕ್, ವಾಣಿಜ್ಯ ಮತ್ತು ಹಳದಿ ಬೋರ್ಡ್ ವಾಹನಗಳ ಹೊರತುಪಡಿಸಿ ನೂತನ ವಾಹನಗಳಿಗೆ ತೆರಿಗೆ ವಿಧಿಸುವ ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ನಿರ್ಧಾರಣೆ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ಈ ಹಿನ್ನಲೆಯಲ್ಲಿ ಪ್ರತಿಪಕ್ಷದ ಸದಸ್ಯರು ಎಲೆಕ್ಟಿಕ್ ವಾಹನಗಳಿಗೆ ತೆರಿಗೆ ವಿಧಿಸಬಾರದು, ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದ್ದು, ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಕೂಡ ಇದನ್ನು ಬೆಂಬಲಿಸಿ ಎಲೆಕ್ಟಿಕ್

ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ಇಲ್ಲ/ ರಾಮಲಿಂಗಾರೆಡ್ಡಿ ಭರವಸೆ Read More »

ವಿಜಯ್ ಹಜಾರೆ ಟ್ರೋಫಿ/ ಇಂದು ಕರ್ನಾಟಕ ಮತ್ತು ರಾಜಸ್ಥಾನ ನಡುವೆ ಸೆಮಿಫೈನಲ್

ಸಮಗ್ರ ನ್ಯೂಸ್: ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ಇಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ. 4 ಬಾರಿಯ ಚಾಂಪಿಯನ್ ಕರ್ನಾಟಕ 5ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಟೂರ್ನಿಯ ಲೀಗ್ ಹಂತದಲ್ಲಿ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್‍ಗೇರಿದ್ದ ಕರ್ನಾಟಕ ತಂಡ, ಹರಿಯಾಣ ಎದುರು ಮಾತ್ರ ಸೋಲು ಅನುಭವಿಸಿದೆ.

ವಿಜಯ್ ಹಜಾರೆ ಟ್ರೋಫಿ/ ಇಂದು ಕರ್ನಾಟಕ ಮತ್ತು ರಾಜಸ್ಥಾನ ನಡುವೆ ಸೆಮಿಫೈನಲ್ Read More »

ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ/ ಸಂಸತ್ತಿನಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: ತೆಲಂಗಾಣದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಆರಂಭಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದೆ. ಈ ಮಸೂದೆಗೆ ಲೋಕಸಭೆಯು ಕಳೆದ ವಾರ ಅಂಗೀಕಾರ ನೀಡಿತ್ತು. ಸಂಸತ್ತಿನಲ್ಲಿ ಭದ್ರತಾ ಲೋಪ ಆಗಿರುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದ್ದ ಸಂದರ್ಭದಲ್ಲಿ, ರಾಜ್ಯಸಭೆಯು ಈ ಮಸೂದೆಗೆ ಬುಧವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಆಂಧ್ರಪ್ರದೇಶ ಮರುವಿಂಗಡಣೆ ಕಾಯ್ದೆ 2014ರ ಅನ್ವಯ,

ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ/ ಸಂಸತ್ತಿನಲ್ಲಿ ಅಂಗೀಕಾರ Read More »

ಇಂದಿನಿಂದ ಆಳ್ವಾಸ್ ವಿರಾಸತ್/ ಸಂಗೀತದ ರಸದೌತಣಕ್ಕೆ ಸಿದ್ಧಗೊಂಡಿದೆ ಮೂಡಬಿದ್ರೆ

ಸಮಗ್ರ ನ್ಯೂಸ್: ಮೂಡಬಿದಿದ್ರೆಯ ಆಳ್ವಾಸ್ ಅಂಗಣ ಇಂದಿನಿಂದ ನಾಲ್ಕು ದಿನಗಳ ಕಾಲ ‘ಆಳ್ವಾಸ್ ವಿರಾಸತ್’ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಆಳ್ವಾಸ್ ಎಂಬ ಶಿಕ್ಷಣ ಕಾಶಿಯಲ್ಲಿ ಇನ್ನು ನಾಲ್ಕು ದಿನಗಳ ಕಾಲ ಸಂಗೀತದ ರಸದೌತಣವೂ ದೊರೆಯಲಿದೆ. ಕಲಾ ರಸಿಕರ ಮನಸೂರೆಗೊಳ್ಳುವ ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಕಲಾ ಪ್ರೇಮಿಗಳು ಸಾಕ್ಷಿಯಾಗಲಿದ್ದು, ಡಾ. ಮೋಹನ ಆಳ್ವರ ಸಂಯೋಜನೆಯಲ್ಲಿ ಬರುವ ಮಂದಿಯನ್ನು ಅಚ್ಚರಿ ಗೊಳಿಸುವ ತೆರದಿ ಇಲ್ಲಿ ಕಾರ್ಯಕ್ರಮದ ಸಿದ್ಧತೆ ಯಶಸ್ವಿಯಾಗಿ ನಡೆದಿದೆ.

ಇಂದಿನಿಂದ ಆಳ್ವಾಸ್ ವಿರಾಸತ್/ ಸಂಗೀತದ ರಸದೌತಣಕ್ಕೆ ಸಿದ್ಧಗೊಂಡಿದೆ ಮೂಡಬಿದ್ರೆ Read More »

ಸುಳ್ಯ: ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ಜಲ್ಲಿಕಲ್ಲು!!

ಸಮಗ್ರ ನ್ಯೂಸ್: ಜಲ್ಲಿಕಲ್ಲೊಂದು‌ ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ವಿಚಿತ್ರ ಘಟನೆಯೊಂದು ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೋರ್ವರು‌ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ತಂಟೆಪ್ಪಾಡಿ ಪುಟ್ಟಣ್ಣ ಗೌಡ ಅವರ ಪುತ್ರಿ ಧನುಶ್ರೀ ಕೆಲವು ದಿನಗಳ ಹಿಂದೆ ಬೆಳಗ್ಗೆ ಪುತ್ತೂರಿಗೆ ಕಾಲೇಜಿಗೆಂದು ತೆರಳುತ್ತಿರುವಾಗ ರಸ್ತೆಯಲ್ಲಿ ಜಲ್ಲಿ ಕಲ್ಲೊಂದು ತೇಲಾಡುವ ದೃಶ್ಯ

ಸುಳ್ಯ: ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ಜಲ್ಲಿಕಲ್ಲು!! Read More »

ಎಣ್ಣೆಪ್ರಿಯರಿಗೆ ಬಿಗ್ ಶಾಕ್ ನೀಡಿದ ರಾಜ್ಯಸರ್ಕಾರ| ಹೊಸವರ್ಷದಿಂದಲೇ‌ ಹೆಚ್ಚಾಗಲಿದೆ ಮದ್ಯದ ದರ

ಸಮಗ್ರ ನ್ಯೂಸ್: ನ್ಯೂ ಇಯರ್‌ ಪಾರ್ಟಿ ಮಾಡಬೇಕು ಎಂಬ ಗುಂಗಿನಲ್ಲಿದ್ದವರಿಗೆ ಶಾಕ್‌ ಕಾದಿದೆ. ದಿನನಿತ್ಯ ಬಳಕೆ ವಸ್ತುಗಳು ಈಗಾಗಲೇ ಗಗನಕ್ಕೇರಿವೆ. ಒಂದು ಕಡೆ ಸರ್ಕಾರ ಜನರ ಮೂಗಿಗೆ ತುಪ್ಪ ಸವರಿದಂತೆ, ಈ ಕಡೆ ಉಚಿತ ಭಾಗ್ಯ ಕೊಟ್ಟು ಮತ್ತೊಂದು ಕಡೆ ದರ ಏರಿಸಿ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ. ಸರ್ಕಾರದ ಖಜಾನೆಗೆ ಬೂಸ್ಟರ್ ಡೋಸ್ ಕೊಟ್ಟಿದ್ದ ಮದ್ಯಪ್ರಿಯರಿಗೆ ಇದೀಗ ಮತ್ತೊಮ್ಮೆ ರೇಟ್ ಹೈಕ್ ಬಿಸಿ ತಟ್ಟಲಿದೆ. ಆರಂಭದಲ್ಲೇ ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ ದರವನ್ನು 20

ಎಣ್ಣೆಪ್ರಿಯರಿಗೆ ಬಿಗ್ ಶಾಕ್ ನೀಡಿದ ರಾಜ್ಯಸರ್ಕಾರ| ಹೊಸವರ್ಷದಿಂದಲೇ‌ ಹೆಚ್ಚಾಗಲಿದೆ ಮದ್ಯದ ದರ Read More »

ಕುಕ್ಕೆ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಅನ್ಯಮತೀಯರಿಗೆ ಸಂತೆ ವ್ಯಾಪಾರ ಅವಕಾಶ ನೀಡದಂತೆ ಮನವಿ

ಸಮಗ್ರ ನ್ಯೂಸ್: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸಂತೆ ವ್ಯಾಪಾರ ನಡೆಸಲು‌ ಅನ್ಯಮತೀಯರಿಗೆ ಅವಕಾಶ ನೀಡಬಾರದು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಹಿಂದೂ ಜಾಗರಣ ವೇದಿಕೆ ಹಾಗೂ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯವರ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅದೇಶದನ್ವಯ ಚಂಪಾಷಷ್ಠಿ ಮಹೋತ್ಸವ ಸಮಯದಲ್ಲಿ ಹಿಂದೂ ಬಾಂಧವರನ್ನು ಹೊರತುಪಡಿಸಿ ಅನ್ಯಧರ್ಮದವರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಘಟನೆಯ ಕಾರ್ಯಕರ್ತರ ಮನವಿಗೆ ದೇವಸ್ಥಾನದ

ಕುಕ್ಕೆ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ| ಅನ್ಯಮತೀಯರಿಗೆ ಸಂತೆ ವ್ಯಾಪಾರ ಅವಕಾಶ ನೀಡದಂತೆ ಮನವಿ Read More »