December 2023

ಸೂರತ್ ಡೈಮಂಡ್/ ವಿಶ್ವದ ಅತಿದೊಡ್ಡ ಕಾರ್ಪೋರೇಟ್ ಕಚೇರಿ ಉದ್ಘಾಟನೆ

ಸಮಗ್ರ ನ್ಯೂಸ್: ಗುಜರಾತ್ ನ ಸೂರತ್ ನಗರದಲ್ಲಿ ನಿರ್ಮಾಣಗೊಂಡಿರುವ ಅಮೆರಿಕದ ಪ್ರತಿಷ್ಟಿತ ಪೆಂಟಗನ್ ಅನ್ನು ಮೀರಿಸುವ ವಿಶ್ವದ ಅತಿದೊಡ್ಡ ಕಾಪೆರ್Çರೇಟ್ ಕಚೇರಿ ಕೇಂದ್ರವಾದ “ಸೂರತ್ ಡೈಮಂಡ್” ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ತವರುನಾಡು ಗುಜರಾತ್ ನ ಸೂರತ್ ನಗರವು ವಜ್ರದ ರಾಜಧಾನಿಯಾಗುವತ್ತ ಭವಿಷ್ಯ ಬರೆದಿದ್ದಾರೆ. ಸೂರತ್ ಡೈಮಂಡ್ ಸಂಕೀರ್ಣವು 35.54 ಎಕರೆ ಭೂಪ್ರದೇಶವನ್ನು ಒಳಗೊಂಡಿದ್ದು, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 4,500ಕ್ಕೂ ಹೆಚ್ಚು ನೆಟ್ವರ್ಕ್ ಕಚೇರಿ 65,000ಕ್ಕೂ ಹೆಚ್ಚು ವಜ್ರದ […]

ಸೂರತ್ ಡೈಮಂಡ್/ ವಿಶ್ವದ ಅತಿದೊಡ್ಡ ಕಾರ್ಪೋರೇಟ್ ಕಚೇರಿ ಉದ್ಘಾಟನೆ Read More »

ದತ್ತ ಜಯಂತಿಗೆ ಇಂದು ಚಾಲನೆ

ಸಮಗ್ರ ನ್ಯೂಸ್: ದತ್ತಪೀಠದಲ್ಲಿ ದತ್ತ ಜಯಂತಿ ಕಾರ್ಯಕ್ರಮಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆತಿದೆ. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಶಾಸಕ ಸಿ.ಟಿ. ರವಿ ಸಹಿತ 300ಕ್ಕೂ ಅಧಿಕ ದತ್ತ ಭಕ್ತರು ಮಾಲಾಧಾರಣೆ ನಡೆಸುವ ಮೂಲಕ ಹತ್ತು ದಿನಗಳ ದತ್ತಜಯಂತಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಹತ್ತು ದಿನಗಳ ದತ್ತಜಯಂತಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ದತ್ತ ಜಯಂತಿಗೆ ಇಂದು ಚಾಲನೆ Read More »

ಖಾಸಗಿ ದೇವಾಲಗಳನ್ನು ವಶಕ್ಕೆ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ/ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಸಮಗ್ರ ನ್ಯೂಸ್: ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ, ಖಾಸಗಿ ದೇವಾಲಯಗಳನ್ನು ಮುಜರಾಯಿ ವ್ಯಾಪ್ತಿಗೆ ತರಲು ನೋಟಿಸ್ ಕೊಡಲಾಗುತ್ತಿದೆ ಎಂಬ ಆರೋಪಗಳಿಗೆ ಸ್ಪಷ್ಟನೆ ನೀಡಿದ ಸಚಿವರು, ಕೆಲವು ಹಿಂದು ಸಂಘಟನೆಗಳಿಗೆ ಮಾಹಿತಿ ಕೊರತೆಯಿಂದ ತಪ್ಪು ತಿಳುವಳಿಕೆ ಉಂಟಾಗಿದೆ. ನಮ್ಮ ಸರ್ಕಾರ ಯಾವುದೇ ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಹಣ ದುರಪಯೋಗ, ಆಡಳಿತ ಮಂಡಳಿ ಕಲಹಗಳಿಂದ ಕೆಲವು ದೇವಾಲಯಗಳ ವಿವಾದ

ಖಾಸಗಿ ದೇವಾಲಗಳನ್ನು ವಶಕ್ಕೆ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ/ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ Read More »

ವಾರಣಾಸಿಯಲ್ಲಿ ಪ್ರಧಾನಿ ರೋಡ್ ಶೋ/ ಆಂಬ್ಯುಲೆನ್ಸ್ ಗೆ ದಾರಿ ಬಿಟ್ಟ ತಮ್ಮ ಬೆಂಗಾವಲು ಪಡೆ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ರೋಡ್ ಶೋ ವೇಳೆ ನರೇಂದ್ರ ಮೋದಿ ಅವರು ಆಂಬ್ಯುಲೆನ್ಸ್‍ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಭಾನುವಾರ ವಾರಣಾಸಿಗೆ ಆಗಮಿಸಿದ್ದಾರೆ. ತಮ್ಮ ಭೇಟಿಯ ವೇಳೆ ಈ ಭಾಗದ ಅಭಿವೃದ್ಧಿಗೆ 19,000 ಕೋಟಿಗೂ ಅಧಿಕ ಮೊತ್ತದ 37 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ವಾರಣಾಸಿಯಲ್ಲಿ ಪ್ರಧಾನಿ ರೋಡ್ ಶೋ/ ಆಂಬ್ಯುಲೆನ್ಸ್ ಗೆ ದಾರಿ ಬಿಟ್ಟ ತಮ್ಮ ಬೆಂಗಾವಲು ಪಡೆ Read More »

ವಿಜಯ್ ಹಜಾರೆ ಟ್ರೋಫಿ 2023/ ಪ್ರಶಸ್ತಿ ಮುಡಿಗೇರಿಸಿಕೊಂಡ ಹರಿಯಾಣ

ಸಮಗ್ರ ನ್ಯೂಸ್: ರಾಜಸ್ಥಾನವನ್ನು 30 ರನ್ನುಗಳಿಂದ ಸೋಲಿಸಿದ ಹರಿಯಾಣ ವಿಜಯ್ ಹಜಾರೆ ಟ್ರೋಫಿ 2023 ನ್ನು ತನ್ನ ಮುಡಿಗೇರಿಸಿಕೊಂಡಿದೆ. ಶನಿವಾರ ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡದ ಪರ ತೋಮರ್ 129 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿದರೂ, ಅಂತಿಮವಾಗಿ ರಾಜಸ್ಥಾನ್ 48

ವಿಜಯ್ ಹಜಾರೆ ಟ್ರೋಫಿ 2023/ ಪ್ರಶಸ್ತಿ ಮುಡಿಗೇರಿಸಿಕೊಂಡ ಹರಿಯಾಣ Read More »

ಮುಳುಗುತ್ತಿರುವವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು

ಸಮಗ್ರ ನ್ಯೂಸ್: ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ. ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ (20), ನಬಿಲ್ ನೂರ್ ಅಹ್ಮದ್‌(22), ವಿದ್ಯಾರ್ಥಿಗಳಾದ ಉಮರ್ ಸಿದ್ದಿಕ್(14), ಮಿಸ್ಬಾ ತಬಸುಮ್(21) ಮೃತರು. ಭಾನುವಾರ ರಜೆ ಹಿನ್ನೆಲೆಯಲ್ಲಿ ಈಜಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು, ನಾಲ್ವರ ಮೃತ ದೇಹಕ್ಕಾಗಿ

ಮುಳುಗುತ್ತಿರುವವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು Read More »

ಬಚ್ಚನ್ ಮನೆ ಬಿಟ್ಟು ಹೊರ ಬಂದ ಐಶ್ವರ್ಯಾ ರೈ! ಸೊಸೆಯನ್ನು ಅನ್ ಫಾಲೊ ಮಾಡಿದ ಬಿಗ್ ಬಿ

ಸಮಗ್ರ ನ್ಯೂಸ್: ಸಿನಿಮಾ ತಾರೆಗಳಂದ್ರೆ ಹಿಂಗೆ ಏನದ್ರು ಒಂದು ಗಾಸಿಪ್ ಗಳಿಗೆ ಸುದ್ದಿಯಾಗ್ತಾನೆ ಇರ್ತಾರೆ. ಅದರಲ್ಲೂ ಬಾಲಿವುಡ್ ಅಂತೂ ಡಿವೋರ್ಸ್​ ಹಾಗೂ ಮರು ಮದುವೆಗಳಿಂದಲೇ ಫೇಮಸ್. ಈಗ ನಟಿ ಐಶ್ವರ್ಯಾ ರೈ ಅವರ ವಿಚ್ಛೇದನೆ ಸುದ್ದಿ ಬಹಳಷ್ಟು ದಿನಗಳಿಂದ ಕೇಳಿ ಬರುತ್ತಿದೆ. ಇದು ನಿಜವೋ ಅನ್ನೊದು ಕುತೂಹಲವಾಗಿದೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ತಮ್ಮ ಮುದ್ದಿನ ಸೊಸೆ ಐಶ್ವರ್ಯಾ ರೈ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದಾಗ ಈ ರೂಮರ್ ಶುರುವಾಯಿತು. ಇದೀಗ ಮತ್ತೊಮ್ಮೆ ಐಶ್ವರ್ಯಾ ಹಾಗೂ ಅಭೀಷೇಕ್ ವಿಚ್ಛೇದನೆ

ಬಚ್ಚನ್ ಮನೆ ಬಿಟ್ಟು ಹೊರ ಬಂದ ಐಶ್ವರ್ಯಾ ರೈ! ಸೊಸೆಯನ್ನು ಅನ್ ಫಾಲೊ ಮಾಡಿದ ಬಿಗ್ ಬಿ Read More »

ಕುಕ್ಕೆ ಸುಬ್ರಹ್ಮಣ್ಯ: ನಾಳೆ(ಡಿ.18) ಚಂಪಾಷಷ್ಟಿ ಬ್ರಹ್ಮರಥೋತ್ಸವ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಡಿ.18 ರಂದು ಆದಿತ್ಯವಾರ ಬೆಳಿಗ್ಗೆ 7.33 ರ ಧನುರ್ಲಗ್ನ ಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ಜರುಗಲಿದೆ ಎಂದು ತಿಳಿದುಬಂದಿದೆ. ಡಿ.17 ರಂದು ರಾತ್ರಿ ಪಂಚಮಿ ರಥೋತ್ಸವ ನಡೆಯಲಿದೆ. ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ಕುಕ್ಕೆ ಸುಬ್ರಹ್ಮಣ್ಯ: ನಾಳೆ(ಡಿ.18) ಚಂಪಾಷಷ್ಟಿ ಬ್ರಹ್ಮರಥೋತ್ಸವ Read More »

ಸುಳ್ಯ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವ

ಸಮಗ್ರ ನ್ಯೂಸ್: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಡಿ.15 ಹಾಗೂ 16 ರಂದು ನಡೆಯಿತು. ಡಿ. 15 ನೇ ಶುಕ್ರವಾರದಂದು ಚಂಡಿಕಾಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಶ್ರೀ ದೇವರಿಗೆ ಕಲತಾಭಿಷೇಕ, ಹಸಿರು ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾರ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ಗಂಟೆ 7 ಕ್ಕೆ ಶ್ರೀ ದೇವಿಗೆ ದೊಡ್ಡ ರಂಗಪೂಜೆ ಹಾಗೂ ಮಹಾಪೂಜೆ. ರಾತ್ರಿ ಗಂಟೆ 8-00ರಿಂದ; ಶ್ರೀ ದೇವರ

ಸುಳ್ಯ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವ Read More »

ಓಲಾಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ! ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್, ಸೂಪರ್​ ಮೈಲೇಜ್​ ಕೂಡ ನೀಡುತ್ತೆ

ಕೈನೆಟಿಕ್ ಗ್ರೀನ್ ಕಂಪನಿಯು ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಇದರ ಬೆಲೆಯನ್ನು 94,900 ರೂ. (ಎಕ್ಸ್ ಶೋ ರೂಂ). ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್, ಅಧಿಕೃತ ಡೀಲರ್‌ಶಿಪ್ ಮೂಲಕ ಈ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಕಂಪನಿಯ ಹಕ್ಕು ಪ್ರಕಾರ, ಕೈನೆಟಿಕ್ ಜುಲು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಿದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಮುಂದಿನ ವರ್ಷ ಇದರ ವಿತರಣೆ ಆರಂಭವಾಗಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಶ್ರೇಣಿ ಮತ್ತು ವೈಶಿಷ್ಟ್ಯಗಳನ್ನು

ಓಲಾಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ! ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್, ಸೂಪರ್​ ಮೈಲೇಜ್​ ಕೂಡ ನೀಡುತ್ತೆ Read More »