December 2023

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದಿಂದ ಜರಗಿದ ಚಂಪಾಷಷ್ಟಿ ಮಹಾರಥೋತ್ಸವ

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಸೋಮವಾರ ಧನುರ್ ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಿ, ಮಹಾರಥೋತ್ಸವ ಜರುಗಿತು. ಅಲ್ಲದೆ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಿ, ಚಿಕ್ಕ ರಥೋತ್ಸವ ಜರುಗಿತು. ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಿತು. ಸಹಸ್ರಾರು ಭಕ್ತರು […]

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದಿಂದ ಜರಗಿದ ಚಂಪಾಷಷ್ಟಿ ಮಹಾರಥೋತ್ಸವ Read More »

ಹೃದಯಾಘಾತಕ್ಕೆ ಶಾಸಕ ಮಾನಪ್ಪ ವಜ್ಜಲ್ ಪುತ್ರ ಬಲಿ

ಸಮಗ್ರ ನ್ಯೂಸ್: ಇತ್ತಿಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಅನ್ನೋದು ಬಹಳಷ್ಟು ಕಾಮನ್ ಆಗಿ ಹೋಗಿದೆ. ಅದರಲ್ಲೂ ಯುವಕರೇ ಹಾರ್ಟ್ ಅಟ್ಯಾಕ್ ಗೆ ಬಲಿಯಾಗುತ್ತಿದ್ದಾರೆ. ಇದೀಗ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್(೩೧) ಅವರ ಪುತ್ರ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಹೃದಯಾಘಾತದಿಂದ ಸಂಭವಿಸಿದ ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಲಿಂಗಸಗೂರಿಗೆ ಮೃತದೇಹವನ್ನು ರವಾನೆ ಮಾಡಲಾಗುತ್ತಿದೆ. ನಾಳೆ

ಹೃದಯಾಘಾತಕ್ಕೆ ಶಾಸಕ ಮಾನಪ್ಪ ವಜ್ಜಲ್ ಪುತ್ರ ಬಲಿ Read More »

ಡಿ.ಕೆ.ಶಿವಕುಮಾರ್ ಭೇಟಿಯಾದ ಕಿಚ್ಚ ಸುದೀಪ್….!

ಸಮಗ್ರ ನ್ಯೂಸ್: ನಟ ಕಿಚ್ಚ ಸುದೀಪ್ ಅವರು ಇಂದು (ಡಿ. 17)ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ ಸುದೀಪ್ ಮಾತ್ರ ಅಲ್ಲದೆ ಅವರೊಟ್ಟಿಗೆ ನಿರ್ಮಾಪಕ ಕೆಪಿ ಶ್ರೀಕಾಂತ್, ಕೆಆರ್​ಜಿಯ ಕಾರ್ತಿಕ್ ಗೌಡ ಇನ್ನೂ ಹಲವರು ಒಟ್ಟಿಗೆ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ರಾಜಕೀಯ ಕಾರಣದಿಂದ ಸುದೀಪ್ ಹಾಗೂ ಅವರ ತಂಡ ಭೇಟಿ ಆಗಿರಲಿಲ್ಲ. ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಕೆಸಿಸಿ ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿದ್ದಾರೆ. ಕೆಸಿಸಿ ಟೂರ್ನಿಯ ಉದ್ಘಾಟನೆಯನ್ನು ಡಿಕೆಶಿಯಿಂದ ಉದ್ಘಾಟನೆ

ಡಿ.ಕೆ.ಶಿವಕುಮಾರ್ ಭೇಟಿಯಾದ ಕಿಚ್ಚ ಸುದೀಪ್….! Read More »

ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ – ಹೈಕೋರ್ಟ್

ಸಮಗ್ರ ನ್ಯೂಸ್: ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ ಹಾಗೂ ಸಂಚಾರ ಪೊಲೀಸರು ಆರೋಪಿಯಿಂದ ದಂಡದ ಮೊತ್ತ ( ಫೈನ್) ಸಂಗ್ರಹಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೆ.ಆರ್.ಪೇಟೆ ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ.ಟಿ.ನಟರಾಜು ಸಲ್ಲಿಸಿದ ಅರ್ಜಿ ಪುರಸರಿಸಿದ ನ್ಯಾಯಮೂರ್ತಿ ಈ ಆದೇಶ

ಟ್ರಾಫಿಕ್ ಪೊಲೀಸರು ದಂಡ ಸಂಗ್ರಹಿಸುವಂತಿಲ್ಲ – ಹೈಕೋರ್ಟ್ Read More »

ಬೆಂಗಳೂರಿನಲ್ಲಿ ವಿದ್ಯುತ್ ವೈರ್ ಸ್ಪರ್ಶಿಸಿ ಯುವಕ ದಾರುಣ ಸಾವು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ವಿದ್ಯುತ್ ಅವಘಡ ಮುಗಿಯದ ಕಥೆ, ಮೊನ್ನೆಯಷ್ಟೆ ವಿದ್ಯುತ್ ತಂತಿ ತಗುಲಿ ತಾಯಿ ಮಗು ಸಾವನಪ್ಪಿದ ಘಟನೆ ಸಂಭವಿಸಿದ್ದು ಅದು ಮಾಸುವ ಮುನ್ನವೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ.ಲಗ್ಗೆರೆಯ ಪಾರ್ವತಿಪುರದಲ್ಲಿ ಇಂದು ಮಧ್ಯಾಹ್ನ ವಿದ್ಯುತ್ ವೈರ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕ್ರೇನ್ ಆಪರೇಟರ್​ಗೆ ಗೈಡ್ ಮಾಡುತ್ತಿದ್ದ ಜೈನ್ ಕುಮಾರ್(20) ಮೃತ ವ್ಯಕ್ತಿ. ಡಿ.8 ರಂದು ಹಳೇ ಕಟ್ಟಡ ತೆರವು ವೇಳೆ ಗೋಡೆ ಸಮೇತ ಮೊಬೈಲ್ ಟವರ್ ಕಂಬ ನೆರಕ್ಕುರುಳಿತ್ತು. ಇಂದು ಮುರಿದುಬಿದ್ದಿದ್ದ

ಬೆಂಗಳೂರಿನಲ್ಲಿ ವಿದ್ಯುತ್ ವೈರ್ ಸ್ಪರ್ಶಿಸಿ ಯುವಕ ದಾರುಣ ಸಾವು Read More »

ಶಾಲೆಯ ಮಕ್ಕಳನ್ನು ಟಾಯ್ಲೆಟ್ ಗುಂಡಿಗೆ ಇಳಿಸಿ ಸ್ಚಚ್ಛತೆ… ಪ್ರಾಂಶುಪಾಲೆ ಸೇರಿ ಇಬ್ಬರು ಅಮಾನತು

ಸಮಗ್ರ ನ್ಯೂಸ್: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್ ಸೇರಿ ಇಬ್ಬರನ್ನು ಮಾಸ್ತಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪರನ್ನು ಬಂಧಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ದೂರು ಹಿನ್ನೆಲೆ ಮಲಹೊರುವ ಪದ್ಧತಿ ನಿಯಂತ್ರಣ ಕಾಯ್ದೆ, ಅಟ್ರಾಸಿಟಿ ಕಾಯ್ದೆಯಡಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ವಿವಿಧ

ಶಾಲೆಯ ಮಕ್ಕಳನ್ನು ಟಾಯ್ಲೆಟ್ ಗುಂಡಿಗೆ ಇಳಿಸಿ ಸ್ಚಚ್ಛತೆ… ಪ್ರಾಂಶುಪಾಲೆ ಸೇರಿ ಇಬ್ಬರು ಅಮಾನತು Read More »

ಹೊಸ ವರ್ಷಕ್ಕೆ ರೆಡಿಯಾಯ್ತ ಗೈಡ್ ಲೈನ್ಸ್…

ಸಮಗ್ರ ನ್ಯೂಸ್: ಇನ್ನೆನೂ ಕೆಲವೇ ದಿನಗಳಲ್ಲಿ ಹೊಸ ವರ್ಷ ಸಮೀಪಿಸುತ್ತಿದೆ. ಈ ಹಿನ್ನಲೆ ಬೆಂಗಳೂರು ನಗರ ಪೊಲೀಸರು ಹಾಗೂ ಪಾಲಿಕೆ ಅಲರ್ಟ್ ಆಗಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನಿಂಗ್​ ನಡೆಸಿದ್ದು, ಇಂದು ಪಾಲಿಕೆ ಜೊತೆ ಸಭೆ ನಡೆಸಿ ಪೊಲೀಸರು ಗೈಡ್ ಲೈನ್ಸ್ ರೆಡಿ ಮಾಡಿದ್ದಾರೆ. ನಗರದ ಬ್ರಿಗೇಡ್ ರೋಡ್,ಎಂಜಿ ರೋಡ್ ನಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುತ್ತಾರೆ. ಹಾಗಾಗಿ ಪ್ರತಿ ಬಾರಿ ಒಂದಷ್ಟು ಗೊಂದಲ ಮತ್ತು ಅಹಿತಕರ ಘಟನೆ ನಡೆಯುತ್ತದೆ. ಈ ಬಾರಿ ಆ ರೀತಿ

ಹೊಸ ವರ್ಷಕ್ಕೆ ರೆಡಿಯಾಯ್ತ ಗೈಡ್ ಲೈನ್ಸ್… Read More »

ತಾನು ಓದಿದ್ದ ಸರ್ಕಾರಿ ಶಾಲೆಯನ್ನೆ ದತ್ತು ಪಡೆದ ರಿಷಬ್ ಶೆಟ್ಟಿ..

ಸಮಗ್ರ ನ್ಯೂಸ್: ಕಾಂತರ-1 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ರಿಷಬ್ ಶೆಟ್ಟಿ ಈಗ ಹೊಸ ವಿಷಯದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಹೌದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿದ್ದರು ನಟ, ನಿರ್ದೇಶಕ ರಿಷಬ್ ಶೆಟ್ಟಿ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು

ತಾನು ಓದಿದ್ದ ಸರ್ಕಾರಿ ಶಾಲೆಯನ್ನೆ ದತ್ತು ಪಡೆದ ರಿಷಬ್ ಶೆಟ್ಟಿ.. Read More »

ಸುಳ್ಯ: ಸೈಂಟ್ ಜೋಸೆಫ್ ಶಾಲಾ ವತಿಯಿಂದ ಡಿ.18,19 ರಂದು ವಾರ್ಷಿಕ ಕ್ರೀಡಾ ದಿನ

ಸಮಗ್ರ ನ್ಯೂಸ್: ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಪೂರ್ವ-ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕ ಕ್ರೀಡಾ ದಿನವು ಸೈಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ಡಿ.18 ರಂದು ನಡೆಯಲಿದೆ. ವಾರ್ಷಿಕ ವಿದ್ಯಾರ್ಥಿಗಳ ಕ್ರೀಡಾ ದಿನದ ಅಧ್ಯಕ್ಷರಾಗಿ ರೆ.ಫಾ. ವಿಕ್ಟರ್ ಡಿಸೋಜಾ ವರದಿಗಾರರು, ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಸುಳ್ಯ, ಉದ್ಘಾಟಕರಾಗಿ ಈರಯ್ಯ ದೂಂತೂರು ಪೊಲೀಸ್ ಉಪನಿರೀಕ್ಷಕರು ಸುಳ್ಯ, ಹಾಗೆಯೇ ಗೌರವ ಅತಿಥಿಯಾಗಿ ಗುರುಸ್ವಾಮಿ ಬಿ.ಜಿ ಅಧ್ಯಕ್ಷರು, ಪಿ.ಟಿ.ಎ. ಪ್ರೌಢಶಾಲೆ, ಜೆ.ಕೆ.ರೈ ಅಧ್ಯಕ್ಷರು, ಪಿ.ಟಿ.ಎ. ಪ್ರಾಥಮಿಕ ಶಾಲೆ, ಭವ್ಯಾ ಅಧ್ಯಕ್ಷರು,

ಸುಳ್ಯ: ಸೈಂಟ್ ಜೋಸೆಫ್ ಶಾಲಾ ವತಿಯಿಂದ ಡಿ.18,19 ರಂದು ವಾರ್ಷಿಕ ಕ್ರೀಡಾ ದಿನ Read More »

ಮಧ್ಯಪ್ರದೇಶ ನೂತನ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಜಿತು ಪಟ್ಟಾರಿ/ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಉಮೇಶ್ ಸಿಂಘಾರ್

ಸಮಗ್ರ ನ್ಯೂಸ್: ಹಿಂದುಳಿದ ವರ್ಗದ ನಾಯಕ ಜಿತು ಪಟ್ಟಾರಿ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ನ ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ್ದರು. ಕಮಲ್‍ನಾಥ್ ಸರ್ಕಾರದಲ್ಲಿ ಉನ್ನತ ಶಿಕ್ಷಣ, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವರಾಗಿದ್ದ ಪಟ್ಟಾರಿ ಅವರು ಮಾಲ್ವಾ-ನಿರ್ಮಾ ಪ್ರದೇಶದಿಂದ ಬಂದವರು. ಇದೇ ಸಂದರ್ಭ ಬುಡಕಟ್ಟು ಜನಾಂಗದ ನಾಯಕ ಉಮೇಶ್ ಸಿಂಘಾರ್ ಅವರನ್ನು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ

ಮಧ್ಯಪ್ರದೇಶ ನೂತನ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಜಿತು ಪಟ್ಟಾರಿ/ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಉಮೇಶ್ ಸಿಂಘಾರ್ Read More »