December 2023

ಸೋದರಳಿಯನೇ ಉತ್ತರಾಧಿಕಾರಿ ಎಂದ ಮಮತಾ ಬ್ಯಾನರ್ಜಿ/ ಯುವ ನಾಯಕತ್ವಕ್ಕೆ ಮಣೆ ಹಾಕಿದ ತೃಣಮೂಲ ಕಾಂಗ್ರೆಸ್

ಸಮಗ್ರ ನ್ಯೂಸ್: ಸೋದರಳಿಯನೇ ಮಮತಾ ಬ್ಯಾನರ್ಜಿಯ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಅಧಿಕೃತವಾಗಿ ಉತ್ತರ ದೊರೆತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್, ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೇ ಮಮತಾ ನಂತರದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು 2036 ರವರೆಗೆ ಸೇವೆ ಸಲ್ಲಿಸುತ್ತಾರೆ. ತದನಂತರ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು […]

ಸೋದರಳಿಯನೇ ಉತ್ತರಾಧಿಕಾರಿ ಎಂದ ಮಮತಾ ಬ್ಯಾನರ್ಜಿ/ ಯುವ ನಾಯಕತ್ವಕ್ಕೆ ಮಣೆ ಹಾಕಿದ ತೃಣಮೂಲ ಕಾಂಗ್ರೆಸ್ Read More »

ದೂರಸಂಪರ್ಕ ಮಸೂದೆ-2023/ ಇನ್ಮುಂದೆ ಸಿಮ್ ಕಾರ್ಡ್‍ಗೆ ಬಯೋಮೆಟ್ರಿಕ್ ಕಡ್ಡಾಯ

ಸಮಗ್ರ ನ್ಯೂಸ್: ದೂರಸಂಪರ್ಕ ಮಸೂದೆ-2023 ನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ಮಸೂದೆಯು ಸಿಮ್ ಕಾರ್ಡ್ ನೀಡುವಾಗ ಟೆಲಿಕಾಂ ಕಂಪನಿಗಳು ಗ್ರಾಹಕರ ಬಯೋಮೆಟ್ರಿಕ್ ಪರಿಶೀಲನೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಟೆಲಿಕಾಂ ಸೇವೆಗಳನ್ನು ನೀಡುವ ಯಾವುದೇ ಅಧಿಕೃತ ಕಂಪನಿಯು ಯಾವುದೇ ವ್ಯಕ್ತಿಗೆ ಟೆಲಿಕಾಂ ಸೇವೆಗಳನ್ನು ನೀಡುವ ಮುನ್ನ ಆತನ ಬಯೋಮೆಟ್ರಿಕ್ ಗುರುತನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಆನ್ ಲೈನ್ ಮೆಸೇಜಿಂಗ್ ಮತ್ತು ಸ್ಟ್ರೀಮಿಂಗ್ ಸೇವೆಗಳಂತಹ ಓವರ್-ದಿ- ಟಾಪ್ ಸೇವೆಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಟೆಲಿಕಾಂ ಸಚಿವ

ದೂರಸಂಪರ್ಕ ಮಸೂದೆ-2023/ ಇನ್ಮುಂದೆ ಸಿಮ್ ಕಾರ್ಡ್‍ಗೆ ಬಯೋಮೆಟ್ರಿಕ್ ಕಡ್ಡಾಯ Read More »

ಹೆಚ್ಚುತ್ತಿರುವ ಭ್ರೂಣಹತ್ಯೆ ಪ್ರಕರಣಗಳು/ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ

ಸಮಗ್ರ ನ್ಯೂಸ್: ಭ್ರೂಣಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭ್ರೂಣಹತ್ಯೆ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಹಾಗೂ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಭ್ರೂಣಹತ್ಯೆ ಬುಡಸಮೇತ ಕಿತ್ತುಹಾಕಲು ಆರೋಗ್ಯ ಇಲಾಖೆ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡುತ್ತಿದೆ. ಭ್ರೂಣ ಹತ್ಯೆ, ಭ್ರೂಣಲಿಂಗ ಪತ್ತೆ ಬಗ್ಗೆ ಸುಳಿವು ಸಿಕ್ಕಾಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ನಂತರ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ

ಹೆಚ್ಚುತ್ತಿರುವ ಭ್ರೂಣಹತ್ಯೆ ಪ್ರಕರಣಗಳು/ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ Read More »

ಕೊರೋನಾದ ಆತಂಕ ಬೇಡ/ ಇಂದಿನಿಂದ ಮಾಸ್ಕ್ ಕಡ್ಡಾಯ

ಸಮಗ್ರ ನ್ಯೂಸ್: ರೂಪಾಂತರಿ ಕೊರೋನಾದ ಕುರಿತು ಅತಿಯಾದ ಆತಂಕ ಬೇಡ, ಇಂದಿನಿಂದ 60 ವರ್ಷ ಮೇಲ್ಪಟ್ಟ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಲಿದ್ದು, ಕೊರೋನಾದಿಂದ ದೂರವಿರಲು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಜ್ವರ,ಕೆಮ್ಮು, ಕಫ, ಶೀತ ಯಾವುದೇ ಲಕ್ಷಣ ಇರುವವರು ಮಾಸ್ಕ್ ಧರಿಸಬೇಕು ಹಾಗೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.

ಕೊರೋನಾದ ಆತಂಕ ಬೇಡ/ ಇಂದಿನಿಂದ ಮಾಸ್ಕ್ ಕಡ್ಡಾಯ Read More »

ರಿಯಲ್ ಆಗಿ ಹೀರೋ ಆದ ರಿಷಭ್/ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡ ಶೆಟ್ರು

ಸಮಗ್ರ ನ್ಯೂಸ್: ಕಾಂತಾರದ ಮೂಲಕ ಮನೆಮಾತಾಗಿರುವ ನಟ ರಿಷಬ್ ಶೆಟ್ಟಿ, ಇದೀಗ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತಾವು ಓದಿದ್ದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ತನ್ನ ನಿರ್ಧಾರವನ್ನು ಶಾಲಾ ಎಸ್‍ಡಿಎಂಸಿ ಸಭೆಯಲ್ಲಿ ರಿಷಬ್ ಪ್ರಕಟಿಸಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಈ ಶಾಲೆಯಲ್ಲಿ 400ರಷ್ಟು ಮಕ್ಕಳಿದ್ದು, ಈಗ 71ಕ್ಕೆ ಇಳಿಕೆಯಾಗಿದೆ. ಒಬ್ಬರು ಖಾಯಂ ಶಿಕ್ಷಕರು, ಉಳಿದವರು ಗೌರವ ಶಿಕ್ಷಕರು. ಖುದ್ದಾಗಿ ಈ ಶಾಲೆಯ

ರಿಯಲ್ ಆಗಿ ಹೀರೋ ಆದ ರಿಷಭ್/ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡ ಶೆಟ್ರು Read More »

ವಾರಣಾಸಿ-ಹೊಸದಿಲ್ಲಿ ನಡುವೆ ಎರಡನೇ ವಂದೇ ಭಾರತ್ ರೈಲು/ ಪ್ರಧಾನಿ ಮೋದಿ ಹಸಿರು ನಿಶಾನೆ

ಸಮಗ್ರ ನ್ಯೂಸ್: ವಾರಣಾಸಿ ಮತ್ತು ಹೊಸದಿಲ್ಲಿ ನಡುವಿನ ಎರಡನೇ ವಂದೇ ಭಾರತ್ ರೈಲು ಸೇರಿದಂತೆ ಒಟ್ಟು ನಾಲ್ಕು ರೈಲುಗಳಿಗೆ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ರೈಲ್ವೆ ಸಚಿವಾಲಯವು ದೇಶದಲ್ಲಿ ಪ್ರಾರಂಭಿಸಲಿರುವ ಎರಡನೇ ಕೇಸರಿ ಬಣ್ಣದ ವಂದೇ ಭಾರತ್ ರೈಲು ಇದಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ವಂದೇ ಭಾರತ್ ರೈಲಿನಲ್ಲಿ ಐಷಾರಾಮಿ ಒಳಾಂಗಣ, ಸ್ಪರ್ಶ-ಮುಕ್ತ ಅನುಕೂಲಗಳೊಂದಿಗೆ ಜೈವಿಕ ನಿರ್ವಾತ ಶೌಚಾಲಯಗಳು, ಹರಡಿದ ಎಲ್‍ಇಡಿ ಲೈಟಿಂಗ್ ಮತ್ತು ಪ್ರತಿ ಸೀಟಿನ

ವಾರಣಾಸಿ-ಹೊಸದಿಲ್ಲಿ ನಡುವೆ ಎರಡನೇ ವಂದೇ ಭಾರತ್ ರೈಲು/ ಪ್ರಧಾನಿ ಮೋದಿ ಹಸಿರು ನಿಶಾನೆ Read More »

ಹೆಚ್ಚುತ್ತಿರುವ ಭಕ್ತರ ಸಂಖ್ಯೆ/ ಶಬರಿಮಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ದ್ವಾರ

ಸಮಗ್ರ ನ್ಯೂಸ್: ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ಮಕ್ಕಳಿಗಾಗಿ ಪ್ರತ್ಯೇಕ ದ್ವಾರವನ್ನು ತೆರೆಯುವ ಮಹತ್ವದ ನಿರ್ಧಾರವನ್ನು ತಿರುವಾಂಕೂರು ದೇವಸ್ಥಾನ ಮಂಡಳಿ ಕೈಗೊಂಡಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ಮಕ್ಕಳಿಗಾಗಿ ಟ್ರಾವೆನ್ ಕೋರ್ ದೇವಸ್ಥಾನಂ ಬೋರ್ಡ್ (ಟಿಬಿಡಿ) ವಿಶೇಷ ಗೇಟ್ ವ್ಯವಸ್ಥೆ ಕಲ್ಪಿಸಿದೆ. ಭಾನುವಾರ ಬೆಳಗ್ಗೆಯಿಂದ ಮುಂದಿನ ಸಾಲಿನಲ್ಲಿ ಮಕ್ಕಳಿಗೆ ಅಯ್ಯಪ್ಪನ ದರ್ಶನ ನೀಡಲಾಗುತ್ತಿದೆ. ಇದರಿಂದ ಮಕ್ಕಳು ಉದ್ದನೆಯ ಸರತಿ ಸಾಲಿನಿಂದ ಪಾರಾಗಿದ್ದಾರೆ. ವಿಶೇಷ ಗೇಟ್ ಮೂಲಕ ಮಕ್ಕಳನ್ನು

ಹೆಚ್ಚುತ್ತಿರುವ ಭಕ್ತರ ಸಂಖ್ಯೆ/ ಶಬರಿಮಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ದ್ವಾರ Read More »

ಕುಶಾಲನಗರ: ಕೋವಿಡ್ ರೂಪಾಂತರಿ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಲು ಕ್ರಮ

ಸಮಗ್ರ ನ್ಯೂಸ್: 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ, ಕೊರೋನಾ ಲಕ್ಷಣ ಕಂಡುಬಂದಲ್ಲಿ ಕಡ್ಡಾಯ ಮಾಸ್ಕ್‌ ಧರಿಸಬೇಕು ಅಗತ್ಯ ಕ್ರಮಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಕೇಂದ್ರ ಸರ್ಕಾರ ತಜ್ಞರ ಜೊತೆ ಚರ್ಚೆ ಮಾಡಲಾಗಿದೆ.ಕುಶಾಲನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ನೀಡಿದರು. ಕೊವೀಡ್‌ ಗೆ ಸಂಬಂಧಿಸಿದಂತೆ ಅಗತ್ಯವಿರುವ ಬೆಡ್‌, ಆಕ್ಸಿಜನ್‌, ವೆಂಟಿ ಲೇಟರ್, ಪಿಪಿ ಕಿಟ್‌, ಮಾಸ್ಕ್‌ ರೆಡಿಮಾಡಲಾಗಿದೆ. ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಹಾಗೂ ಕೇರಳ ಗಡಿಗೆ ಹೊಂದಿಕೊಂಡಂತೆ ಇರುವ ಸ್ಥಳಗಳಲ್ಲಿ ನಿಗಾ

ಕುಶಾಲನಗರ: ಕೋವಿಡ್ ರೂಪಾಂತರಿ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಲು ಕ್ರಮ Read More »

ಬೆಂಗಳೂರು ಮತ್ತು ಮಹಾರಾಷ್ಟ್ರದಲ್ಲಿ ಎನ್ಐಎ ದಾಳಿ ವೇಳೆ ಸಿಕ್ಕಿದ್ದೇನು ಗೊತ್ತಾ? ನಿಜವಾಗ್ಲೂ ಇದು ಬೆಚ್ಚಿ ಬೀಳಿಸೋ ಸ್ಟೋರಿ..!

ಸಮಗ್ರ ನ್ಯೂಸ್: ಕರ್ನಾಟಕದ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ಎನ್​ಐಎ ದಾಳಿ ನಡೆಸಿತ್ತು. ಅಂದು ಬೆಂಗಳೂರಿನಲ್ಲಿ ಶಂಕಿತ ಉಗ್ರ ಅಲಿ ಅಬ್ಬಾಸ್​ನನ್ನು ಬಂಧಿಸಲಾಗಿತ್ತು. ಇಂದು ಮತ್ತೆ ದೇಶಾದ್ಯಂತ 41 ಕಡೆಗಳಲ್ಲಿ ಎನ್​ಐಎ ದಾಳಿ ನಡೆದಿದ್ದು, ಬೆಂಗಳೂರಿನಲ್ಲಿ ಶಮೀವುಲ್ಲಾ ಎಂಬಾತನ ಮನೆಯಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ ಏಳು ಕೆಜಿ ಸೋಡಿಯಂ‌ ನೈಟ್ರೇಟ್ ಪತ್ತೆಯಾಗಿದೆ. ಬೆಂಗಳೂರು ನಗರದ ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ, ಆರ್​.ಟಿ.ನಗರ, ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಗೂ ಬಳ್ಳಾರಿಯಲ್ಲಿ

ಬೆಂಗಳೂರು ಮತ್ತು ಮಹಾರಾಷ್ಟ್ರದಲ್ಲಿ ಎನ್ಐಎ ದಾಳಿ ವೇಳೆ ಸಿಕ್ಕಿದ್ದೇನು ಗೊತ್ತಾ? ನಿಜವಾಗ್ಲೂ ಇದು ಬೆಚ್ಚಿ ಬೀಳಿಸೋ ಸ್ಟೋರಿ..! Read More »

ಸಂಸತ್ ಭದ್ರತಾ‌ ವೈಫಲ್ಯ ವಿಚಾರ| ಪ್ರಶ್ನಿಸಿದ ಪ್ರತಿಪಕ್ಷಗಳ ಸದಸ್ಯರಿಗೆ ಅಮಾನತಿನ ಪ್ರತ್ಯಸ್ತ್ರ

ಸಮಗ್ರ ನ್ಯೂಸ್: ಕಳೆದ ವಾರ ಸಂಸತ್ತಿನಲ್ಲಿ ನಡೆದ ಭಾರೀ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಒತ್ತಾಯಿಸಿ ರಾಜ್ಯಸಭೆ, ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಒಟ್ಟು 90 ಪ್ರತಿಪಕ್ಷ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸಂಸತ್‌ನಿಂದ ಅಮಾನತು ಮಾಡಲಾಗಿದೆ. ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿದ 13 ವಿರೋಧ ಪಕ್ಷದ ಸಂಸದರನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು. ಇಂದು ಲೋಕಸಭೆಯಿಂದ 31 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈಗ 46 ರಾಜ್ಯಸಭಾ

ಸಂಸತ್ ಭದ್ರತಾ‌ ವೈಫಲ್ಯ ವಿಚಾರ| ಪ್ರಶ್ನಿಸಿದ ಪ್ರತಿಪಕ್ಷಗಳ ಸದಸ್ಯರಿಗೆ ಅಮಾನತಿನ ಪ್ರತ್ಯಸ್ತ್ರ Read More »