December 2023

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೃಜೇಶ್ ಚೌಟ ಆಯ್ಕೆ

ಸಮಗ್ರ ನ್ಯೂಸ್: ಭಾರತೀಯ ಜನತಾ ಪಾರ್ಟಿ(BJP) ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಬೃಜೇಶ್ ಚೌಟಾ ಮಾಜಿ ಸೈನಿಕರಾಗಿ, ರಾಜಕೀಯ ಚಿಂತಕನಾಗಿ, ವಾಣಿಜ್ಯೋದ್ಯಮಿ, ಶಿಕ್ಷಣ ತಜ್ಞ ಮತ್ತು ನಿರ್ವಹಣಾ ತಜ್ಞರಾಗಿದ್ದಾರೆ. ಕ್ಯಾಪ್ಟನ್ ಚೌಟ ಅವರು ಭಾರತೀಯ ಸೇನೆಯ ಮಾನವ ಸಂಪನ್ಮೂಲ, ಭದ್ರತೆ, ಕಾರ್ಯಾಚರಣೆಗಳು, ಆಡಳಿತ ಮತ್ತು ಲಾಜಿಸ್ಟಿಕ್ಸ್‌ನ ಸ್ವತಂತ್ರ ನಿರ್ವಹಣೆಯಲ್ಲಿ ಏಳು ವರ್ಷಗಳ ಅನುಭವವನ್ನು ಹೊಂದಿರುವ ಸ್ನೇಹಪರ ಮತ್ತು ಸಮರ್ಥ ವೃತ್ತಿಪರರಾಗಿದ್ದಾರೆ. ಮಂಗಳೂರು ಕಂಬಳದ ರುವಾರಿಗಳು ಆಗಿರುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ […]

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೃಜೇಶ್ ಚೌಟ ಆಯ್ಕೆ Read More »

ಕುಕ್ಕೆಯಲ್ಲಿಂದು ನೀರು ಬಂಡಿ ಉತ್ಸವ| ಚಂಪಾಷಷ್ಟಿ ಮಹೋತ್ಸವಕ್ಕೆ ತೆರೆ

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.24ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಚಂಪಾಷಷ್ಠಿ ಮಹೋತ್ಸವ ಸಮಾಪನಗೊಳ್ಳಲಿದೆ. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ. ಮದ್ಯಾಹ್ನ ಮಹಾಪೂಜೆ ಬಳಿಕ ದೇಗುಲದ ಹೊರಾಂಗಣದ ಸುತ್ತ ನೀರು ತುಂಬಲಾಗುತ್ತದೆ. ರಾತ್ರಿ ಮಹಾಪೂಜೆ ಬಳಿಕ ತುಂಬಿರುವ ನೀರಿನಲ್ಲಿ ಬಂಡಿ ತೇರನ್ನು ಎಳೆಯಲಾಗುತ್ತದೆ. ವರ್ಷದಲ್ಲಿ ಒಮ್ಮೆ ಈ ಉತ್ಸವ ನಡೆಯುತ್ತದೆ. ಬಳಿಕ ದೀಪಾರಾಧನೆ ಯುಕ್ತ ಪಾಲಕಿ ಉತ್ಸವ, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯುತ್ತದೆ. ಡಿ.25ರಂದು ಮುಂಜಾನೆ ಪುರುಷರಾಯ ದೈವವು ಕುಮಾರಧಾರ

ಕುಕ್ಕೆಯಲ್ಲಿಂದು ನೀರು ಬಂಡಿ ಉತ್ಸವ| ಚಂಪಾಷಷ್ಟಿ ಮಹೋತ್ಸವಕ್ಕೆ ತೆರೆ Read More »

ಕಡಬ: ಕ್ರೇಟಾ ಮತ್ತು ಓಮ್ನಿ ನಡುವೆ ಅಪಘಾತ| ಓರ್ವ‌ ಸಾವು, ಹಲವರು ಗಂಭೀರ

ಸಮಗ್ರ ನ್ಯೂಸ್: ಕ್ರೆಟಾ ಕಾರು ಹಾಗೂ ಮಾರುತಿ ಓಮ್ನಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಶನಿವಾರ(ಡಿ.23) ಮಧ್ಯಾಹ್ನ ನಡೆದಿದೆ. ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಮೃತರನ್ನು ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ

ಕಡಬ: ಕ್ರೇಟಾ ಮತ್ತು ಓಮ್ನಿ ನಡುವೆ ಅಪಘಾತ| ಓರ್ವ‌ ಸಾವು, ಹಲವರು ಗಂಭೀರ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಭವಿಷ್ಯ ನೀಡಲಾಗಿದ್ದು ಡಿಸೆಂಬರ್‌ 24ರಿಂದ 30ರವರೆಗಿನ ರಾಶಿಭವಿಷ್ಯ ನೀಡಲಾಗಿದೆ ನೋಡಿ: ಮೇಷ ರಾಶಿ:ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಆತ್ಮೀಯರ ಸಲಹೆ ಪಡೆಯಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಕುಟುಂಬದೊಂದಿಗೆ ಚರ್ಚಿಸುವುದು ಒಳ್ಳೆಯದು. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ. ಹೊಸ ವ್ಯಾಪಾರ ಆರಂಭಿಸುವಾಗಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಿ. ವಾರದ ಆರಂಭದಲ್ಲೇ ಶುಭ ವರ್ತಮಾನವೊಂದು ಬರಲಿದೆ. ಅಧಿಕ ಖರ್ಚಿನಿಂದಾಗಿ ಮಾನಸಿಕ ಒತ್ತಡ ಕಾಡಬಹುದು. ಸಂಗೀತ ಧ್ಯಾನದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಆದಾಯ ಹೆಚ್ಚುವ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಶ್ರೀ ಪರಿವಾರ ಪಂಚಲಿಂಗೇಶ್ವರ ಪಂಜ ದೇಗುಲದ ಜಾತ್ರೋತ್ಸವ ಸಭೆ

ಸಮಗ್ರ ನ್ಯೂಸ್: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಭೆಯು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇಗುಲದ ಆಡಳಿತಾಧಿಕಾರಿ ಸುಳ್ಯ ತಹಸೀಲ್ದಾರ್ ಮಂಜುನಾಥ್ ರವರು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಜಿತ್ ಭಟ್ ಪಂಜಬೀಡು, ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಊರ ಭಕ್ತಾಭಿಮಾನಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ

ಶ್ರೀ ಪರಿವಾರ ಪಂಚಲಿಂಗೇಶ್ವರ ಪಂಜ ದೇಗುಲದ ಜಾತ್ರೋತ್ಸವ ಸಭೆ Read More »

ದೇವಾಲಯಗಳ ನಿರ್ವಹಣೆಗೆ ಕೋರ್ಸ್/ ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆ

ಸಮಗ್ರ ನ್ಯೂಸ್: ಮುಂಬೈ ವಿಶ್ವವಿದ್ಯಾಲಯ ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಈ ಒಡಂಬಡಿಕೆ ಅನ್ವಯ ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಈ ಡಿಪ್ಲೋಮಾ ಕೋರ್ಸ್ ಕಲಿಯಬಹುದಾಗಿದೆ. ಇತರ ಡಿಪ್ಲೋಮಾ ಕೋರ್ಸ್‍ಗಳಂತೆಯೇ ದೇವಾಲಯ ನಿರ್ವಹಣೆ ಕೋರ್ಸ್ ಕೂಡಾ ಇರಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.~ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಕೇಂದ್ರ ಹಾಗೂ ಸಂಸ್ಕøತ ವಿಭಾಗಗಳೂ ಜತೆಗೂಡಿವೆ. ಈ

ದೇವಾಲಯಗಳ ನಿರ್ವಹಣೆಗೆ ಕೋರ್ಸ್/ ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆ Read More »

ಪ್ರಶಸ್ತಿ ವಾಪಸ್ ಪ್ರತಿಭಟನೆ/ ಪದ್ಮಶ್ರೀ ವಾಪಸ್ ಮಾಡ್ತೇನೆ ಎಂದ ಗೂಂಗಾ ಪೆಹಲ್ವಾನ್

ಸಮಗ್ರ ನ್ಯೂಸ್: ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ ಐ)ದ ಅಧ್ಯಕ್ಷತೆಗೆ ಆಯ್ಕೆ ಮಾಡಿರುವುದನ್ನು ಪ್ರತಿಭಟಿಸಿ ನಾನು ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎಂದು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಗೂಂಗಾ ಪೆಹಲ್ವಾನ್ ಎಂದೂ ಕರೆಯಲ್ಪಡುವ ವೀರೇಂದ್ರ ಸಿಂಗ್ ಯಾದವ್ ಅವರು ಘೋಷಿಸಿದ್ದಾರೆ. 2021 ರಲ್ಲಿ ವೀರೇಂದ್ರ ಸಿಂಗ್ ಯಾದವ್ ಅವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಬಗ್ಗೆ ಟ್ವಿಟ್

ಪ್ರಶಸ್ತಿ ವಾಪಸ್ ಪ್ರತಿಭಟನೆ/ ಪದ್ಮಶ್ರೀ ವಾಪಸ್ ಮಾಡ್ತೇನೆ ಎಂದ ಗೂಂಗಾ ಪೆಹಲ್ವಾನ್ Read More »

ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ

ಸಮಗ್ರ ನ್ಯೂಸ್: ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ 10 ಜನರನ್ನು ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ನಾಲ್ವರು, 10 ಜನ ರಾಜ್ಯ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ. ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸಿ. ಮಂಜುಳಾ, ಯುವ ಮೋರ್ಚಾ ಅಧ್ಯಕ್ಷರಾಗಿ ಧೀರಜ್ ಮುನಿರಾಜು, ಎಸ್ ಟಿ ಮೋರ್ಚಾ ಅಧ್ಯಕ್ಷರಾಗಿ ಬಂಗಾರು ಹನುಮಂತು, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಶಾಸಕ ಸಿಮೆಂಟ್ ಮಂಜು, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾಗಿ ರಘು ಕೌಟಿಲ್ಯ, ರೈತ ಮೋರ್ಚಾ ಅಧ್ಯಕ್ಷರಾಗಿ

ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ Read More »

ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಾಸ್ ಪಡೆದಿಲ್ಲ/ ಉಲ್ಟಾ ಹೊಡೆದ್ರಾ ಸಿಎಂ ಸಿದ್ದರಾಮಯ್ಯ?

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ತೆರವಿನ ಬಗ್ಗೆ ಮಾತನಾಡಿದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಿಜಾಬ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿದ್ದರಾಮಯ್ಯ ಮತ್ತೆ ಮಾತನಾಡಿದ್ದು, ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಾಸ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರೋ ಪ್ರಶ್ನೆ ಕೇಳಿದ್ದರು, ಅದಕ್ಕೆ ಉತ್ತರ ಕೊಟ್ಟಿದ್ದೇನೆ ಅಷ್ಟೆ. ಹಿಜಾಬ್ ನಿಷೇಧ ಆದೇಶ ವಾಪಾಸ್ ಬಗ್ಗೆ ಯೋಚನೆ ಮಾಡುತ್ತಿದ್ದು, ಸರ್ಕಾರದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ನಂತರ ನಿರ್ಧಾರಕ್ಕೆ ಬರುತ್ತೇವೆ

ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಾಸ್ ಪಡೆದಿಲ್ಲ/ ಉಲ್ಟಾ ಹೊಡೆದ್ರಾ ಸಿಎಂ ಸಿದ್ದರಾಮಯ್ಯ? Read More »

ರಾಮಭಕ್ತರಿಗೆ ಶುಭಸುದ್ದಿ/ ಡಿ.30 ರಂದು ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ

ಸಮಗ್ರ ನ್ಯೂಸ್: ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಅಂದು ಏರ್ ಇಂಡಿಯಾದಿಂದ ಮೊದಲ ವಿಮಾನ ದೆಹಲಿಗೆ ಟೇಕ್ ಆಫ್ ಆಗಲಿದೆ. ಜ.6ರ ಬಳಿಕ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸಂಪರ್ಕ ಕಲ್ಪಿಸಲಾಗುತ್ತಿದೆ..ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ, ಸಂಸ್ಕøತಿಯ ಪ್ರತಿಬಿಂಬವಾಗಲಿದೆ. ದೇಶ ವಿದೇಶದ ಗಣ್ಯರು, ಪ್ರವಾಸಿಗರು ಭೇಟಿ ನೀಡುವ ಸಂದರ್ಭ ನಗರದ ಐತಿಹಾಸಿಕ ಮಹತ್ವ ಅವರ ಮುಂದೆ ಅನಾವರಣಗೊಳ್ಳಬೇಕಿದೆ. ಅಯೋಧ್ಯೆಯ

ರಾಮಭಕ್ತರಿಗೆ ಶುಭಸುದ್ದಿ/ ಡಿ.30 ರಂದು ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ Read More »