Ad Widget .

ಆಹ್ವಾನವಿಲ್ಲದ ಮದುವೆ ಕಾರ್ಯಕ್ರಮಗಳಿಗೆ ಹೋದರೆ ಜೈಲೂಟ ಗ್ಯಾರಂಟಿ!ಕಾರಣ ಹೀಗಿದೆ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಕ್ಷುಲಕ ಕಾರಣಗಳಿಗೆ ಮದುವೆ ಮನೆಗಳಲ್ಲಿ ಗಲಾಟೆಗಳಾಗಿರುವುದನ್ನು ನಾವು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಕೆಲವರು ಹೋಟೆಲಿಗೆ ಹೋಗುವ ಬದಲು ಯಾವುದಾದರು ಮದುವೆಗೆ ಹೋಗಿ ಭರ್ಜರಿ ಊಟ ಮಾಡೋಣ ಎಂದು ಬಯಸುತ್ತಾರೆ. ಆಹ್ವಾನವಿಲ್ಲದಿರುವ ಖಾಸಗಿ ಕಾರ್ಯಕ್ರಮಗಳಿಗೆ ಹೋಗಿ ಭರ್ಜರಿ ಭೋಜನ ಮಾಡಿ ಬರುತ್ತಾರೆ.
ಈ ರೀತಿಯ ದೃಶ್ಯಗಳನ್ನು ನಾವು ಸರ್ವೇಸಾಮಾನ್ಯವಾಗಿ ಚಿತ್ರ ಹಾಗೂ ಸೀರಿಯಲ್​ಗಳಲ್ಲಿ ನೋಡಿರುತ್ತೇವೆ.

Ad Widget . Ad Widget .

ಆದರೆ, ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ರೀತಿ ಆಹ್ವಾನವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಅಪರಾಧ ಎಂದು ತಿಳಿದು ಬಂದಿದೆ. ಈ ಕುರಿತ ಕುತೂಹಲಕಾರಿ ಮಾಹಿತಿಯನ್ನು ಸಿವಿಲ್ ನ್ಯಾಯಾಧೀಶೆ ಬಿ.ವಿ ಸ್ವಾತಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

ವೈರಲ್​ ಆಗಿರುವ ವಿಡಿಯೋದಲ್ಲಿ, ಆಹ್ವಾನವಿಲ್ಲದಿರುವ ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗೋದು ಖಂಡಿತವಾಗಿಯೂ ಒಂದು ಅಪರಾಧ. ಇದನ್ನು ʼಗೇಟ್ ಕ್ರ್ಯಾಶ್ʼ ಅಂತ ಕರೆಯುತ್ತಾರೆ. ಹೀಗೆ ಆಹ್ವಾನವಿಲ್ಲದ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡಿ ಬರುವ ದೃಶ್ಯಗಗಳನ್ನು ಸಿನೆಮಾಗಳಲ್ಲಿ ನೋಡಿರಬಹುದು. ನಿಜ ಜೀವನದಲ್ಲೂ ಈ ರೀತಿಯ ಹುಚ್ಚು ಸಾಹಸಕ್ಕೆ ಏನಾದ್ರೂ ಕೈ ಹಾಕಿದ್ರೆ, ಇದು ಖಂಡಿತವಾಗಿಯೂ ಅಪರಾಧವಾಗುತ್ತೆ ಎಂದಿದ್ದಾರೆ.
ಹೀಗೆ ನೀವೇನಾದ್ರೂ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ, ನಿಮ್ಮನ್ನು ಸೆಕ್ಷನ್ 442 ಮತ್ತು ಸೆಕ್ಷನ್ 452 ಇಂಡಿಯನ್ ಪಿನಲ್ ಕೋಡ್ ಪ್ರಕಾರ ಪೋಲಿಸರು ನಿಮ್ಮನ್ನು ಅರೆಸ್ಟ್ ಕೂಡಾ ಮಾಡಬಹುದು. ಅಲ್ಲದೆ ಈ ಒಂದು ತಪ್ಪಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎಂದು ವಿವರಿಸಿದ್ದಾರೆ.

ಡಿಸೆಂಬರ್​ 15ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಲಾಗಿದ್ದು, ಇಲ್ಲಿಯವರೆಗೂ 1 ಮಿಲಿಯನ್​ಗಿಂತಲೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ. ವಿಡಿಯೋ ನೋಡಿ ಹಲವರು ಕಮೆಂಟ್​ ಮಾಡಿದ್ದು, ಒಂದು ವೇಳೆ ಹಾಗೆ ಆದಲ್ಲಿ ನನಗೆ ಮತ್ತು ನನ್ನ ಸ್ನೇಹಿತರಿಗೆ ಕಂಡಲ್ಲಿ ಗುಂಡು ಆದೇಶವನ್ನು ಹೊರಡಿಸುತ್ತಾರೆ ಎಂದು ಕಮೆಂಟ್​ ಮಾಡಿದ್ದಾರೆ.

Leave a Comment

Your email address will not be published. Required fields are marked *