Ad Widget .

ಕೊಡಗು ಜಿಲ್ಲೆಯ ವಿರಾಜಪೇಟೆ ಹೊರತುಪಡಿಸಿ ನಾಲ್ಕು ತಾಲೂಕುಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸರ್ಕಾರ ಇದೀಗ ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳನ್ನು ತಾಲೂಕು ಮಟ್ಟದ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಿಗೆ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.

Ad Widget . Ad Widget .

ಪೊನ್ನಂಪೇಟೆ, ಕುಶಾಲನಗರ, ಮಡಿಕೇರಿ ಸೋಮವಾರಪೇಟೆ ತಾಲೂಕಿಗೆ ಆಡಳಿತ ಅಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ ವಿರಾಜಪೇಟೆ ತಾಲೂಕಿಗೆ ಆಡಳಿತ ಅಧಿಕಾರಿಯ ನೇಮಕವಾಗಿಲ್ಲ ಈ ಬಗ್ಗೆ ಪಟ್ಟಿಯಲ್ಲೂ ಕೂಡ ನಮೂದಿಸಿಲ್ಲ

Ad Widget . Ad Widget .

ಮಡಿಕೇರಿ ತಾಲೂಕಿನ ಆಡಳಿತ ಅಧಿಕಾರಿಯಾಗಿ ಕೆ.ಎ.ಎಸ್.ಹಿರಿಯ ಶ್ರೇಣಿ ಬಿ.ಎಸ್. ವೀಣಾ, ಸೋಮವಾರಪೇಟೆ ತಾಲೂಕಿಗೆ ಚಿದಾನಂದ ಎನ್.ಎಸ್., ಕುಶಾಲನಗರಕ್ಕೆ ಶ್ವೇತಾ ಜಿ.ಎನ್., ಪೊನ್ನಂಪೇಟೆಗೆ ಸಿ. ನಾಗರಾಜು ಇವರುಗಳನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ವಿರಾಜಪೇಟೆ ತಾಲೂಕಿಗೆ ಮಾತ್ರ ಇನ್ನು ಆಡಳಿತ ಅಧಿಕಾರಿಗಳ ನೇಮಕವಾಗಬೇಕಾಗಿದೆ.

Leave a Comment

Your email address will not be published. Required fields are marked *