ಸಮಗ್ರ ನ್ಯೂಸ್: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತವಾಗಿ 22 ವರ್ಷದ ಯುವಕ ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಾರ್ಗೊನ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.
ಕಾಟಕೂಟ್ ಜಿಲ್ಲೆಯ ಶಾಲಿಗ್ರಾಮ್ ಗುಜ್ಜಾರ್ ಗ್ರಾಮದ ನಿವಾಸಿ ಇಂಡಲ್ ಸಿಂಗ್ ಜಾಧವ್ ಬಂಜಾರ(22) ಎಂಬ ಯುವ ಕ್ರಿಕೆಟಿಗ ಮೃತಪಟ್ಟ ಯುವಕ.
ಕ್ರಿಕೆಟ್ ಪಂದ್ಯದ ವೇಳೆ ಬೌಲಿಂಗ್ ಮಾಡುತ್ತಿದ್ದಾಗ ಅಸ್ವಸ್ಥಗೊಂಡ ಇಂಡಲ್ ಸಿಂಗ್ ಜಾಧವ್ ಬಂಜಾರ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಕ್ರಿಕೆಟಿಗನನ್ನು ಕೂಡಲೇ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಬೌಲಿಂಗ್ ಮಾಡುವ ಮುನ್ನ ಬ್ಯಾಟ್ ಮಾಡಿದ್ದ ಇಂಡಲ್ ಸಿಂಗ್ ಜಾಧವ್ 70 ರನ್ ಗಳಿಸಿದ್ದರು. ಬೌಲಿಂಗ್ ಮಾಡುತ್ತಿದ್ದಾಗ ಎದೆ ನೋವು ಎಂದು ಮರದ ಕೆಳಗೆ ಹೋಗಿ ಕೂತಿದ್ದರು ಎಂದು ಸಹ ಆಟಗಾರರು ವಿವರಿಸಿದರು.