Ad Widget .

ಕೊಡಗಿನ ಯುವಕ ಬಾಗಲಕೋಟೆಯಲ್ಲಿ ಅಪಘಾತಕ್ಕೆ ಬಲಿ

ಸಮಗ್ರ ನ್ಯೂಸ್: ಬಾಗಲಕೋಟೆಯಲ್ಲಿ ಸಂಭವಿಸಿದ ಲಾರಿ ಅವಘಡದಲ್ಲಿ ಕೊಡಗು ಜಿಲ್ಲೆಯ ಯುವಕನೋರ್ವ ಅಸು ನೀಗಿದ್ದಾರೆ.

Ad Widget . Ad Widget .

ಸುಂಟಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ನಿವೃತ್ತ BSNL ಉದ್ಯೋಗಿ  ಹಾಗೂ ಶ್ರೀ ಕುರುಂಬ ಭಗವತಿ  ಕೊಡಂಗಲೂರಮ್ಮ ದೇವಸ್ಥಾನದ ಮುಖ್ಯಸ್ಥರಾದ ರಾಜಣ್ಣ ಅವರ ಪುತ್ರ ರಂಜನ್ (35) ಮೃತಪಟ್ಟವರಾಗಿದ್ದಾರೆ. ಆಮೇಜಾನ್ ಕಂಪನಿಯ ಉದ್ಯೋಗಿಯಾಗಿದ್ದ ರಂಜನ್ ಅವರಿಗೆ ಒಂದು ವಾರದ ಹಿಂದೆಯಷ್ಟೇ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು.

Ad Widget . Ad Widget .

ನೆನ್ನೆ ಮಧ್ಯಾಹ್ನ ಬಾಗಲಕೋಟೆಯಲ್ಲಿ  ಸ್ನೇಹಿತರೊದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಇವರಿದ್ದ ಕಾರಿಗೆ ಲಾರಿಯೊಂದು ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಗಂಭೀರ ಸ್ವರೂಪದ ಗಾಯವಾಗಿದ್ದ ರಂಜನ್ ಮತ್ತು ಇನ್ನಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆದರೆ ಇವರ ಪೈಕಿ ಚಿಕಿತ್ಸೆ ಫಲಕಾರಿಯಾಗದೇ  ರಂಜನ್  ನೆನ್ನೆ ರಾತ್ರಿ   ಕೊನೆ ಯುಸಿರು ಎಳೆದಿದ್ದಾರೆ.
*ಎಂಟು ತಿಂಗಳ ಅವಳಿ ಜವಳಿ ಮಕ್ಕಳನ್ನು ಅಗಲಿದ ರಂಜನ್*
ಮೃತ ರಂಜನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಕ್ಕಳು ಒಂದು ಹೆಣ್ಣು ಮತ್ತು ಒಂದು ಗಂಡು ಅವಳಿ ಜವಳಿ ಆಗಿದ್ದು, ಇವರು ಜನಿಸಿ . ಎಂಟು ತಿಂಗಳಷ್ಟೇ ಸಂದಿದೆ.

Leave a Comment

Your email address will not be published. Required fields are marked *