Ad Widget .

2024ರಲ್ಲಿ ಯಾರಿಗೆ ಎಷ್ಟು ರಜೆ? ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ನ್ಯೂಸ್: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದಂತೆಯೇ, ಬಹುತೇಕರ ದೃಷ್ಟಿ ಮೊದಲು ಹೋಗುವುದು ಈ ವರ್ಷದಲ್ಲಿ ಎಷ್ಟು ರಜೆಗಳಿವೆ ಎಂಬುದರ ಮೇಲೆ. 2024ರಲ್ಲಿ ವಿವಿಧ ವಿಭಾಗಗಳ ನೌಕರರಿಗೆ ಲಭ್ಯವಿರುವ ಕೆಲಸದ ದಿನಗಳು, ರಜಾ ದಿನಗಳು ಎಷ್ಟು ಎಂಬುದನ್ನು ಇಲ್ಲಿ ತಿಳಿಯೋಣ.

Ad Widget . Ad Widget .

ಶಾಲೆಯಲ್ಲಿ ಕೆಲಸ ನಿರ್ವಹಿಸುವವರಿಗೆ:
52 ಭಾನುವಾರ, 21 ಸಾರ್ವತ್ರಿಕ ರಜೆಗಳು, 15 ಸಾಂರ್ದಭಿಕ ರಜೆಗಳು ಹಾಗೂ 2 ಪರಿಮಿತ ರಜೆಗಳು, 5 ಸ್ಥಳೀಯ ರಜೆಗಳು ಸೇರಿದರೆ 95 ರಜೆಗಳಿದ್ದು ಕೆಲಸ ದಿನಗಳು 271 ಇರುತ್ತವೆ.

Ad Widget . Ad Widget .

ಬ್ಯಾಂಕ್ ನೌಕರರ ರಜೆಗಳು:
2024 ಅಧಿಕ ವರ್ಷವಾದ್ದರಿಂದ 366 ದಿನಗಳಿವೆ. 52 ಭಾನುವಾರ, 24 ಎರಡನೇ ಮತ್ತು ನಾಲ್ಕನೇ ಶನಿವಾರ, 21 ಸಾರ್ವತ್ರಿಕ ರಜಾದಿನಗಳು, ನೌಕರರಿಗಿರುವ 12 ವೈಯಕ್ತಿಕ ರಜೆಗಳು ಸೇರಿ ಒಟ್ಟು 109 ರಜಾದಿನಗಳಿವೆ. ಕೆಲಸದ ದಿನಗಳು 257 ಮಾತ್ರ. ಜನವರಿಯಲ್ಲಿ 13, 14 ಮತ್ತು 15 ಮೂರು ದಿನಗಳ ಹ್ಯಾಟ್ರಿಕ್ ರಜೆ ಬ್ಯಾಂಕ್ ನೌಕರರಿಗೆ ಲಭ್ಯ. ಫೆಬ್ರವರಿಯಲ್ಲಿ 29 ದಿನಗಳಿದ್ದರೂ ಒಂದೂ ಸಾರ್ವತ್ರಿಕ ರಜೆ ಇಲ್ಲ. ಮಾರ್ಚ್​ನಲ್ಲಿ 8, 9, 10 ದಿನಾಂಕಗಳು ಬ್ಯಾಂಕ್ ನೌಕರರಿಗೆ ದೊರೆಯಲಿರುವ ಮತ್ತೊಂದು ಹ್ಯಾಟ್ರಿಕ್ ರಜಾ ಸರಣಿ. ಮಾರ್ಚ್ 29 ಗುಡ್​ಫ್ರೈಡೇ ರಜೆ ಇದ್ದು 30ರಂದು ಹೋಲಿ ಸ್ಯಾಟರ್ಡೆ ಪರಿಮಿತ ರಜೆ ಹಾಕಿಕೊಂಡರೆ 31ರ ಭಾನುವಾರ ಸೇರಿ 3 ದಿನಗಳ ರಜೆಯನ್ನು ನೌಕರರು ಪಡೆಯಬಹುದು.

ಏಪ್ರಿಲ್​ನಲ್ಲಿ 9ರಂದು ಯುಗಾದಿ, 11ರಂದು ರಂಜಾನ್. ಇವುಗಳ ಮಧ್ಯೆ 10 ಮತ್ತು 12ರಂದು ಸಾಂರ್ದಭಿಕ ರಜೆ ಹಾಕಿದರೆ 13ರ 2ನೇ ಶನಿವಾರ ಸೇರಿ 5 ದಿನಗಳ ದೀರ್ಘ ರಜೆ. 14 ಮತ್ತು 21ರ ಭಾನುವಾರಗಳಂದು ಕ್ರಮವಾಗಿ ಅಂಬೇಡ್ಕರ್ ಮತ್ತು ಮಹಾವೀರ ಜಯಂತಿ ಇರುವುದರಿಂದ 2 ರಜೆಗಳು ಕಡಿಮೆಯಾಗಿ ಎರಡು ಕೆಲಸದ ದಿನಗಳು ಹೆಚ್ಚಾಗಿವೆ. ಜೂನ್​ನಲ್ಲಿ ಮುಸ್ಲಿಂ ನೌಕರರು 17ಕ್ಕೆ 1 ಸಾಂರ್ದಭಿಕ ರಜೆ ಹಾಕಿಕೊಂಡರೆ 16, 17 ಮತ್ತು 18ರ ಮೂರು ದಿನ ರಜಾ ಮಾಡಬಹುದು. ಸೆಪ್ಟೆಂಬರ್​ನಲ್ಲಿ 6ರಂದು ಸ್ವರ್ಣಗೌರಿ ವ್ರತಕ್ಕೆ ಪರಿಮಿತ ರಜೆ ಹಾಕಿಕೊಂಡರೆ 7ರಂದು ಗಣೇಶ ಚತುರ್ಥಿ ರಜೆ ಇದ್ದು 8ರ ಭಾನುವಾರಕ್ಕೆ ರಜೆ ಮುಂದುವರೆಯುವುದರಿಂದ ಮಹಿಳಾ ನೌಕರರು 3 ದಿನಗಳ ಹಬ್ಬವನ್ನು ಸಂಭ್ರಮಿಸಬಹುದು. ಬ್ಯಾಂಕ್ ನೌಕರರಿಗೆ 14, 15 ಮತ್ತು 16ರಂದು ಮತ್ತೊಂದು ಹ್ಯಾಟ್ರಿಕ್ ರಜೆ ದೊರೆಯಲಿದೆ. ಅಕ್ಟೋಬರ್​ನಲ್ಲಿ 11, 12 ಮತ್ತು 13 ಸರಣಿ ರಜೆ ಇವೆ. 12ರ ಎರಡನೇ ಶನಿವಾರ ವಿಜಯದಶಮಿಯ ಸಾರ್ವತ್ರಿಕ ರಜೆ ಬಂದಿದೆ. ಅಕ್ಟೋಬರ್ 31 ನರಕಚತುರ್ದಶಿ, ನವೆಂಬರ್ 1 ರಾಜ್ಯೋತ್ಸವ, 2ರ ಬಲಿಪಾಡ್ಯಮಿ, 3ರ ಭಾನುವಾರ ರಜೆ ಇದೆ.

ರಜಾ ಪಟ್ಟಿ ವಿವರ: 2024ರ ಸರ್ಕಾರಿ ರಜೆಗಳ ಪಟ್ಟಿ ಹೀಗಿದೆ…

  • ಜ. 15, ಸೋಮವಾರ- ಮಕರ ಸಂಕ್ರಾಂತಿ
  • ಜ. 26, ಶುಕ್ರವಾರ- ಗಣರಾಜ್ಯೋತ್ಸವ
  • ಮಾ. 8, ಶುಕ್ರವಾರ- ಮಹಾ ಶಿವರಾತ್ರಿ
  • ಮಾ. 29, ಶುಕ್ರವಾರ- ಗುಡ್ ಪ್ರೖೆಡೇ
  • ಏ. 9, ಮಂಗಳವಾರ- ಯುಗಾದಿ
  • ಏ. 11, ಗುರುವಾರ- ರಂಜಾನ್
  • ಮೇ 1, ಬುಧವಾರ- ಕಾರ್ವಿುಕರ ದಿನಾಚರಣೆ
  • ಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯ
  • ಜೂ. 17, ಸೋಮವಾರ- ಬಕ್ರೀದ್
  • ಜು. 17, ಬುಧವಾರ- ಮೊಹರಂ ಕಡೇದಿನ
  • ಆ. 15, ಗುರುವಾರ- ಸ್ವಾತಂತ್ರ್ಯ ದಿನಾಚರಣೆ
  • ಸೆ. 7, ಶನಿವಾರ- ವರಸಿದ್ಧಿ ವಿನಾಯಕ ವ್ರತ
  • ಸೆ. 16, ಸೋಮವಾರ- ಈದ್ ಮಿಲಾದ್
  • ಅ. 2, ಬುಧವಾರ- ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ
  • ಅ. 11, ಶುಕ್ರವಾರ- ಮಹಾನವಮಿ/ ಆಯುಧ ಪೂಜೆ
  • ಅ. 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿ
  • ಅ. 31, ಗುರುವಾರ- ನರಕ ಚತುರ್ದಶಿ
  • ನ. 1, ಶುಕ್ರವಾರ- ಕನ್ನಡ ರಾಜ್ಯೋತ್ಸವ
  • ನ. 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿ
  • ನ. 18, ಸೋಮವಾರ- ಕನಕದಾಸ ಜಯಂತಿ
  • ಡಿ. 25, ಬುಧವಾರ- ಕ್ರಿಸ್​ಮಸ್

ಅಂಬೇಡ್ಕರ್ ಜಯಂತಿ (14.4.2024) ಮತ್ತು ಮಹಾವೀರ ಜಯಂತಿ (21.04.2024) ಭಾನುವಾರ ಹಾಗೂ ಸೌರ ವಿಜಯ ದಶಮಿ (12.10.2024) 2ನೇ ಶನಿವಾರ ಆದ ಕಾರಣ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ. 1.4.2024ರ ಬ್ಯಾಂಕುಗಳ ಹಾಗೂ ಸರ್ಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯ ದಿನ ಆಗಿರುವುದರಿಂದ ಆ ದಿನದಂದು ವಾಣಿಜ್ಯ ಹಾಗೂ ಸರ್ಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ.

Leave a Comment

Your email address will not be published. Required fields are marked *