Ad Widget .

ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ

ಸಮಗ್ರ ನ್ಯೂಸ್: ಮಂಗಳೂರು-ಮಡಂಗಾವ್ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಮಂಗಳೂರು-ಮಡಗಾಂವ್ ಮೊದಲ ರೈಲು ಸೇವೆ ಆರಂಭಿಸಲಿದೆ.

Ad Widget . Ad Widget .

ವಾರದ ಆರು ದಿನ ಮಂಗಳೂರಿನಿಂದ ಮಡಂಗಾವ್‌ಗೆ ಈ ವಂದೇ ಭಾರತ್ ರೈಲು ಓಡಾಟ ನಡೆಸಲಿದೆ. ಬೆಳಗ್ಗೆ 8.30 ಕ್ಕೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪಲಿದೆ. ಎಂಟು ಬೋಗಿಯನ್ನು ಒಳಗೊಂಡ 20646 ನಂಬರ್‌ನ ವಂದೇ ಭಾರತ್ ರೈಲು ಇದಾಗಿದ್ದು, ಮಂಗಳೂರು-ಉಡುಪಿ-ಕಾರವಾರ ಮೂಲಕ ಮಡಂಗಾವ್‌ಗೆ ಪ್ರಯಾಣಿಸಲಿದೆ.

Ad Widget . Ad Widget .

ಇನ್ನೂ ಸಂಜೆ 6.10 ಕ್ಕೆ ಮಡಂಗಾವ್‌ನಿಂದ ಹೊರಟರೆ ರಾತ್ರಿ 10.45 ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ.

Leave a Comment

Your email address will not be published. Required fields are marked *