Ad Widget .

ಸುಳ್ಯ: ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆ| ಹಲವು ಕಡೆಗಳಲ್ಲಿ ಕಳ್ಳರ ಕೈಚಳಕ| ಸುಳ್ಯ ಪೊಲೀಸರು ಏನ್ಮಾಡ್ತಿದ್ದಾರೆ?

ಸಮಗ್ರ ನ್ಯೂಸ್: ಸುಳ್ಯ ತಾಲ್ಲೂಕಿನ ಹಲವೆಡೆ ಅಪರಾಧ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸರು ನಿಷ್ಕ್ರಿಯವಾಗಿರುವುದು ಆತಂಕ ಸೃಷ್ಟಿಸುತ್ತಿದೆ.

Ad Widget . Ad Widget .

ತಾಲೂಕಿನ ಹಲವೆಡೆ ದಿನಂಪ್ರತಿ ಕಳ್ಳತನಗಳು ನಡೆಯುತ್ತಿದ್ದು, ತನಿಖೆಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಪೊಲೀಸರು ನೆಪಮಾತ್ರಕ್ಕೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದು, ಇದುವರೆಗೆ ಹಲವು ಪ್ರಕರಣಗಳು ಕೊಳೆತು ಹೋಗಿವೆ.

Ad Widget . Ad Widget .

ಕಳೆದ ಒಂದೆರಡು ತಿಂಗಳಲ್ಲಿ ಸುಳ್ಯ‌ ಠಾಣಾ ವ್ಯಾಪ್ತಿಯ ಜಾಲ್ಸೂರು, ಕನಕಮಜಲುಗಳಲ್ಲಿ ಹಲವಾರು ಮನೆ, ಅಂಗಡಿಗಳ ಒಳನುಗ್ಗಿರುವ ಕಳ್ಳರು ನಗ-ನಗದು ದೋಚಿದ್ದಾರೆ. ಅದಾದ ಬಳಿಕ ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲೂ ಕಳ್ಳತನ ನಡೆದಿತ್ತು. ಆದರೆ ಈ ಎಲ್ಲಾ ಪ್ರಕರಣಗಳೂ ಹಳ್ಳ ಹಿಡಿದಿವೆ.

ಇಷ್ಟು ಸಾಲದೆಂಬಂತೆ ಐವರ್ನಾಡು ಸರ್ಕಾರಿ ಶಾಲೆಗೂ ಕಳ್ಳರು ನುಸುಳಿದ್ದು, ನಗದು ದೋಚಿದ್ದಾರೆ. ಪೊಲೀಸರು ಮಾತ್ರ ನಮಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲವೆಂದು ಸುಮ್ಮನಿರುವುದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.

ಹೆಲ್ಮೆಟ್ ಕಡ್ಡಾಯವಿಲ್ಲ:
ಸುಳ್ಯ ನಗರದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೇ‌ ಚಾಲನೆ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸುಳ್ಯ ನಗರಲದಲ್ಲಿ ಪೊಲೀಸರ ಎದುರೇ ಹೆಲ್ಮೆಟ್ ಇಲ್ಲದೆ ಡಬ್ಬಲ್ ರೈಡ್, ತ್ರಿಬಲ್ ರೈಡ್ ನಡೆದರೂ‌ ಪೊಲೀಸರು ಬೈಕ್ ಗಳನ್ನು ವಶ ಪಡೆಯುತ್ತಿಲ್ಲ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ.

ಅಧೊಗತಿಯತ್ತ ಪಾರ್ಕಿಂಗ್:
ಸುಳ್ಯ ನಗರದಲ್ಲಿ ಪಾರ್ಕಿಂಗ್ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ನಗರದಾದ್ಯಂತ ಬೇಕಾದ ಕಡೆಗಳಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ. ಈ ವ್ಯವಸ್ಥೆಯಿಂದ ನಗರದಲ್ಲಿ ಟ್ರಾಫಿಕ್ ಜ್ಯಾಂ ಸಂಭವಿಸುತ್ತಿದ್ದರೂ ಇದರ ನಿರ್ವಹಣೆ ಮಾಡಲಾಗುತ್ತಿಲ್ಲ.‌ ಗಾಂಧಿನಗರ ಭಾಗದಲ್ಲಿ ಎಲ್ಲೆಂದರಲ್ಲಿ ವಾಹನಗಳು ಪಾರ್ಕ್ ಆಗುತ್ತಿದ್ದು ನಗರಾಡಳಿತ ಅಥವಾ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲು ಮುತುವರ್ಜಿ ವಹಿಸುತ್ತಿಲ್ಲ.

ಸುಳ್ಯದಲ್ಲಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಈ ಸಮಸ್ಯೆ ಇದೆ. ಯಾತ್ರಾ ಕ್ಷೇತ್ರ ಸುಬ್ರಹ್ಮಣ್ಯದಲ್ಲೂ ಪಾರ್ಕಿಂಗ್ ಅವ್ಯವಸ್ಥಿತ ರೀತಿಯಲ್ಲಿ ಕೂಡಿದ್ದು, ಈ ಕುರಿತು ಕ್ರಮ ವಹಿಸಬೇಕಿದೆ. ಇನ್ನಾದರೂ ಸುಳ್ಯ ಸರ್ಕಲ್ ವ್ಯಾಪ್ತಿಯ ಪೊಲೀಸರು ನಿದ್ದೆಯಿಂದ ಎದ್ದೇಳುವುದು ಬೆಟರ್.

Leave a Comment

Your email address will not be published. Required fields are marked *