ಸಮಗ್ರ ನ್ಯೂಸ್: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಮತ್ತು ಸೇವಾ ಭಾರತಿ Helpline ಟ್ರಸ್ಟ್ ಸುಳ್ಯ ಇವುಗಳ ಸಹಯೋಗದಲ್ಲಿ ಬಾಲಸಂಗಮ ಕಾರ್ಯಕ್ರಮವು ವಿನೋಬನಗರ ರಾಷ್ಟ್ರೋತ್ಥಾನ ಶಿಶು ಮಂದಿರದಲ್ಲಿ ಡಿ.25 ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಆಧ್ಯಾತ್ಮಿಕ ಮಹಿಳಾ ಸಂಯೋಜಕಿ ತ್ರಿವೇಣಿ ವಿಶ್ವೇಶ್ವರ ಬಾಳಿಲ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ . ಸೀತಾರಾಮ ಪ್ರಸ್ತಾವಿಕವಾಗಿ ಮಾತುಗಳನ್ನಾಡಿದರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹ ಕಾರ್ಯವಾಹ ಸುಭಾಷ್ ಚಂದ್ರ ಕಳಂಜ, ಸೇವಾ ಭಾರತಿ Helpline ಟ್ರಸ್ಟ್ ಅಧ್ಯಕ್ಷರಾದ ಡಾ. ಮನೋಜ್ ನೀವೇದಿತ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಇಂದಿರಾ ರೈ ಮತ್ತು ಪದಾಧಿಕಾರಿಗಳು ,ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಉದ್ಯೋಗಿ ಕಾರ್ಯಕ್ರಮ ಪ್ರಮುಖ್ ಸುರೇಶ್ ಅರಂಬೂರು, ಶಾಲಾ ಮುಖ್ಯ ಶಿಕ್ಷಕರಾದ ಗಿರೀಶ್ ಕುಮಾರ್. ಎ., ಜಯಪ್ರಸಾದ್ ಕಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು
ತಾಲೂಕಿನ 15 ಬಾಲ ಗೋಕುಲ ಕೇಂದ್ರಗಳಿಂದ ಮತ್ತು ಪೂರ್ವ ಪ್ರಾರ್ಥಮಿಕ ದಿಂದ 9ನೇ ತರಗತಿ ವರೆಗಿನ 500 ಬಾಲಕ ಬಾಲಕಿಯರು ಭಾಗವಹಿಸಿದ್ದರು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕು ವೇದಿಕೆಗಳಲ್ಲಿ ಏಕಕಾಲದಲ್ಲಿ ಸ್ಪರ್ಧೆಗಳು ನಡೆಯಿತು. ಭಗವದ್ಗೀತೆ ಕಂಠಪಾಠ ದೇಶಭಕ್ತಿ ಗೀತೆ, ಜನಪದ ಗೀತೆ ಕುಣಿತ ಭಜನೆ ಮುಂತಾದ ಸ್ಪರ್ಧೆಗಳಲ್ಲಿ ಪುಟಾಣಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪೆನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು.
ರಾಷ್ಟ್ರೋತ್ಥಾನ ಶಿಶು ಮಂದಿರದ ಮಾತಾಜಿಯವರು ಹಾಗೂ ಶಾಲೆಯ ಶಿಕ್ಷಕರು, ಪೋಷಕರು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ಕುಮಾರಿ ಧನ್ಯಶ್ರೀ ಪ್ರಾರ್ಥಿಸಿದರು. ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷೆ ಇಂದಿರಾ ರೈ ಯವರು ಸ್ವಾಗತಿಸಿದರು, ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ವಂದಿಸಿದರು, ಶಿಕ್ಷಕಿ ಕುಮಾರಿ ತೇಜಸ್ವಿನಿ ಕಾರ್ಯಕ್ರಮ ನಿರೂಸಿದರು, ಕೊನೆಗೆ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.