ಪುತ್ತೂರು ನಗರಸಭೆ ಉಪಚುನಾವಣೆ| ಕಾಂಗ್ರೆಸ್ ಬಿಜೆಪಿಗೆ ತಲಾ ಒಂದು ಸ್ಥಾನ| ಸೋಲುಂಡ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್: ಪುತ್ತೂರು ನಗರಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪುತ್ತಿಲ ಪರಿವಾರದ ಅಭ್ಯರ್ಥಿಗಳು ಎರಡೂ ಕಡೆ ಸೋಲು ಕಂಡಿದ್ದಾರೆ.

Ad Widget ... ..

ವಾರ್ಡ್ 1ರಲ್ಲಿ ಕಾಂಗ್ರೆಸ್‌ನ ದಿನೇಶ ಶೇವಿರೆ 427 ಮತಗಳನ್ನು ಪಡೆಯುವ ಮೂಲಕ ಪುತ್ತಿಲ ಪರಿವಾರದ ಅನ್ನಪೂರ್ಣ (308 ಮತ) ವಿರುದ್ದ ಗೆಲುವಿನ ನಗೆ ಬೀರಿದರು. ಬಿಜೆಪಿ ಯ ಸುನೀತಾ 219 ಮತ ಗಳಿಸಿ ಮೂರನೇ‌ ಸ್ಥಾನಕ್ಕೆ ತೃಪ್ತಿ ಪಟ್ಟರು. ನೋಟಾಕ್ಕೆ‌ ನಾಲ್ಕು ಮತಗಳು ಚಲಾವಣೆ ಆಗಿವೆ.

Ad Widget

ವಾರ್ಡ್ 11ರಲ್ಲಿ ಬಿಜೆಪಿಯ ರಮೇಶ್ ರೈ ಅವರು 431 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ದಾಮೋದರ ಭಂಡಾರ್ಕರ್ (400 ಮತ) ವಿರುದ್ಧ ಗೆಲುವು ಸಾಧಿಸಿದರು. ಇಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಚಿಂತನ್‌ 216 ಮತ ಪಡೆದಿದ್ದಾರೆ. ‌ನೋಟಾಕ್ಕೆ‌ 6 ಮತಗಳು ಚಲಾವಣೆ ಆಗಿವೆ.

ಇಬ್ಬರು ಸದಸ್ಯರ ಅಕಾಲಿಕ ಮರಣದಿಂದಾಗಿ ತೆರವಾಗಿದ್ದ ಎರಡು ಸ್ಥಾನಗಳಿಗೆ‌ ಡಿ.27ರಂದು ಮತದಾನ‌ ನಡೆದಿತ್ತು.

Leave a Comment

Your email address will not be published. Required fields are marked *