Ad Widget .

ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ| ಹಲವು ಇಂಗ್ಲೀಷ್ ಫಲಕಗಳ ನಾಶ

ಸಮಗ್ರ ನ್ಯೂಸ್: ಇಂಗ್ಲಿಷ್‌ ಫಲಕಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಕಿಚ್ಚು ಮುಂದುವರೆದಿದ್ದು, ಬೆಂಗಳೂರಿನಲ್ಲಿ ರಾತ್ರಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

Ad Widget . Ad Widget .

ಬೆಂಗಳೂರಿನ ಆರ್‌.ಆರ್‌ ನಗರದ ಗೋಪಾಲನ್‌ ಮಾಲ್‌ ನಲ್ಲಿ ಕರವೇ ಕಾರ್ಯಕರ್ತರು ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ. ನಾರಾಯಣಗೌಡ್ರು ಅರೆಸ್ಟ್‌ ಆದ್ರೆ ಏನು? ನಾವು ಕಾರ್ಯಕರ್ತರು ಹೊರಗೆ ಇದ್ದೇವೆ ಎಂದು ಹೇಳಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ.

Ad Widget . Ad Widget .

ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಭಾರೀ ಪ್ರತಿಭಟನೆ ಹಮ್ಮಿಕೊಂಡಿತ್ತು. ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂಬಂಧ 10 ಎಫ್​ಐಆರ್​ ದಾಖಲು ಮಾಡಲಾಗಿದ್ದು, ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Leave a Comment

Your email address will not be published. Required fields are marked *