Ad Widget .

ಸುಳ್ಯ: ಸಪ್ತಪದಿ ತುಳಿದ ಮಜಾಭಾರತ ಖ್ಯಾತಿಯ ಪ್ರಿಯಾಂಕಾ ಕಾಮತ್

ಸಮಗ್ರ ನ್ಯೂಸ್: ಮಜಾಭಾರತ’ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರಿಯಾಂಕಾ ಕಾಮತ್ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಮಿತ್ ನಾಯಕ್ ಅವರೊಂದಿಗೆ ಪ್ರಿಯಾಂಕಾ ಕಾಮತ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

Ad Widget . Ad Widget .

ಪ್ರಿಯಾಂಕಾ ಹಾಗೂ ಅಮಿತ್ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. ಮದುವೆಯ ಫೋಟೋಗಳನ್ನು ಪ್ರಿಯಾಂಕಾ ಕಾಮತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಕಾಮತ್ ಅವರ ಮದುವೆಯ ಫೋಟೋವನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

Ad Widget . Ad Widget .

ಸುಳ್ಯದವರಾದ ಪ್ರಿಯಾಂಕ ಇಲ್ಲೇ ಹಸೆಮಣೆ ಏರಿದರು. ಇನ್ನು ಮದುವೆಯಲ್ಲಿ ಕೆಂಪು ಬಣ್ಣದ ಸೀರೆಯನ್ನು ಉಟ್ಟಿರುವ ಪ್ರಿಯಾಂಕಾ ಅದಕ್ಕೊಪ್ಪುವ ಹಸಿರು ಬಣ್ಣದ ಬ್ಲೌಸ್, ಜೊತೆಗೆ ದಾವಣಿಯನ್ನು ಧರಿಸಿದ್ದಾರೆ. ಇನ್ನು ಅಮಿತ್ ನಾಯಕ್ ಅವರು ಕೆಂಪು ಬಣ್ಣದ ರೇಷ್ಮೆ ಶಾಲು ಹಾಗೂ ಬಿಳಿಯ ಪಂಚೆಯಲ್ಲಿ ಮಿಂಚಿದ್ದರು.

ಅಂದ ಹಾಗೇ ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ನಾಯಕ್ ಅವರ ವಿವಾಹ ನಿಶ್ಚಿತಾರ್ಥ ಈ ವರ್ಷ ಆರಂಭದಲ್ಲಿ ನಡೆದಿತ್ತು. ಇತ್ತೀಚೆಗೆ ಪ್ರಿಯಾಂಕಾ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದ ಕಾರಣ ಮದುವೆಯನ್ನು ಮುಂದೂಡಲಾಗಿತ್ತು. ಇತ್ತೀಚೆಗಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ಹಳದಿ, ಸಂಗೀತ್, ಮದುವೆ ಹಾಗೂ ರಿಸೆಪ್ಶನ್ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಕಾಮತ್ ಅವರ ಕಿರುತೆರೆ ಪಯಣ ಶುರುವಾದುದು ‘ಚಾಂಪಿಯನ್’ ಶೋ ಮೂಲಕ. ಮುಂದೆ ‘ಮಜಾಭಾರತ’ ಶೋ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದ ಪ್ರಿಯಾಂಕಾ ಮುಂದೆ ನಾಲ್ಕು ಸೀಸನ್‌ಗಳಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಮಾತ್ರವಲ್ಲದೇ ತಮ್ಮ ಮುದ್ದಾದ ನಟನೆಯ ಜೊತೆಗೆ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಈಕೆ ಯಶಸ್ವಿಯಾದರು.

Leave a Comment

Your email address will not be published. Required fields are marked *