Ad Widget .

ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಬೆದರಿಕೆ ಸಂದೇಶ…! FIR ದಾಖಲು

ಸಮಗ್ರ ನ್ಯೂಸ್: ಡಿಸೆಂಬರ್ 26ರಂದು ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರುವುದಾಗಿ [email protected] ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಅದಾನಿ ಆಡಳಿತದ ಮಂಗಳೂರು ಏರ್ಪೋರ್ಟ್ ಸಂಸ್ಥೆ ಬಜಪೆ ಠಾಣೆಗೆ ದೂರು ನೀಡಿತ್ತು. ಇದೀಗ ಹುಸಿ ಬಾಂಬ್ ಇ-ಮೇಲ್​ ಸಂದೇಶಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಾಗಿದೆ, ನ್ಯಾಯಾಲಯದ ಅನುಮತಿ ಪಡೆದುಕೊಂಡು ಐಪಿಸಿ 507 ಅಡಿ‌ ಪ್ರಕರಣ ದಾಖಲಾಗಿದೆ.

Ad Widget . Ad Widget .

‘FUNING’ ಎಂಬ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿಕೊಂಡು ಬೆದರಿಕೆ ಹಾಕಲಾಗಿತ್ತು. ಆದ್ರೆ, ಮಂಗಳೂರು ಏರ್​​ಪೋರ್ಟ್ ಆಡಳಿತ ಮಂಡಳಿ ಡಿಸೆಂಬರ್ .27ರಂದು ಇ-ಮೇಲ್ ಗಮನಿಸಿ ಅಲರ್ಟ್ ಆಗಿದ್ದು, ಭದ್ರತಾ ತಂಡ ಏರ್ಪೋರ್ಟ್ ನಲ್ಲಿ ತೀವ್ರ ತಪಾಸಣೆ ನಡೆಸಿತ್ತು. ಅಲ್ಲದೇ ಸಿಐಎಸ್ ಎಫ್ ಹಾಗೂ ಬಜಪೆ ಪೊಲೀಸರು ಸಹ ತೀವ್ರ ಶೋಧ ನಡೆಸಿದ್ದರು.

Ad Widget . Ad Widget .

ಕೊನೆಗೆ ಇದರೊಂದು ಹುಸಿ ಬಾಂಬ್ ಕರೆ ಎಂದು ಖಾತ್ರಿಯಾಗಿತ್ತು. ಬಳಿಕ ಮಂಗಳೂರು ವಿಮಾನ ನಿಲ್ದಾಣ ಆಡಳಿತ ಮಂಡಳಿ ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಇದೀಗ ನ್ಯಾಯಾಲಯದ ಅನುಮತಿಯಿಂದ ಐಪಿಸಿ 507 ಅಡಿ‌ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

Leave a Comment

Your email address will not be published. Required fields are marked *