ಸಮಗ್ರ ನ್ಯೂಸ್: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ವತಿಯಿಂದ ಉಪ್ಪಿನಂಗಡಿಯ ಸರ್ವೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ 15ನೇ ಉಪ್ಪಿನಂಗಡಿ ಶಾಖೆಯು ಗುರುವಾಯನಕೆರೆ ರಸ್ತೆಯ ಎಚ್.ಎಂ ಆಡಿಟೋರಿಯಂ ಬಳಿಯಿರುವ ಬಿ.ಎಂ ಆರ್ಕೇಡ್ ಗೆ ಸ್ಥಳಾಂತರಗೊಂಡು ಡಿ.28ರಂದು ಶುಭಾರಂಭಗೊಂಡಿತು.
ಕೆಎಸ್ಆರ್ ಟಿಸಿ ನಿವೃತ್ತ ಸಂಚಾರ ನಿಯಂತ್ರಕ ಬೆಳ್ಯಪ್ಪ ಗೌಡ ಕಣಿಯ ದೀಪ ಬೆಳಗಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ.ಸಿ ಜಯರಾಮ ವಹಿಸಿದ್ದರು. ಅತಿಥಿಗಳಾಗಿ ಉಪ್ಪಿನಂಗಡಿ ಅಶ್ವಿನಿ ಇಲೆಕ್ಟ್ರಾನಿಕ್ಸ್ ಮಾಲಕ ಹಾಗೂ ಉದ್ಯಮಿ ಪ್ರಕಾಶ್, ಬಿ.ಎಂ ಆರ್ಕೇಡ್ ಮಾಲಕ ಇಮ್ತಿಯಾಝ್ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಕೆ.ಸಿ ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು. ಮೋಹನ್ ರಾಮ್ ಸುಳ್ಳಿ ಸ್ವಾಗತಿಸಿ, ದಿನೇಶ್ ಮಡಪ್ಪಾಡಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ, ಸಹಾಯಕ ವ್ಯವಸ್ಥಾಪಕ ಕುಸುಮಾಧರ ಗುಡ್ಡೆ, ಶಾಖಾ ವ್ಯವಸ್ಥಾಪಕ ಕೃಷ್ಣಪ್ರಸಾದ್, ಸಿಬ್ಬಂದಿಗಳಾದ ನಿಕ್ಷಿತಾ, ಲೋಕೇಶ್, ಕಾರ್ತಿಕ್, ಸುರೇಶ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.