Ad Widget .

ಇಂಗ್ಲಿಷ್ ಬೋರ್ಡ್ ವಿರುದ್ಧ ಕರವೇ ಮೆಗಾ ಸಮರ… ಫೆ. 28ರ ಒಳಗೆ ಕನ್ನಡ ಬೋರ್ಡ್ ಹಾಕಿಸುವುದಾಗಿ ಪಾಲಿಕೆ ಭರವಸೆ..!

ಸಮಗ್ರ ನ್ಯೂಸ್: ಕನ್ನಡ ನಾಡು ನುಡಿಯನ್ನು ಹೊತ್ತ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಕಡೆಗಣನೆಯಾಗಿದೆ.
ಬೋರ್ಡ್​ಗಳಲ್ಲಿ ಕನ್ನಡ ಬಳಕೆ ಕಡ್ಡಾಯಕ್ಕೆ ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಧರಣಿ ಮಾಡಿದೆ.
ನಗರದೆಲ್ಲೆಡೆ ಕನ್ನಡ ಇಲ್ಲದ ಬೋರ್ಡ್ ಗಳಿಗೆ ಮಸಿ, ಕಲ್ಲು ತೂರಾಟ ದೃಶ್ಯಗಳು ಇಂದು ಕಂಡುಬಂದಿದೆ.

Ad Widget . Ad Widget .

ಕನ್ನಡ ನಾಮಫಲಕಗಳಲ್ಲಿ ಶೇಕಡಾ 60% ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕೆಂಬ ನಿಯಮವಿದ್ದರೂ ಪರಭಾಷಿಕ ಉದ್ಯಮಿಗಳ ಕನ್ನಡ ವಿರೋಧಿ ಧೋರಣೆ ಮುಂದುವರೆದಿದೆ.

Ad Widget . Ad Widget .

ಬೆಳ್ಳಂಬೆಳಗೆ ಕನ್ನಡ ಬಾವುಟ ಹಿಡಿದು ರಸ್ತೆಗಿಳಿದ ಸಾವಿರಾರು ಚಳವಳಿಗಾರರು ಮಾಲ್, ವಾಣಿಜ್ಯ ಕಟ್ಟಡ, ಸೂಪರ್ ಮಾರ್ಕೆಟ್ ಗಳಿಗೆ ನುಗ್ಗಿ ಇಂಗ್ಲಿಷ್ ನಾಮಫಲಕ ಕಿತ್ತೆಸೆದರು.

ನಗರದ ಲಾವೆಲ್ಲೆ ರಸ್ತೆಯನಲ್ಲಿ ಇಂಗ್ಲಿಷ್ ಫಲಕ ಒಡೆದಾಕಿದ್ದಕ್ಕೆ 15 ಕರವೇ ಕಾರ್ಯಕರ್ತರ ವಿರುದ್ಧ FIR ದಾಖಲು ಮಾಡಲಾಗಿದೆ. 15 ಕರವೇ ಕಾರ್ಯಕರ್ತರ ಬಂಧನ ಖಂಡಿಸಿ ಇತರೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಕೂರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ 15 ಕರವೇ ಕಾರ್ಯಕರ್ತರನ್ನ ಪೊಲೀಸರು ಮೆಡಿಕಲ್ ಟೆಸ್ಟ್​ಗೆ ಕರೆದುಕೊಂಡು ಹೋಗಿದ್ದಾರೆ.

ಪ್ರತಿಭಟನೆ ವೇಳೆ ವಶಕ್ಕೆ ಪಡೆದಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈ ವೇಳೆ ಯಲಹಂಕದಲ್ಲಿರುವ ಪೊಲೀಸ್​ ಡ್ರೈವಿಂಗ್​ ಸ್ಕೂಲ್ ಬಳಿಯ ರಸ್ತೆ ತಡೆದು ಮಹಿಳಾ ಕಾರ್ಯಕರ್ತೆಯರು ಹೈಡ್ರಾಮಾ ಮಾಡಿದ್ದಾರೆ.

ಬಿಬಿಎಂಪಿ ಸಹ ತನ್ನ ವ್ಯಾಪ್ತಿಯಲ್ಲಿ ನಾಮಫಲಕಗಳನ್ನು ಕನ್ನಡಕ್ಕೆ ಪ್ರಾಧಾನ್ಯತೆ ನೀಡುವ ಸಂಬಂಧ ಸಭೆ ನಡೆಸಿ 15 ದಿನದೊಳಗೆ ಸರ್ವೆ ಕಾರ್ಯ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ನೋಟಿಸ್ ನೀಡಲು ನಿರ್ಧರಿಸಿದೆ.
ಅಲ್ಲದೆ ಫೆಬ್ರವರಿ 28ರ ಒಳಗಾಗಿ ಬೋರ್ಡ್ ಗಳನ್ನು ಕನ್ನಡಮಯವಾಗಿ ಮಾಡುವುದಕ್ಕೆ ಕರವೆಗೆ ಭರವಸೆ ನೀಡಿದೆ.

Leave a Comment

Your email address will not be published. Required fields are marked *