Ad Widget .

ದರ್ಗಾದ ಮೇಲೆ ದಾಳಿ… 5 ದತ್ತಮಾಲಾಧಾರಿಗಳ ವಿರುದ್ಧ FIR ದಾಖಲು

ಸಮಗ್ರ ನ್ಯೂಸ್: ಚಿಕ್ಕಮಗಳೂರಿನಲ್ಲಿ ದರ್ಗಾದ ಮೇಲೆ ದಾಳಿ ಮಾಡಿದ್ದ ದತ್ತಮಾಲಾಧಾರಿಗಳ ವಿರುದ್ಧ ತಾಲೂಕಿನ ಲಿಂಗದಹಳ್ಳಿ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. 5ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್​​​ ದಾಖಲಿಸಿರುವ ಪೊಲೀಸರು, ಸಿಸಿಟಿವಿ ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಶಾಂತವೇರಿ ಗ್ರಾಮದ ರಸ್ತೆ ಬದಿಯ ದರ್ಗಾ ಮೇಲೆ ಶಿವಮೊಗ್ಗ ನೋಂದಣಿಯ ವಾಹನದಲ್ಲಿದ್ದ ದತ್ತಮಾಲಾಧಾರಿಗಳು ದಾಳಿ ಮಾಡಿದ್ದರು.

Ad Widget . Ad Widget .

ದತ್ತಜಯಂತಿ ಕೊನೆಯ ದಿನವಾದ ಇಂದು ದತ್ತ ಪಾದುಕೆ ದರ್ಶನದ ವೇಳೆ ದರ್ಗಾದಲ್ಲಿದ್ದ ಗೋರಿಗಳ ಮೇಲೆ ಗುಂಪೊಂದು ದಾಂದಲೆ ನಡೆಸಿದೆ. ದರ್ಗಾದ ಮೇಲಿದ್ದ ಬಟ್ಟೆ ತೆಗೆದು, ವಸ್ತುಗಳನ್ನು ಎಸೆದುಹೋಗಲಾಗಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಈ ಘಟನೆ ಕಂಡುಬಂದಿದೆ. ಪ್ರಶ್ನಿಸಲು ಬಂದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಸ್ಥಳೀಯರು, ಪೊಲೀಸರು ಬರುತ್ತಿದ್ದಂತೆ ಪುಂಡರ ಗುಂಪು ಓಡಿಹೋಗಿದ್ದಾರೆ.

Ad Widget . Ad Widget .

ಪ್ರತಿ ವಾಹನಗಳ ತಪಾಸಣೆ
ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಇಂದು ದತ್ತಪಾದುಕೆ ದರ್ಶನ ಹೋಮ ಪೂಜೆ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದ ದತ್ತಮಾಲಾ ಧಾರಿಗಳು ಆಗಮಿಸಿದ್ದಾರೆ. ಹೀಗಾಗಿ ಚಿಕ್ಕಮಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದು, ದರ್ಗಾಕ್ಕೆ ತೆರಳುತ್ತಿರುವ ಪ್ರತಿ ವಾಹನ ತಪಾಸಣೆ ಮಾಡಲಾಗುತ್ತಿದೆ.

Leave a Comment

Your email address will not be published. Required fields are marked *